ಎಲೆಕ್ಟ್ರಿಕ್ ಸ್ಕೂಟರ್(Electric Scooters) ವಿಭಾಗದಲ್ಲಿಯೇ ತನ್ನದೆ ಆದ ಜನಪ್ರಿಯತೆ ಹೊಂದಿರುವ ಎಥರ್ ಎನರ್ಜಿ(Ather Energy) ಕಂಪನಿಯು ಇದೀಗ ಬಜೆಟ್ ಬೆಲೆಯಲ್ಲಿ 450ಎಸ್(450S) ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ 450ಎಕ್ಸ್ ಮಾದರಿಗಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಹೊಸ 450ಎಸ್ ಇವಿ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.129,999 ಬೆಲೆ ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಇದು ಉತ್ತಮ ಪೈಪೋಟಿಯಾಗಲಿದೆ. ಹೊಸ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಥರ್ ಕಂಪನಿಯು 3kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 115 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಈ ಮೂಲಕ ಹೊಸ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದ್ದು, ಹೊಸ ಸ್ಕೂಟರ್ ನಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಗಳನ್ನು ಕೈಬಿಡಲಾಗಿದೆ. ಆದರೆ ಆಸಕ್ತರ ವಿಚಾರ ಅಂದರೆ ಹೊಸ ಸ್ಕೂಟರಿನಲ್ಲಿ ಎಥರ್ ಕಂಪನಿಯು 450ಎಕ್ಸ್ ಮಾದರಿಯಲ್ಲಿರುವಂತೆ ಹಲವು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತ್ಯುತ್ತಮ ರೈಡಿಂಗ್ ಅನುಭವ ನೀಡಲಿದೆ.
ಜೊತೆಗೆ ಎಥರ್ ಕಂಪನಿಯು ಹೊಸ ಸ್ಕೂಟರಿನ ಬೆಲೆಯನ್ನು ಕೇಂದ್ರ ಸರ್ಕಾರದ ಪರಿಷ್ಕೃತ ಫೇಮ್ 2 ಯೋಜನೆಗೆ ಅನುಗುಣವಾಗಿ ನಿಗದಿಪಡಿಸಿದ್ದು, ಇದರ ಹೊರತಾಗಿ ಗ್ರಾಹಕರು ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಸ್ಥಳೀಯ ಎಲೆಕ್ಟ್ರಿಕ್ ವಾಹನ ನೀತಿ ಯೋಜನೆಗಳಿಂದಲೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇವಿ ಖರೀದಿದಾರರಿಗೆ ಹೆಚ್ಚಿನ ಪ್ರಯೋಜನಗಳು ಲಭ್ಯವಿದ್ದು, ಇದು ಇವಿ ಖರೀದಿ ವೆಚ್ಚವನ್ನು ತಗ್ಗಿಸಲು ಸಹಕಾರಿಯಾಗಿವೆ.
ಇದನ್ನೂ ಓದಿ: ಸಬ್ಸಿಡಿ ಕಡಿತ: ಓಲಾ ಎಸ್1 ಮತ್ತು ಎಸ್ 1 ಪ್ರೊ ಇವಿ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ
ಬುಕಿಂಗ್ ಮತ್ತು ವಿತರಣೆ ಯಾವಾಗ?
ಹೊಸ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಎಥರ್ ಕಂಪನಿಯು ಮುಂದಿನ ತಿಂಗಳು ಜುಲೈ ಆರಂಭದಲ್ಲಿ ಪ್ರಾರಂಭಿಸಬಹುದಾಗಿದ್ದು, ಸ್ಕೂಟರ್ ವಿತರಣೆಯು ಅಗಸ್ಟ್ ಮಧ್ಯಂತರ ಆರಂಭವಾಗಬಹುದಾಗಿದೆ. ಇದರೊಂದಿಗೆ ಎಥರ್ ಕಂಪನಿಯು ನಗರ ಪ್ರಯಾಣಕ್ಕೆ ಅನುಕೂಲಕವಾಗುವಂತೆ ಹೊಸ ಮಾದರಿಯನ್ನು ಬಿಡುಗಡೆ ಮಾಡಿದ್ದು, ಸಾಂಪ್ರದಾಯಿಕ 125 ಸಿಸಿ ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇದು ಉತ್ತಮ ಕಾರ್ಯಕ್ಷಮತೆ ಮತ್ತು ಸವಾರಿ ಅನುಭವದ ಜೊತೆಗೆ ಕಡಿಮೆ ಬೆಲೆಯ ನಿರ್ವಹಣಾ ವೆಚ್ಚ ಹೊಂದಿದೆ.