Electric Cars: 2022ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಇವಿ ಕಾರುಗಳಿವು!

|

Updated on: Jan 02, 2023 | 6:25 PM

ಭಾರತದಲ್ಲಿ ಕಳೆದ ವರ್ಷ ಹಲವಾರು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳು ಸಹ ಗಮನಸೆಳೆಯುತ್ತಿದ್ದು, ಸಾಮಾನ್ಯ ಕಾರುಗಳನ್ನೇ ಹಿಂದಿಕ್ಕಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

Electric Cars: 2022ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಇವಿ ಕಾರುಗಳಿವು!
2022ರಲ್ಲಿ ಬಿಡುಗಡೆಯಾದ ಟಾಪ್ 5 ಅತ್ಯುತ್ತಮ ಇವಿ ಕಾರುಗಳಿವು!
Follow us on

ಹೊಸ ಎಲೆಕ್ಟ್ರಿಕ್ ಕಾರುಗಳಲ್ಲಿ(Electric Cars) ಬಜೆಟ್ ಮಾದರಿಗಳ ಜೊತೆ ಐಷಾರಾಮಿ ಕಾರು ಮಾದರಿಗಳು ಸಹ ಬೇಡಿಕೆ ಪಡೆದುಕೊಳ್ಳುತ್ತಿವೆ. ದುಬಾರಿ ಇಂಧನ ಪರಿಣಾಮ ಗ್ರಾಹಕರು ಇದೀಗ ಇವಿ ಕಾರುಗಳತ್ತ ಗಮನಹರಿಸುತ್ತಿದ್ದು, ಹಲವು ಹೊಸ ಇವಿ ಕಾರು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಹೊಸ ಇವಿ ಕಾರು ಮಾದರಿಗಳಲ್ಲಿಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟಾಪ್ 5 ಕಾರುಗಳ ಮಾಹಿತಿಯನ್ನ ಇಲ್ಲಿ ಹಂಚಿಕೊಳ್ಳಲಾಗಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್

2022ರ ಅತ್ಯುತ್ತಮ ಇವಿ ಕಾರುಗಳ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ಟಿಯಾಗೋ ಎಲೆಕ್ಟ್ರಿಕ್ ಮುಂಚೂಣಿಯಲ್ಲಿದೆ. ಈ ಕಾರು ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾದ ಕೇವಲ ಎರಡು ತಿಂಗಳಿನಲ್ಲಿ ಬರೋಬ್ಬರಿ 20 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 19.2 ಕೆವಿಹೆಚ್ ಮತ್ತು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ 250 ರಿಂದ 315 ಕಿ.ಮೀ ಮೈಲೇಜ್ ನೀಡುತ್ತದೆ. ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದೆ.

ಬಿವೈಡಿ ಅಟ್ಟೊ 3 ಎಲೆಕ್ಟ್ರಿಕ್

2022ರಲ್ಲಿ ಬಿಡುಗಡೆಯಾದ ಕಾರುಗಳಲ್ಲಿ ಬಿವೈಡಿ ನಿರ್ಮಾಣದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಕೂಡಾ ಪ್ರಮುಖವಾಗಿದೆ. ಈ ಹೊಸ ಎಲೆಕ್ಟ್ರಿಕ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 33.99 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನಗಳ ಪ್ರೇರಣೆ ಹೊಂದಿದ್ದು, 60.48 ಕಿಲೋ ವ್ಯಾಟ್ ಬ್ಲೇಡ್ ಬ್ಯಾಟರಿ ಪ್ಯಾಕ್ ಜೋಡಣೆ ಪಡೆದುಕೊಂಡಿದೆ. ಈ ಮೂಲಕ ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 521 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರಲ್ಲಿ ಸುರುಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಹೊಂದಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಫೀಚರ್ಸ್ ಜೋಡಿಸಲಾಗಿದೆ.

ಪ್ರವೇಗ್ ಡಿಫೈ ಎಲೆಕ್ಟ್ರಿಕ್

ಸ್ಟಾರ್ಟ್ಅಪ್ ಕಂಪನಿಯಾಗಿರುವ ನಮ್ಮ ಬೆಂಗಳೂರಿನ ಪ್ರವೇಗ್ ಡೈನಾಮಿಕ್ ಕಂಪನಿ ಸಹ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಪ್ರವೇಗ್ ಕಂಪನಿಯು ತನ್ನ ವಿನೂತನ ತಂತ್ರಜ್ಞಾನ ಪ್ರೇರಿತ ಡಿಫೈ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 39.50 ಲಕ್ಷ ಬೆಲೆ ಹೊಂದಿದೆ. 90.9 ಕಿಲೋ ವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಕಾರು ಪ್ರತಿ ಚಾರ್ಜ್ ಗೆ 500 ಕಿ.ಮೀ ಮೈಲೇಜ್ ನೀಡುತ್ತದೆ.

ಮರ್ಸಿಡಿಸ್ ಬೆಂಝ್ ಇಕ್ಯೂಎಸ್ 580

2022ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಇವಿ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ ನಿರ್ಮಾಣದ ಹೊಸ ಇಕ್ಯೂಎಸ್ 580 ಇವಿ ಕೂಡಾ ಅತ್ಯುತ್ತಮವಾಗಿದೆ. ಈ ಎಲೆಕ್ಟ್ರಿಕ್ ಕಾರು ಎಕ್ಸ್ ಶೋರೂಂ ಪ್ರಕಾರ 1.55 ಕೋಟಿ ಬೆಲೆ ಹೊಂದಿದ್ದು, ಈ ಹೊಸ ಕಾರನ್ನು ಭಾರತದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಇವಿ ಕಾರಿನಲ್ಲಿ ಬೆಂಝ್ ಕಂಪನಿಯು ಅತಿದೊಡ್ಡ 107.8 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಿಸಿದ್ದು, ಇದು ಪ್ರತಿಚಾರ್ಜ್ ಗೆ 857 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಈ ಎಲೆಕ್ಟ್ರಿಕ್ ಕಾರಿನಲ್ಲಿ ಫೋರ್-ವ್ಹೀಲ್-ಡ್ರೈವ್, ಫೋರ್-ವ್ಹೀಲ್-ಸ್ಟೀಯರಿಂಗ್ ಸೇರಿದಂತೆ AI ತಂತ್ರಜ್ಞಾನ ನೀಡಲಾಗಿದೆ.

ಪಿಎಂವಿ ಇಎಸ್-ಇ ಇವಿ

ಮುಂಬೈ ಮೂಲದ ಪರ್ಸನಲ್ ಮೊಬಿಲಿಟಿ ವೆಹಿಕಲ್ ಕಂಪನಿಯು ಕೂಡಾ ಇವಿ ವಾಹನ ಉದ್ಯಮಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿದೆ. ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಕಂಪನಿಯು ವಿನೂತನ ವೈಶಿಷ್ಟ್ಯತೆ ಒಳಗೊಂಡ ಇಎಸ್-ಇ ಮೈಕ್ರೊ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದು ಟಾಟಾ ನ್ಯಾನೋ ಕಾರಿಗಿಂತಲೂ ಕಡಿಮೆ ಉದ್ದಳತೆ ಹೊಂದಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಬೆಲೆಯಲ್ಲಿ ಬಿಡುಗಡೆಯಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 48ಬಿ ಬ್ಯಾಟರಿ ಜೋಡಣೆ ಹೊಂದಿದ್ದು, ಪ್ರತಿ ಚಾರ್ಜ್ ಗೆ ಗರಿಷ್ಠ 200 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Published On - 6:22 pm, Mon, 2 January 23