Audi Q5 Special Edition: ಕ್ಯೂ5 ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಆಡಿ!
ಆಡಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಕ್ಯೂ5 ಎಸ್ ಯುವಿಯಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಡಿ ಇಂಡಿಯಾ(Audi India) ಕಂಪನಿಯು ಕ್ಯೂ5 ಸ್ಪೆಷಲ್ ಎಡಿಷನ್(Q5 Special Edition) ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 67.05 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಟೆಕ್ನಾಲಜಿ ವೆರಿಯೆಂಟ್ ಆಧರಿಸಿದ್ದು, ಹೊಸ ಕಾರಿನಲ್ಲಿ ವಿಶೇಷವಾಗಿ ಡಿಸ್ಟ್ರಿಕ್ಟ್ ಗ್ರಿನ್ ಮತ್ತು ಐಬಿಸ್ ವೈಟ್ ಬಣ್ಣಗಳ ಆಯ್ಕೆ ಹೊಂದಿರುತ್ತದೆ.
ಸ್ಪೆಷಲ್ ಎಡಿಷನ್ ವೈಶಿಷ್ಟ್ಯತೆಗಳು
ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಹೊಂದಿರುವ ಸ್ಪೆಷಲ್ ಎಡಿಷನ್ ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್ ನೀಡಲಾಗಿದ್ದು, ಬ್ಲ್ಯಾಕ್ ಸ್ಟೈಲಿಂಗ್ ಹೊಂದಿರುವ ಬ್ರಾಂಡ್ ಲೊಗೊ ಆಕರ್ಷಕವಾಗಿದೆ. ವಿಶೇಷ ಮಾದರಿಯಾಗಿ ಕಂಪನಿಯು 19 ಇಂಚಿನ 5 ಸ್ಪೋಕ್, ವಿ ಸ್ಟೈಲ್, ಡೈಮಂಡ್ ಕಟ್ ಅಲಾಯ್ ವ್ಹೀಲ್, ಗ್ರಾಫೈಟ್ ಗ್ರೇ ಶೆಡ್ ಮತ್ತು ಎಲ್ಇಡಿ ಹೆಡ್ ಲೈಟ್ಸ್ ನೀಡಲಾಗಿದೆ.
ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, 12.2 ಇಂಚಿನ ಫುಲ್ ಹೆಚ್ ಡಿ ಡ್ರೈವರ್ ಡಿಸ್ಪೇ, 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಡಿಸ್ಪೇ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ಕಂಟ್ರೋಲ್, 755 ವ್ಯಾಟ್ ಬಿಅಂಡ್ಒ ಪ್ರೀಮಿಯಂ 3ಡಿ ಸೌಂಡ್ ಸಿಸ್ಟಂ ಮತ್ತು 19 ಸ್ಪೀಕರ್ಸ್ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, 8 ಏರ್ ಬ್ಯಾಗ್, ಪಾರ್ಕಿಂಗ್ ಅಸಿಸ್ಟ್, ವೈರ್ ಲೆಸ್ ಚಾರ್ಜರ್, 30 ಬಣ್ಣಗಳನ್ನು ಒಳಗೊಂಡ ಆಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯಗಳಿವೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಆಡಿ ಕಂಪನಿಯು ಹೊಸ ಕ್ಯೂ5 ಸ್ಪೆಷಲ್ ಎಡಿಷನ್ ನಲ್ಲಿ 2.0 ಲೀಟರ್ ಟರ್ಬೊ ಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್ ನೀಡಿದ್ದು, ಇದು 249 ಹಾರ್ಸ್ ಪವರ್ ಮತ್ತು 370 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗಿದ್ದು, 6.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆಗೆ 237 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.
Published On - 5:18 pm, Wed, 9 November 22