ಸಾಮಾನ್ಯವಾಗಿ ಎಲ್ಲಾ ಕಡೆ ಇಲಿ ಕಾಟ ಇದ್ದೇ ಇರುತ್ತದೆ. ಮನೆಯಲ್ಲಿ ಬಟ್ಟೆಯಿಂದ ಹಿಡಿದು ಕಾರಿನ ವೈರಿಂಗ್ವರೆಗೂ ಎಲ್ಲವನ್ನೂ ಇಲಿಗಳು ಕಡಿಯುತ್ತವೆ. ವಾಹನದ ವೈರಿಂಗ್ ಕಚ್ಚುವುದರಿಂದ ಕೆಲವೊಮ್ಮೆ ಸೆನ್ಸರ್ ಗಳೂ ಹಾಳಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ವೈರಿಂಗ್ ಕಟ್ ಆದರೆ ಮನಸ್ಸಲ್ಲಿ ಮೂಡುವ ಪ್ರಶ್ನೆ ಇಲಿಗಳಿಂದ ಆಗುವ ಹಾನಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದೇ ಎಂಬುದು. ಕಾರು ರಿಪೇರಿ ಮಾಡಲು ಇನ್ಶೂರೆನ್ಸ್ ಕಂಪನಿಯು ಹಣ ಕೊಡುತ್ತಾ ಅಥವಾ ನೀವೇ ನಿಮ್ಮ ಕೈಯಿಂದ ಹಣ ಹಾಕಬೇಕೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತದೆ. ನಿಮ್ಮಲ್ಲಿರುವ ಹಲವು ಗೊಂದಲಗಳಿಗೆ ಉತ್ತರ ಇಲ್ಲಿದೆ.
ಟಿವಿ9 ಹಿಂದಿ ಈ ಕುರಿತು ಮಾಹಿತಿ ನೀಡಿದ್ದು, ಕಟಾರಿಯಾ ಇನ್ಶೂರೆನ್ಸ್ ಮೋಟಾರ್ ಹೆಡ್ ಸಂತೋಷ್ ಸಹಾನಿ ಅವರೊಂದಿಗೆ ಸಂವಾದದ ಕೆಲವು ಮಾಹಿತಿ ಹಂಚಿಕೊಂಡಿದೆ.
ಮತ್ತಷ್ಟು ಓದಿ: ಟಾಟಾದಿಂದ ಹೊಸ ಇನ್ಷೂರೆನ್ಸ್, ಏನಿದು ಕಾರ್ ವಿಮೆ?
ಇಲಿ ಕಡಿತದಿಂದ ಒಂದೊಮ್ಮೆ ಕಾರಿಗೆ ಸಮಸ್ಯೆಯುಂಟಾದಲ್ಲಿ ಇನ್ಶೂರೆನ್ಸ್ ಕಂಪನಿಗಳು ಹಣವನ್ನು ಭರಿಸುತ್ತದೆ. ಕಂಪನಿಯು ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ ಆದರೆ ಕೆಲವು ಕಂಡೀಷನ್ಸ್ಗಳಿರಲಿವೆ.
ನೀವು ವಾಹನಕ್ಕೆ ವ್ಯಕ್ತಿ ಕೇವಲ ಸಮಗ್ರ ಕಾರು ವಿಮಾ ಪಾಲಿಸಿ (Comprehensive Policy) ಹೊಂದಿದ್ದರೆ ಈ ನಷ್ಟವನ್ನು ಈ ಪಾಲಿಯಡಿಯಲ್ಲಿ ಭರಿಸಲಾಗುವುದಿಲ್ಲ.
ಅವರು ಝೀರೋ ಡಿಪ್ರಿಸಿಯೇಷನ್ ಪಾಲಿಸಿ(Zero Depreciation Policy )ಯನ್ನು ಕೂಡ ಹೊಂದಿರಬೇಕು. ಈ ಎರಡು ವಿಮೆಗಳನ್ನು ನೀವು ಹೊಂದಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ವಿಮೆ ಕಂಪನಿಗಳು ಹಣವನ್ನು ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾರಿನ ಚಾಲಕ ಕೈಯಿಂದಲೇ ಹಣವನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ವಿಮಾ ಕಂಪನಿಯು ನೀಡುವುದಿಲ್ಲ.
ಆಟೊಮೊಬೈಲ್ಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ