Bajaj Pulsar 125: ಪಲ್ಸರ್ 125 ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ ಮಾಡಿದ ಬಜಾಜ್

|

Updated on: Nov 17, 2022 | 3:02 PM

ಬಜಾಜ್ ಆಯೋ ಕಂಪನಿಯು ತನ್ನ ಜನಪ್ರಿಯ ದ್ವಿಚಕ್ರ ವಾಹನ ಮಾದರಿಯಾದ ಪಲ್ಸರ್ 125 ಸರಣಿ ಮಾದರಿಯಲ್ಲಿ ಹೊಸದಾಗಿ ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ ಮಾಡಿದೆ.

Bajaj Pulsar 125: ಪಲ್ಸರ್ 125 ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ ಮಾಡಿದ ಬಜಾಜ್
ಪಲ್ಸರ್ 125 ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ ಮಾಡಿದ ಬಜಾಜ್
Follow us on

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ(Bajaj Auto) ಕಂಪನಿಯು ಪಲ್ಸರ್ 125 ಸರಣಿ ಮಾದರಿಯಲ್ಲಿ ಹೊಸದಾಗಿ ಕಾರ್ಬನ್ ಫೈಬರ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 89,245 ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಎರಡು ವೆರಿಯೆಂಟ್ ಹೊಂದಿದ್ದು, ಸ್ಲ್ಪಿಟ್ ಸೀಟ್ ಮತ್ತು ಸಿಂಗಲ್ ಪೀಸ್ ಸೀಟ್ ವೆರಿಯೆಂಟ್ ಹೊಂದಿದೆ.

ಹೊಸ ಬೈಕ್ ಆವೃತ್ತಿಯಲ್ಲಿ ಸ್ಲ್ಪೀಟ್ ಸೀಟ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 91,642 ಬೆಲೆ ಹೊಂದಿದ್ದು, ಹೊಸ ಬೈಕ್ ಮಾದರಿಯು ಸ್ಪೋರ್ಟಿ ಗ್ರಾಫಿಕ್ಸ್ ನೊಂದಿಗೆ ಬ್ಲ್ಯೂ ಮತ್ತು ರೆಡ್ ಬಣ್ಣಗಳ ಆಯ್ಕೆ ಹೊಂದಿದೆ. ಹಾಗೆಯೇ ಹೊಸ ಮಾದರಿಯಲ್ಲಿ ಬ್ಲ್ಯಾಕ್ ಬೆಸ್ ಕೋಟ್ ಮತ್ತು ಕಾರ್ಬನ್ ಫೈಬರ್ ಗ್ರಾಫಿಕ್ಸ್ ಹೊಂದಿದ್ದು, ಸ್ಪೋರ್ಟಿ ಲುಕ್ ಹೆಚ್ಚಿಸಲಿದೆ. ಹೊಸ ಬೈಕಿನ ಟೈರ್, ಫ್ಯೂಲ್ ಟ್ಯಾಂಕ್ ಮತ್ತು ಪ್ಯಾನೇಲ್ ಮೇಲೆ ಫೈಬರ್ ಗ್ರಾಫಿಕ್ಸ್ ನೀಡಲಾಗಿದ್ದು, ಇದು ಸಾಮಾನ್ಯ ಮಾದರಿಗಿಂತ ಹೆಚ್ಚು ಆಕರ್ಷಕವಾಗಿದೆ.

ಇದನ್ನೂ ಓದಿ: ಸೂಪರ್ ಮಿಟಿಯೋರ್ 650 ಅನಾವರಣಗೊಳಿಸಿದ ರಾಯಲ್ ಎನ್‌ಫೀಲ್ಡ್

ಎಂಜಿನ್ ಮತ್ತು ಪರ್ಫಾಮೆನ್ಸ್

ಕಾರ್ಬನ್ ಫೈಬರ್ ಎಡಿಷನ್ ನಲ್ಲಿ ಗ್ರಾಫಿಕ್ಸ್ ಮತ್ತು ಹೊಸ ಬಣ್ಣಗಳ ಹೊರತಾಗಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡದ ಬಜಾಜ್ ಕಂಪನಿಯು 124.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆ ಮುಂದುವರೆಸಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 11.64 ಹಾರ್ಸ್ ಪವರ್ ಮತ್ತು 10.80 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜೊತೆಗೆ ಹೊಸ ಬೈಕಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಟ್ವಿನ್ ಗ್ಯಾಸ್-ಚಾರ್ಜ್ಡ್ ರಿಯರ್ ಶಾರ್ಕ್ಸ್ ನೀಡಲಾಗಿದ್ದು, 17 ಇಂಚಿನ ಅಲಾಯ್ ವ್ಹೀಲ್ ನೊಂದಿಗೆ 80/100 ಎಕ್ಸ್ 17 ಫ್ರಂಟ್ ಟ್ಯೂಬ್ ಲೆಸ್ ಟೈರ್ ಮತ್ತು 100/90-17 ರಿಯರ್ ಟ್ಯೂಬ್ ಲೆಸ್ ಟೈರ್ ನೀಡಿದೆ. ಇದರೊಂದಿಗೆ ಸುರಕ್ಷತೆಗಾಗಿ ಹೊಸ ಬೈಕಿನ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.

ಇದನ್ನೂ ಓದಿ: ಬಿಡುಗಡೆಯಾಗಲಿದೆ ಬಲಶಾಲಿ ಹೀರೋ ಎಕ್ಸ್ ಪಲ್ಸ್ 200ಟಿ 4ವಿ ವರ್ಷನ್

ಡಿಸೈನ್ ಮತ್ತು ಫೀಚರ್ಸ್

ಪಲ್ಸರ್ 125 ಕಾರ್ಬನ್ ಫೈಬರ್ ಆವೃತ್ತಿಯಲ್ಲಿ ಬಜಾಜ್ ಕಂಪನಿಯು ಎಲ್ಇಡಿ ಡಿಆರ್ ಎಲ್ ಗಳಿಂದ ಎರಡೂ ಬದಿಯ ಮೇಲ್ಭಾಗದಲ್ಲಿ ಸುತ್ತುವರಿದಿರುವ ಸಿಂಗಲ್ ಪಾಡ್ ಹೆಡ್‌ಲೈಟ್ ಜೋಡಿಸಿದ್ದು, ಸ್ಪ್ಲಿಟ್ ಸೀಟ್ ಆವೃತ್ತಿಯು ಸ್ಪ್ಲಿಟ್ ಗ್ರ್ಯಾಬ್ ರೈಲ್‌ಗಳನ್ನು ಪಡೆದುಕೊಂಡರೆ ಸಿಂಗಲ್ ಸೀಟ್ ಆವೃತ್ತಿಯು ಸಿಂಗಲ್-ಪೀಸ್ ಗ್ರಾಬ್ ರೈಲ್ ಹೊಂದಿರಲಿದೆ.

ಹಾಗೆಯೇ ಹೊಸ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ ಬ್ಲ್ಯಾಕ್ ಔಟ್ ಸೈಡ್ ಸ್ಲಂಗ್ಸ್ ಎಕ್ಸಾಸ್ಟ್, ಸೆಮಿ ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದ್ದು, ಇದು ಟಿವಿಎಸ್ ರೈಡರ್ 125 ಸೇರಿದಂತೆ ಪ್ರಮುಖ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Published On - 2:56 pm, Thu, 17 November 22