Cars Discounts: ಹೊಸ ಕಾರುಗಳ ಮೇಲೆ ಮಾರ್ಚ್ ಅವಧಿಯ ಭರ್ಜರಿ ಆಫರ್ ಘೋಷಣೆ

|

Updated on: Mar 07, 2024 | 4:21 PM

ಆರ್ಥಿಕ ವರ್ಷಾಂತ್ಯದಲ್ಲಿ ಹೊಸ ಕಾರುಗಳ ಮೇಲೆ ವಿವಿಧ ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಸೇರಿದಂತೆ ಹಲವಾರು ಉಳಿತಾಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

Cars Discounts: ಹೊಸ ಕಾರುಗಳ ಮೇಲೆ ಮಾರ್ಚ್ ಅವಧಿಯ ಭರ್ಜರಿ ಆಫರ್ ಘೋಷಣೆ
ಹೊಸ ಕಾರುಗಳ ಮೇಲೆ ಮಾರ್ಚ್ ಅವಧಿಯ ಭರ್ಜರಿ ಆಫರ್
Follow us on

ದೇಶಿಯ ಆಟೋಮೊಬೈಲ್ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಕಾರುಗಳ (Cars) ಖರೀದಿ ಭರಾಟೆ ಜೋರಾಗಿದೆ. ಹೀಗಾಗಿ ವಿವಿಧ ಕಾರು ಕಂಪನಿಗಳು ತಮ್ಮ 2024ರ ಆವೃತ್ತಿಗಳನ್ನು ರಸ್ತೆಗಿಳಿಸುತ್ತಿದ್ದು, 2023ರ ಮಾದರಿಗಳ ಮೇಲೆ ಭರ್ಜರಿ ಆಫರ್ ನೀಡುತ್ತಿವೆ. ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಆಫರ್ ಸೇರಿದಂತೆ ಕಾರ್ಪೊರೇಟ್ ಡಿಸ್ಕೌಂಟ್ ಪಡೆಯಬಹುದಾಗಿದೆ. ಹಾಗಾದ್ರೆ ಮಾರ್ಚ್ ಅವಧಿಯಲ್ಲಿ ಯಾವೆಲ್ಲಾ ಕಾರುಗಳ ಮೇಲೆ ಆಫರ್ ಗಳು ಲಭ್ಯವಿವೆ? ಮತ್ತು ಏನೆಲ್ಲಾ ಆಫರ್ ನೀಡಲಾಗುತ್ತಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

ಮಾರುತಿ ನೆಕ್ಸಾ ಕಾರುಗಳು

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರೀಮಿಯಂ ಕಾರು ವಿಭಾಗವಾದ ನೆಕ್ಸಾ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ನೆಕ್ಸಾ ಹೊಸ ಆಫರ್ ಗಳು ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ ಮತ್ತು ಜಿಮ್ನಿ ಕಾರುಗಳ ಮೇಲೆ ಲಭ್ಯವಿದ್ದು, ಗ್ರಾಹಕರು ಈ ಮೂರು ಕಾರುಗಳ ಮೇಲೆ ರೂ. 1.30 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.

ಇದನ್ನೂ ಓದಿ: ಮಾರ್ಚ್ ನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರುಗಳಿವು!

ಹೊಸ ಆಫರ್ ಗಳು 2023ರ ಮಾದರಿಗಳ ಮೇಲೆ ಅನ್ವಯಿಸಲಿದ್ದು, ಗ್ರ್ಯಾಂಡ್ ವಿಟಾರಾ ಮತ್ತು ಜಿಮ್ನಿ ಕಾರುಗಳ ಮೇಲೆ ರೂ. 1.30 ಲಕ್ಷದ ಆಫರ್ ಲಭ್ಯವಿವೆ. ಹಾಗಾಯೇ ಫ್ರಾಂಕ್ಸ್ ಕಾರಿನ ಮೇಲೆ ರೂ. 83 ಸಾವಿರ ತನಕ ಆಫರ್ ಲಭ್ಯವಿದ್ದು, ಡೀಲರ್ಸ್ ಮಟ್ಟದಲ್ಲೂ ಹೆಚ್ಚಿನ ಆಫರ್ ಲಭ್ಯವಿವೆ.

ಹೋಂಡಾ ಕಾರುಗಳು

ಮಾರ್ಚ್ ತಿಂಗಳ ಅವಧಿಯಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಕಂಪನಿ ಕೂಡಾ ಹಲವಾರು ಆಫರ್ ನೀಡುತ್ತಿದೆ. ಹೋಂಡಾ ಕಂಪನಿಯು ಸಿಟಿ ಸೆಡಾನ್, ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮತ್ತು ಎಲಿವೇಟ್ ಎಸ್ ಯುವಿ ಮೇಲೆ ಆಫರ್ ಘೋಷಣೆ ಮಾಡಿದ್ದು, ಗ್ರಾಹಕರು ರೂ. 1.20 ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್ ಗಳಲ್ಲಿ ಸಿಟಿ ಕಾರಿನ ಮೇಲೆ ರೂ. 1.20 ಲಕ್ಷ ಆಫರ್ ನೀಡಲಾಗಿದ್ದರೆ ಅಮೇಜ್ ಕಾರಿನ ಮೇಲೆ ರೂ. 90 ಸಾವಿರ ಮತ್ತು ಎಲಿವೇಟ್ ಕಾರಿನ ಮೇಲೆ ರೂ. 50 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದೆ.

ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!

ಹ್ಯುಂಡೈ ಕಾರುಗಳು

ಮಾರ್ಚ್ ಅವಧಿಗಾಗಿ ಹ್ಯುಂಡೈ ಇಂಡಿಯಾ ಸಹ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಹಲವಾರು ಆಫರ್ ಗಳನ್ನು ನೀಡುತ್ತಿದೆ. ಗ್ರಾಹಕರು ಗ್ರ್ಯಾಂಡ್ ಐ10 ನಿಯೋಸ್, ಔರಾ, ಐ20, ವೆನ್ಯೂ ಮತ್ತು ವೆರ್ನಾ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಪಡೆದುಕೊಳ್ಳಬಹುದಾಗಿದ್ದು, ರೂ. 10 ಸಾವಿರದಿಂದ ರೂ. 43 ಸಾವಿರ ಆಫರ್ ಪಡೆದುಕೊಳ್ಳಬಹುದಾಗಿದೆ.

ಜೊತೆಗೆ ಹ್ಯುಂಡೈ ಕಂಪನಿಯು ಸಿಎನ್ ಜಿ ಕಾರುಗಳ ಮೇಲೂ ಅತ್ಯುತ್ತಮ ಆಫರ್ ನೀಡುತ್ತಿದ್ದು, ಈ ತಿಂಗಳಾಂತ್ಯದ ಲಭ್ಯವಿರಲಿವೆ.

Published On - 4:17 pm, Thu, 7 March 24