AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Audi Q8 e-tron: ಆಡಿ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ

ಆಡಿ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Audi Q8 e-tron: ಆಡಿ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ
ಆಡಿ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ
Praveen Sannamani
|

Updated on: Aug 19, 2023 | 8:57 PM

Share

ಐಷಾರಾಮಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ(Audi India) ಕಂಪನಿಯು ತನ್ನ ಹೊಸ ಕ್ಯೂ8 ಇ-ಟ್ರಾನ್(Q8 e-tron) ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.14 ಕೋಟಿ ಆರಂಭಿಕ ಬೆಲೆ ಹೊಂದಿದೆ.

ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯು ಗ್ರಾಹಕರ ಬೇಡಿಕೆ ಆಧರಿಸಿ ಸ್ಟ್ಯಾಂಡರ್ಡ್ ಎಸ್ ಯುವಿ ಮತ್ತು ಸ್ಪೋರ್ಟ್ ಬ್ಯಾಕ್ ಕೂಪೆ ಶೈಲಿಯಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಸಾಮಾನ್ಯ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 1.14 ಕೋಟಿ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಆವೃತ್ತಿಯು ರೂ. 1.30 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ಬಿಡುಗಡೆಯೊಂದಿಗೆ ಈಗಾಗಲೇ ಬುಕಿಂಗ್ ಕೂಡಾ ಆರಂಭವಾಗಿದ್ದು, ಆಸಕ್ತ ಗ್ರಾಹಕರು ರೂ. 5 ಲಕ್ಷ ಮುಂಗಡ ಪಾವತಿಯೊಂದಿಗೆ ಬುಕಿಂಗ್ ಸಲ್ಲಿಸಬಹುದಾಗಿದೆ.

ಹೊಸ ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್ ಎಸ್ ಯುವಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯು 50 ಮತ್ತು 55 ವೆರಿಯೆಂಟ್ ಗಳನ್ನು ಹೊಂದಿದ್ದರೆ ಸ್ಪೋರ್ಟ್ ಬ್ಯಾಕ್ ಮಾದರಿಯು ಸಹ 50 ಮತ್ತು 55 ವೆರಿಯೆಂಟ್ ಹೊಂದಿದ್ದು, 55 ವೆರಿಯೆಂಟ್ ನಲ್ಲಿ ಈ ಬಾರಿ ಆಡಿ ಕಂಪನಿಯು ಹೆಚ್ಚಿನ ಮೈಲೇಜ್ ಪ್ರೇರಿತ 114kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿವೆ. ಹಾಗೆಯೇ 50 ವೆರಿಯೆಂಟ್ ಗಳಲ್ಲಿ ಈ ಬಾರಿ 95kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಪ್ರತಿ ಚಾರ್ಜ್ ಗೆ 95kWh ಬ್ಯಾಟರಿ ಹೊಂದಿರುವ ವೆರಿಯೆಂಟ್ ಗಳು 491 ಕಿ.ಮೀ ನಿಂದ ಗರಿಷ್ಠ 582 ಕಿ.ಮೀ ಮೈಲೇಜ್ ನೀಡುತ್ತವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ನಾಲ್ಕು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್

ಹಾಗೆಯೇ 114kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಸ್ಪೋರ್ಟ್ ಬ್ಯಾಕ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 505 ಕಿ.ಮೀ ನಿಂದ 600 ಕಿ.ಮೀ ಮೈಲೇಜ್ ನೀಡಲಿದ್ದು, ಇವು ಭರ್ಜರಿ ಮೈಲೇಜ್ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿವೆ. 55 ವೆರಿಯೆಂಟ್ ಗಳು 402 ಹಾರ್ಸ್ ಪವರ್ ಮತ್ತು 664 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇವು ಕೇವಲ 5.6 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ಸ್ಪೀಡ್ ನೊಂದಿಗೆ 200 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯ ಹೊಂದಿವೆ.

ಕ್ಯೂ8 ಇ-ಟ್ರಾನ್ ಕಾರಿನಲ್ಲಿ ಆಡಿ ಕಂಪನಿಯು ಚಾರ್ಜಿಂಗ್ ಸೌಲಭ್ಯಕ್ಕಾಗಿ 22kW ಎಸಿ ಚಾರ್ಜರ್ ಮತ್ತು 170kW ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದ್ದು, ಇದರಲ್ಲಿ ಎಸಿ ಚಾರ್ಜರ್ ಮೂಲಕ ಗರಿಷ್ಠ 6 ಗಂಟೆಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡಬಹುದಾಗಿದೆ.

ಇದನ್ನೂ ಓದಿ: ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ನಡುವೆ ಭರ್ಜರಿ ಪೈಪೋಟಿ ಶುರು!

ಹಾಗೆಯೇ ಹೊಸ ಕಾರುಗಳು ಈ ಬಾರಿ ಹಲವಾರು ಸುಧಾರಿತ ಫೀಚರ್ಸ್ ಹೊಂದಿದ್ದು, ಬದಲಾವಣೆಗೊಳಿಸಲಾದ 2ಡಿ ವಿನ್ಯಾಸ ಲೋಗೊ, ಸ್ಪೋರ್ಟಿ ಬಂಪರ್, ಸ್ಪೋರ್ಟಿ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್ಸ್, 20 ಇಂಚಿನ ಅಲಾಯ್ ವ್ಹೀಲ್, ಬ್ಲ್ಯಾಕ್ ಔಟ್ ಬಿ ಪಿಲ್ಲರ್ ಹೊಂದಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಬದಲಾವಣೆಗಳನ್ನು ನೀಡಲಾಗಿದ್ದು, 10.1 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 8.6 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ಮಲ್ಟಿ ಜೋನ್ ಹ್ವಾಕ್ ಸಿಸ್ಟಂ ಸೇರಿದಂತೆ ವಿವಿಧ ಒಂಬತ್ತು ಬಣ್ಣಗಳ ಆಯ್ಕೆ ಹೊಂದಿದೆ.