EICMA 2022: ಸೂಪರ್ ಮಿಟಿಯೋರ್ 650 ಅನಾವರಣಗೊಳಿಸಿದ ರಾಯಲ್ ಎನ್‌ಫೀಲ್ಡ್
ರಾಯಲ್ ಎನ್‌ಫೀಲ್ಡ್ ಕಂಪನಿಯ ತನ್ನ ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕ್ ಮಾದರಿಯನ್ನು 2022ರ ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಆಕ್ಸೆಸರಿಸ್ ಎಕ್ಸಿಬಿಷನ್ ನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ.
ಕ್ಲಾಸಿಕ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್(Royal Enfield) ಕಂಪನಿಯು ಇಟಾಲಿಯ ಮಿಲಾನಾದಲ್ಲಿ 2022ರ EICMA(ಅಂತಾರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಆಕ್ಸೆಸರಿಸ್ ಎಕ್ಸಿಬಿಷನ್) ನಲ್ಲಿ ಹೊಸ ಸೂಪರ್ ಮಿಟಿಯೋರ್ 650(Super Meteor 650) ಬೈಕ್ ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಯು ಇದೇ ತಿಂಗಳಾಂತ್ಯಕ್ಕೆ ನಡೆಯಲಿರುವ 2022ರ ರೈಡರ್ ಮೆನಿಯಾದಲ್ಲೂ ಸಹ ಪ್ರದರ್ಶನಗೊಳ್ಳಲಿದೆ.
ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕ್ ಮಾದರಿಯನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಪರಿಚಯಿಸಲಿದ್ದು, ಹೊಸ ಬೈಕ್ ಮಾದರಿಯು 650 ಸಿಸಿ ಬೈಕ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಸೂಪರ್ ಮಿಟಿಯೋರ್ 650 ಕ್ರೂಸರ್ ಬೈಕಿನಲ್ಲಿ 648 ಸಿಸಿ ಪ್ಯಾರಾಲೆಲ್-ಟ್ವಿನ್ ಎಂಜಿನ್ ಜೋಡಣೆ ಪಡೆದುಕೊಂಡಿದ್ದು, ಇದು 6-ಸ್ಪೀಡ್ ಗೇರ್ ಬಾರ್ಕ್ಸ್ ನೊಂದಿಗೆ 46.3 ಬಿಎಚ್ ಪಿ ಮತ್ತು 52.3 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ನ್ಯೂ ಸ್ಟ್ರೀಲ್ ಟ್ಯುಬಲರ್ ಸ್ಪೀನ್ ಫ್ರೇಮ್ ಹೊಂದಿರುವ ಹೊಸ ಬೈಕಿನಲ್ಲಿ 43 ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಮತ್ತು 120 ಎಂಎಂ ಫ್ರಂಟ್ ಟ್ರಾವೆಲ್ ಟ್ವಿನ್ ಶಾಕ್ ಮತ್ತು ಹಿಂಬದಿಯಲ್ಲಿ 101 ಎಂಎಂ ಟ್ರಾವೆಲ್ ಸಸ್ಷೆಂಷನ್ ನೀಡಲಾಗಿದೆ.
ಇದನ್ನೂ ಓದಿ: ಹೊಸ ಎಲ್ಎಂಎಲ್ ಸ್ಟಾರ್ ಇವಿ ಸ್ಕೂಟರ್ ಖರೀದಿ ಬುಕಿಂಗ್ ಶುರು
ಉದ್ದಳತೆ ಮತ್ತು ಗ್ರೌಂಡ್ ಕ್ಲಿಯೆರೆನ್ಸ್
ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯು ಕ್ರೂಸರ್ ಬೈಕ್ ಪ್ರಿಯರಾಗಿಯೇ ವಿಶೇಷವಾಗಿ ಸಿದ್ದವಾಗಿದ್ದು, ಹೊಸ ಬೈಕ್ ಮಾದರಿಯು 2,260 ಉದ್ದ, 890 ಎಂಎಂ ಅಗಲ, 1,155 ಎಂಎಂ ಎತ್ತರ, 740 ಎಂಎಂ ಸೀಟ್ ಎತ್ತರ ಮತ್ತು 135 ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 15.7 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ನೀಡಲಾಗಿದ್ದು, ಒಟ್ಟಾರೆಯಾಗಿ ಹೊಸ ಬೈಕ್ ಬರೋಬ್ಬರಿ 241 ಕೆ.ಜಿ ತೂಕ ಹೊಂದಿರಲಿದೆ.
ಡಿಸೈನ್ ಮತ್ತು ಫೀಚರ್ಸ್
650 ಟ್ವಿನ್ ಬೈಕ್ ಮಾದರಿಗಳ ಜೊತೆ ಸ್ಟ್ಯಾಂಡರ್ಡ್ ಮಿಟಿಯೋರ್ ಆಧರಿಸಿರುವ ಹೊಸ ಬೈಕ್ ಮಾದರಿಯು ಅತ್ಯುತ್ತಮ ಡಿಸೈನ್ ಪಡೆದುಕೊಂಡಿದ್ದು, ಸ್ಪೋಟಿಯಾಗಿರುವ ಎಲ್ಇಡಿ ಲೈಟಿಂಗ್ಸ್ ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಕ್ಲಾಸಿಕ್ ಸ್ಟೈಲಿಷ್ ಲುಕ್ ಹೊಂದಿರುವ ಹೆಡ್ ಲ್ಯಾಂಪ್, ವೈಡ್ ಹ್ಯಾಂಡಲ್ ಬಾರ್, ಟಿಯರ್ ಡ್ರಾಪ್ ಶೈಲಿಯ ಫ್ಯೂಲ್ ಟ್ಯಾಂಕ್, ಫೀಟ್ ಫಾರ್ವಡ್ ಫುಟ್ ಕಂಟ್ರೋಲ್ ಸೌಲಭ್ಯಗಳಿವೆ.
ಇದನ್ನೂ ಓದಿ: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!
ಸುರಕ್ಷಾ ಸೌಲಭ್ಯಗಳು
ಹೊಸ ಸೂಪರ್ ಮಿಟಿಯೋರ್ 650 ಬೈಕ್ ಮಾದರಿಯಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು 300 ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೆ ಟು ಪಿಸ್ಟನ್ ಕ್ಯಾಲಿಪರ್ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಕಂಪನಿಯು ಡ್ಯುಯಲ್ ಚಾನೆಲ್ ಎಬಿಎಸ್, 19 ಇಂಚಿನ ಫ್ರಂಟ್ ವ್ಹೀಲ್ ಜೊತೆ 100/90 -19M/C 57H ಟ್ಯೂಬ್ ಲೆಸ್ ಟೈರ್ ಮತ್ತು 16 ಇಂಚಿನ ರಿಯರ್ ವ್ಹೀಲ್ ಜೊತೆ 150/80 B16 M/C 71H ಟ್ಯೂಬ್ ಲೆಸ್ ಟೈರ್ ಹೊಂದಿರಲಿದೆ.
Published On - 7:11 pm, Tue, 8 November 22