Auto Expo 2025 : ಹೊಸ ನವೀಕರಣದೊಂದಿಗೆ ಕಿಯಾ ಇವಿ6 ಫೇಸ್‌ಲಿಫ್ಟ್ ಅನಾವರಣ, ಕೇವಲ 18 ನಿಮಿಷಗಳಲ್ಲಿ ಶೇ. 80 ಚಾರ್ಜ್ ಆಗೋದು ಗ್ಯಾರಂಟಿ

ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 ರಲ್ಲಿ ಕಿಯಾ ಇವಿ6 ಫೇಸ್‌ಲಿಫ್ಟ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಹೊಂದಿರುವ ಈ ಕಾರು ಹಿಂದಿನ ಆವೃತ್ತಿಗೆ ಹೋಲಿಸಿದರೆ ಪೂರ್ಣ ಚಾರ್ಜ್‌ನಲ್ಲಿ ಹೆಚ್ಚಿನ ಶ್ರೇಣಿಯನ್ನು ಹೊಂದಿದ್ದು, ದೊಡ್ಡ ಬ್ಯಾಟರಿ ಪ್ಯಾಕ್‌ನ ಸಂಯೋಜನೆಯೊಂದಿಗೆ ಡ್ರೈವ್‌ಟ್ರೇನ್‌ ಬದಲಾವಣೆ ಮಾಡಲಾಗಿದೆ. ಹಾಗಾದ್ರೆ ಈ ಕಿಯಾ ಇವಿ6 ಫೇಸ್‌ಲಿಫ್ಟ್ ಆವೃತ್ತಿಯೂ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Auto Expo 2025 : ಹೊಸ ನವೀಕರಣದೊಂದಿಗೆ ಕಿಯಾ ಇವಿ6 ಫೇಸ್‌ಲಿಫ್ಟ್ ಅನಾವರಣ, ಕೇವಲ 18 ನಿಮಿಷಗಳಲ್ಲಿ ಶೇ. 80 ಚಾರ್ಜ್ ಆಗೋದು ಗ್ಯಾರಂಟಿ
Kia Unveils Ev6 Facelift
Follow us
ಸಾಯಿನಂದಾ
| Updated By: Vinay Bhat

Updated on:Jan 18, 2025 | 4:43 PM

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿ ಕಿಯಾವು ಹೊಸ ಇವಿ 6 ಫೇಸ್ ಲಿಫ್ಟನ್ನು ಅನಾವರಣಗೊಳಿಸಿದೆ. ಈ ಅತ್ಯಾಧುನಿಕ ಕಾರು, 27 ಸುಧಾರಿತ ಸುರಕ್ಷತೆ ಮತ್ತು ಚಾಲಕ ಸಹಾಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ADAS 2.0 ಪ್ಯಾಕೇಜ್‌ನೊಂದಿಗೆ ಸಜ್ಜುಗೊಂಡಿದೆ. ಹಿಂದಿನ ಇವಿ 6 ಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.

ಕಿಯಾ ಇವಿ 6 ಫೇಸ್ ಲಿಫ್ಟ್ ವಿಶೇಷತೆಗಳೇನು?

ಕಿಯಾ ಇವಿ 6 ಫೇಸ್ ಲಿಫ್ಟ್ ನಲ್ಲಿ 19-ಇಂಚಿನ ಮಿಶ್ರಲೋಹದ ಚಕ್ರಗಳ ವಿನ್ಯಾಸವನ್ನು ಕಾಣಬಹುದು. ಇದು 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3 ಇಂಚಿನ ಡ್ರೈವರ್ ಡಿಸ್ಪ್ಲೇ, 12 ಇಂಚಿನ ಹೆಡ್ಸ್ ಅಪ್ ಡಿಸ್ಪ್ಲೇ (HUD) ಯನ್ನು ಹೊಂದಿದೆ. ಅದರೊಂದಿಗೆ 15W ವೈರ್‌ಲೆಸ್ ಫೋನ್ ಚಾರ್ಜರ್, ಆಗ್ಮೆಂಟೆಡ್ ರಿಯಾಲಿಟಿ (AR) ಆಧಾರಿತ ನ್ಯಾವಿಗೇಶನ್ ಹಾಗೂ ಡಿಜಿಟಲ್ ಕೀ ವೈಶಿಷ್ಟ್ಯವನ್ನು ಸಹ ಹೊಂದಿದೆ. ಅದಲ್ಲದೇ ಇವಿ6 ಹೊಸ ಹೆಡ್‌ಲೈಟ್‌ಗಳು, ಬಂಪರ್, ಮಿಶ್ರಲೋಹದ ಚಕ್ರಗಳು, ಇದು ಸ್ಟೀರಿಂಗ್ ವೀಲ್, 12.3 ಇಂಚಿನ ಟಚ್‌ಸ್ಕ್ರೀನ್ ನೊಂದಿಗೆ ನೋಡಲು ಆಕರ್ಷಕವಾಗಿದೆ.

ಮಾರುತಿ ಸುಜುಕಿಯ ಬಹುನಿರೀಕ್ಷಿತ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ ಬಿಡುಗಡೆ: 500 ಕಿಮೀಗಿಂತಲೂ ಹೆಚ್ಚು ವ್ಯಾಪ್ತಿ

325 PS ಪವರ್ ಮತ್ತು 605 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 84 kWh ಬ್ಯಾಟರಿ ಪ್ಯಾಕ್‌ನೊಂದಿಗೆ , 350-kW ಸ್ಪೀಡ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್ ಮಾಡಬಹುದಾಗಿದೆ. ಹಾಗಾಗಿ ಮಧ್ಯದಲ್ಲಿ ಚಾರ್ಜಿಂಗ್ ಮುಗಿದರೂ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲ, ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಈ ಹೊಸ ಇವಿ6 ಯೂ ಪವರ್ ಫುಲ್ ಎಲೆಕ್ಟ್ರಿಕ್ ವಾಹನ ಇದಾಗಿದೆ. ನವೀಕರಿಸಿದ ಕಿಯಾ ಇವಿ6 ಫೇಸ್ ಲಿಫ್ಟ್ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ವರ್ಷದ ಮಾರ್ಚ್‌ನಲ್ಲಿ ಇವಿ 6 ಫೇಸ್ ಲಿಫ್ಟ್ ಕಾರಿನ ಆರಂಭಿಕ ಬೆಲೆಯನ್ನು ಘೋಷಿಸಲಾಗುತ್ತದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sat, 18 January 25

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ