Best Cars: 2022ರಲ್ಲಿ ಅತ್ಯುತ್ತಮ ರಿವ್ಯೂ ಪಡೆದುಕೊಂಡ ಟಾಪ್ 5 ಕಾರುಗಳಿವು!

|

Updated on: Dec 31, 2022 | 8:30 PM

2022ರಲ್ಲಿ ಹಲವಾರು ಹೊಸ ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರಲ್ಲಿ ಕೆಲವು ಕಾರು ಮಾದರಿಗಳು ಅತ್ಯುತ್ತಮ ಗ್ರಾಹಕರ ಬೇಡಿಕೆ ಪಡೆದುಕೊಂಡಿದ್ದು, ಅತ್ಯುತ್ತಮ ರಿವ್ಯೂ ಪಡೆದುಕೊಂಡ ಕಾರುಗಳ ಮಾಹಿತಿ ಇಲ್ಲಿದೆ.

Best Cars: 2022ರಲ್ಲಿ ಅತ್ಯುತ್ತಮ ರಿವ್ಯೂ ಪಡೆದುಕೊಂಡ ಟಾಪ್ 5 ಕಾರುಗಳಿವು!
ಅತ್ಯುತ್ತಮ ರಿವ್ಯೂ ಪಡೆದುಕೊಂಡ ಟಾಪ್ 5 ಕಾರುಗಳು
Follow us on

ಭಾರತದಲ್ಲಿ ಹೊಸ ಕಾರುಗಳಿಗೆ(New Cars) ಭರ್ಜರಿ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಹೊಸ ಕಾರುಗಳಲ್ಲಿ ಸಾಮಾನ್ಯ ಮಾದರಿಗಳ ಜೊತೆಗೆ ಸಿಎನ್ ಜಿ, ಹೈಬ್ರಿಡ್, ಎಲೆಕ್ಟ್ರಿಕ್ ಕಾರುಗಳ ಸಹ ಬಿಡುಗಡೆಗೊಂಡಿವೆ. ಈ ವರ್ಷ ಬಿಡುಗಡೆಯಾಗಿರುವ ಪ್ರಮುಖ ಕಾರುಗಳಲ್ಲಿ ಹಲವು ಮಾದರಿಗಳು ಅತ್ಯುತ್ತಮ ರಿವ್ಯೂ ಪಡೆದುಕೊಂಡಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಇವು ಯಶಸ್ವಿಯಾಗಿವೆ.

ಮಾರುತಿ ಸುಜುಕಿ ಬಲೆನೊ

ಹೊಸ ಕಾರುಗಳಲ್ಲಿ ಈ ವರ್ಷ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಪ್ರಮುಖ ಕಾರು ಮಾದರಿಯೆಂದರೆ ಮಾರುತಿ ಸುಜುಕಿ ಬಲೆನೊ ಹ್ಯಾಚ್ ಬ್ಯಾಕ್. ಹೊಸ ಕಾರು ವಿಮರ್ಶಕರ ಪಟ್ಟಿಯಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಇದು ಈ ಹಿಂದಿನ ಮಾದರಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ ಸುರಕ್ಷತೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಹೊಸ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ವರ್ಷನ್ ನಲ್ಲೂ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.49 ಲಕ್ಷದಿಂದ ರೂ. 9.71 ಲಕ್ಷ ಬೆಲೆ ಹೊಂದಿದೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್

2022ರ ಅತ್ಯುತ್ತಮ ಕಾರುಗಳ ಪಟ್ಟಿಯಲ್ಲಿ ಕಾರು ಮಾದರಿಯೆಂದರೆ ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ಟಿಯಾಗೋ ಎಲೆಕ್ಟ್ರಿಕ್. ಈ ಕಾರು ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾದ ಕೇವಲ ಎರಡು ತಿಂಗಳಿನಲ್ಲಿ ಬರೋಬ್ಬರಿ 20 ಸಾವಿರ ಯುನಿಟ್ ಬುಕಿಂಗ್ ಪಡೆದುಕೊಂಡಿತು. ಹೊಸ ಕಾರಿನಲ್ಲಿ 19.2 ಕೆವಿಹೆಚ್ ಮತ್ತು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ 250 ರಿಂದ 315 ಕಿ.ಮೀ ಮೈಲೇಜ್ ನೀಡುತ್ತದೆ. ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್

2022ರ ಅತ್ಯುತ್ತಮ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಹೊಸ ತಲೆಮಾರಿನ ಸ್ಕಾರ್ಪಿಯೋ ಎನ್ ಕೂಡಾ ಪ್ರಮುಖ ಕಾರು ಮಾದರಿಯಾಗಿದೆ. ಇದು ಅತ್ಯತ್ತಮ ಫೀಚರ್ಸ್ ಗಳೊಂದಿಗೆ ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿದೆ. ಇದು 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು ಮಧ್ಯಮ ಕ್ರಮಾಂಕದ ಎಸ್ ಯುವಿ ಗಳಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.

ಸ್ಕೋಡಾ ಸ್ಲಾವಿಯಾ

2022ರ ಅತ್ಯುತ್ತಮ ಹೊಸ ಕಾರುಗಳ ಪಟ್ಟಿಯಲ್ಲಿಯಲ್ಲಿರುವ ಮತ್ತೊಂದು ಕಾರು ಮಾದರಿಯೆಂದರೆ ಸ್ಕೋಡಾ ಸ್ಲಾವಿಯಾ ಸೆಡಾನ್. ಹೊಸ ಸ್ಲಾವಿಯಾ ಕಾರು ಮಾದರಿಯು 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು ಪ್ರಮುಖ ಸೆಡಾನ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಹೊಸ ಕಾರು ಫೋಕ್ಸ್ ವ್ಯಾಗನ್ ಜೊತೆಗಿನ ಸಹಭಾಗಿತ್ವ ಯೋಜನೆ ನಿರ್ಮಾಣಗೊಂಡಿದ್ದು, ಸ್ಲಾವಿಯಾ ಮತ್ತು ವರ್ಟಸ್ ಕಾರುಗಳು ತಾಂತ್ರಿಕವಾಗಿ ಒಂದೇ ಮಾದರಿಯಾಗಿವೆ.

ಹೋಂಡಾ ಸಿಟಿ ಹೈಬ್ರಿಡ್

ಹೊಸ ಕಾರುಗಳ ಪಟ್ಟಿಯಲ್ಲಿ ವಿಮರ್ಶಕರ ಗಮನಸೆಳೆದ ಮತ್ತೊಂದು ಕಾರು ಮಾದರಿಯೆಂದರೆ ಹೋಂಡಾ ಹೊಸ ಸಿಟಿ ಹೈಬ್ರಿಡ್. ಇದು ಸಾಮಾನ್ಯ ಆವೃತ್ತಿಯ ಟಾಪ್-ಸ್ಪೆಕ್ ಜೆಡ್ಎಕ್ಸ್ ಆಧರಿಸಿ ಬಿಡುಗಡೆಯಾಗಿದೆ. ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಂಡಿದೆ. ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ಶೇ. 40 ರಷ್ಟು ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಗೆ 26.5 ಕಿ.ಮೀ ಮೈಲೇಜ್ ನೀಡುತ್ತದೆ.

Published On - 6:55 pm, Sat, 31 December 22