ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

Praveen Sannamani

|

Updated on:May 24, 2023 | 10:07 PM

ಸಿಂಪಲ್ ಎನರ್ಜಿ ಕಂಪನಿಯು ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಭರ್ಜರಿ ಮೈಲೇಜ್ ನೀಡಲಿದೆ.

Follow us

ಭಾರತದಲ್ಲಿ ಇವಿ ಸ್ಕೂಟರ್ ಗಳ(Electric Scooters) ಮಾರಾಟ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಸಿಂಪಲ್ ಎನರ್ಜಿ(Simple Energy) ಕಂಪನಿ ಕೂಡಾ ತನ್ನ ವಿನೂತನ ಸಿಂಪಲ್ ಒನ್(Simple One) ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿರುವ ಇತರೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಪಡೆದುಕೊಂಡಿದ್ದು, ಬೆಲೆಯಲ್ಲೂ ಗಮನಸೆಳೆಯುತ್ತಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಇವಿ ವಾಹನಗಳು ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೊಸ ಇವಿ ವಾಹನಗಳಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದೀಗ ಸಿಂಪಲ್ ಎನರ್ಜಿ ಕೂಡಾ ತನ್ನ ಬಹುನೀರಿಕ್ಷಿತ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಸಿಂಪಲ್ ಎನರ್ಜಿ ನಿರ್ಮಾಣದ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಮೈಲೇಜ್ ನೀಡಲಿದ್ದು, ಇದು ಇವಿ ಸ್ಕೂಟರ್ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಯಲ್ಲಿ ಹೊಸ ಎಥರ್ 450ಎಕ್ಸ್ ಬೆಸ್ ವೆರಿಯೆಂಟ್ ಬಿಡುಗಡೆ

ಹೌದು, ಭರ್ಜರಿ ಮೈಲೇಜ್ ಮೂಲಕ ಬಿಡುಗಡೆಗೂ ಮುನ್ನವೇ ಭಾರೀ ಸುದ್ದಿಯಾಗಿದ್ದ ಸಿಂಪಲ್ ಒನ್ ಇವಿ ಸ್ಕೂಟರ್ ಇದೀಗ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಇವಿ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.45 ಲಕ್ಷ ಬೆಲೆ ಹೊಂದಿದ್ದು, ಇದು ಡ್ಯುಯಲ್ ಬ್ಯಾಟರಿ ಜೋಡಣೆ ಹೊಂದಿದೆ. ಹೊಸ ಇವಿ ಸ್ಕೂಟರಿನಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಒಟ್ಟು 5 ಕೆವಿಹೆಚ್ ಬ್ಯಾಟರಿ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಬರೋಬ್ಬರಿ 212 ಕಿ.ಮೀ ಮೈಲೇಜ್ ನೀಡುತ್ತದೆ.

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ ಹೊಂದಿದ್ದು, ಇದು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದೆ. ಹೊಸ ಸ್ಕೂಟರ್ ಇಕೋ, ರೈಡ್, ಡ್ಯಾಶ್ ಮತ್ತು ಸೊನಿಕ್ ರೈಡ್ ಮೋಡ್ ಗಳನ್ನು ಹೊಂದಿದ್ದು, 11.39 ಹಾರ್ಸ್ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರಲಿದೆ. ಇದರೊಂದಿಗೆ ಹೊಸ ಸ್ಕೂಟರ್ ಡ್ಯುಯಲ್ ಬ್ಯಾಟರಿಯೊಂದಿಗೆ 134 ಕೆ.ಜಿ ತೂಕ ಹೊಂದಿದ್ದು, ಕೇವಲ 2.77 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ಸ್ಪೀಡ್ ಸಾಧಿಸುತ್ತದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದ ಟಿವಿಎಸ್ ಐಕ್ಯೂಬ್

ಇನ್ನು ಹೊಸ ಇವಿ ಸ್ಕೂಟರಿನಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಫಾಸ್ಟ್ ಚಾರ್ಜಿಂಗ್ ಆಯ್ಕೆ ಸಹ ನೀಡಿದ್ದು, ಇದಕ್ಕಾಗಿ 750 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಪೋರ್ಟ್ ನೀಡಲಾಗುತ್ತಿದೆ. ಇದಕ್ಕಾಗಿ ಗ್ರಾಹಕರು ಹೆಚ್ಚುವರಿಯಾಗಿ ರೂ. 13 ಸಾವಿರ ಪಾವತಿಸಬೇಕಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 5 ಗಂಟೆ 54 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಬಹುದಾಗಿದೆ. ಈ ಮೂಲಕ ಹೊಸ ಇವಿ ಸ್ಕೂಟರ್ ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, 7 ಇಂಚಿನ ಟಚ್ ಸ್ಕ್ರೀನ್ ಟಿಎಫ್ ಟಿ ಗಮನಸೆಳೆಯುತ್ತದೆ. ಇದರಲ್ಲಿ ಹಲವಾರು ಕನೆಕ್ಟೆಡ್ ಸೌಲಭ್ಯಗಳಿದ್ದು, ನ್ಯಾವಿಗೇಷನ್, ಮ್ಯೂಜಿಕ್ ಮತ್ತು ಒಟಾ ಅಪ್ ಡೇಟ್ ನೀಡಲಾಗಿದೆ.

ಜೊತೆಗೆ ಹೊಸ ಇವಿ ಸ್ಕೂಟರಿನಲ್ಲಿ ಆಲ್ ಎಲ್ಇಡಿ ಲೈಟಿಂಗ್ಸ್, 30 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಬೂಟ್ ಸ್ಪೆಸ್ ಮತ್ತು 12 ಇಂಚಿನ ವ್ಹೀಲ್ ನೀಡಲಾಗಿದೆ. ಈ ಮೂಲಕ ಹೊಸ ಇವಿ ಸ್ಕೂಟರ್ ಎಥರ್ 450ಎಕ್ಸ್ ಮತ್ತು ಓಲಾ ಎಸ್1 ಪ್ರೊ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಮುಂಬರುವ ಜೂನ್ ನಲ್ಲಿ ಹೊಸ ಸ್ಕೂಟರ್ ವಿತರಣೆ ಆರಂಭವಾಗಲಿದೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada