ಕಳೆದೊಂದು ಶತಮಾನದಲ್ಲಿ ವಾಹನ ಜಗತ್ತು ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಹೊಸ ಮಾದರಿಯ ವಾಹನಗಳು ಕಾರ್ಯಾಚರಣೆ ನಡೆಸುವ ಸಿದ್ದತೆಯಲ್ಲಿವೆ. ಇದರಲ್ಲಿ ಫೈಯಿಂಗ್ ಕಾರುಗಳು(Flying Cars) ಹೆಚ್ಚು ಕುತೂಹಲ ಮೂಡಿಸಿದ್ದು, ಫೈಯಿಂಗ್ ಕಾರುಗಳನ್ನು ವಾಣಿಜ್ಯ ಹಾಗೂ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ನಿರ್ಮಾಣ ಮಾಡಲಾಗುತ್ತಿದೆ.
ದೆಹಲಿ ಮೂಲದ ಅಸ್ಕಾ (ASKA) ಇಕ್ವಿಪ್ಮೆಂಟ್ ಲಿಮಿಟೆಡ್ ಕಂಪನಿಯು ತನ್ನ ಭವಿಷ್ಯ ಯೋಜನೆಗಳ ಅಡಿಯಲ್ಲಿ ಪ್ಲೈಯಿಂಗ್ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಪ್ಲೈಯಿಂಗ್ ಎಲೆಕ್ಟ್ರಿಕ್ ಕಾರನ್ನು ಕಂಪನಿಯು ಆರಂಭಿಕವಾಗಿ ವಿಪತ್ತು ನಿರ್ವಹಣೆಗಾಗಿ ಬಳಕೆ ಮಾಡುವ ಸಾಧ್ಯತೆಗಳಿವೆ. ಅಸ್ಕಾ ಕಂಪನಿಯು ಸದ್ಯ ವಿಪತ್ತು ನಿರ್ವಹಣಾ ಉತ್ಪನ್ನಗಳ ಜೊತೆಗೆ ಲೈಟಿಂಗ್, ವಿಶೇಷ ಅಗ್ನಿಶಾಮಕ ರಕ್ಷಣಾ ಸಾಧನಗಳು, ಅಗ್ನಿ ಸುರಕ್ಷತಾ ಸಲಕರಣೆಗಳು, ಸಿಬಿಆರ್ ಎನ್ಇ ಸಲಕರಣೆಗಳ ಪೂರೈಕೆ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.
ರಕ್ಷಾಣಾ ವಲಯದಲ್ಲಿನ ಅಗತ್ಯತೆ ತಕ್ಕಂತೆ ಪ್ಲೈಯಿಂಗ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಿದ್ದಪಡಿಸಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಹೊಸ ವಾಹನ ಮಾದರಿಯು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿಯಲಿದೆ. ಸದ್ಯ ಪೋಟೋಟೈಪ್ ಮಾದರಿಯೊಂದಿಗೆ ವಿವಿಧ ಹಂತದ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದೆ. ಈ ವಾಹನವು ಎಲೆಕ್ಟ್ರಿಕ್ ಕಾರ್ ಮತ್ತು ಕ್ವಾಡ್ಕಾಪ್ಟರ್ ವಾಹನ ಮಾದರಿಗಳಲ್ಲಿ ಗುರುತಿಸಿಕೊಳ್ಳಲಿದ್ದು, ಜನವರಿ 5 ರಿಂದ ಜನವರಿ 8 ರವರೆಗೆ ನಡೆಯಲಿರುವ 2023ರ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ ನಲ್ಲಿ ಪ್ರದರ್ಶನಗೊಳಿಸುವ ಸಿದ್ದತೆಯಲ್ಲಿದೆ.
ಹೊಸ ಪ್ಲೈಯಿಂಗ್ ಎಲೆಕ್ಟ್ರಿಕ್ ಕಾರಿನ ಕುರಿತಾಗಿ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ವಾಹನವು ಅತಿ ಕಡಿಮೆ ಅವಧಿಯಲ್ಲಿ ವರ್ಟಿಕಲ್ ಟೇಕಾಫ್ ಮತ್ತು ಲ್ಯಾಂಡಿಂಗ್ ಹಾಗೂ ಶಾರ್ಟ್ ಟೇಕ್ಆಫ್ ಮತ್ತು ಲ್ಯಾಂಡಿಂಗ್ ತಂತ್ರಜ್ಞಾನದೊಂದಿಗೆ ಭವಿಷ್ಯದಲ್ಲಿ ಹೊಸ ಸಂಚಲನ ಮೂಡಿಸುವ ನೀರಿಕ್ಷೆಯಿಲ್ಲಿದೆ. ಹೊಸ ವಾಹನವು ಗರಿಷ್ಠ ಪ್ರಮಾಣ ಲೋಡಿಂಗ್ ಸಾಮಾರ್ಥ್ಯದೊಂದಿಗೆ ಫೋರ್ ಸೀಟರ್ ಸೌಲಭ್ಯ ಹೊಂದಿದ್ದು, ಹಲವಾರು ಹೊಸ ಮಾದರಿಯ ತಂತ್ರಜ್ಞಾನ ಸೌಲಭ್ಯಗಳನ್ನ ನೀಡಲಾಗಿದೆ.
ಹೊಸ ಪ್ಲೈಯಿಂಗ್ ಕಾರಿನಲ್ಲಿ ಅಸ್ಕಾ ಕಂಪನಿಯು ಬೃಹತ್ ಗಾತ್ರ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೊತೆ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 400 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಜೊತೆಗೆ ಇದರಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ನೀಡಿರುವುದರಿಂದ ಕೇವಲ 30 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದ್ದು, ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತದೆ. ಅಸ್ಕಾ ಪ್ಲೈಯಿಂಗ್ ಕಾರ್ ಕೇವಲ ಮೂರು ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಗರಿಷ್ಠ 200 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ.
Published On - 7:08 pm, Tue, 3 January 23