ಸ್ಕೋಡಾ ಕುಶಾಕ್ ಸ್ಪೋರ್ಟ್ಲೈನ್ ಮತ್ತು ಸ್ಲಾವಿಯಾ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ

ಸ್ಕೋಡಾ ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಸ್ಪೋರ್ಟಿಯರ್ ಆವೃತ್ತಿಗಳ ಖರೀದಿದಾರರಿಗೆ ಹೊಸ ಆಯ್ಕೆ ನೀಡಲಾಗಿದೆ.

ಸ್ಕೋಡಾ ಕುಶಾಕ್ ಸ್ಪೋರ್ಟ್ಲೈನ್ ಮತ್ತು ಸ್ಲಾವಿಯಾ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ
ಸ್ಕೋಡಾ ಕುಶಾಕ್ ಸ್ಪೋರ್ಟ್ಲೈನ್ ಮತ್ತು ಸ್ಲಾವಿಯಾ ಮಾಂಟೆ ಕಾರ್ಲೊ ಎಡಿಷನ್
Follow us
Praveen Sannamani
|

Updated on: Sep 03, 2024 | 5:17 PM

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೋಡಾ (Skoda) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಸ್ಪೋರ್ಟ್ಲೈನ್ ಮತ್ತು ಸ್ಲಾವಿಯಾ ಸೆಡಾನ್ ಕಾರಿನಲ್ಲಿ ಸ್ಪೋರ್ಟ್ಲೈನ್ ಜೊತೆಗೆ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಕಾರುಗಳು ಎಕ್ಸ್ ಶೋರೂಂ ಪ್ರಕಾರ ರೂ. 20 ಸಾವಿರದಿಂದ ರೂ. 50 ಸಾವಿರದಷ್ಟು ದುಬಾರಿಯಾಗಿರಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಗಳಿರಲಿವೆ.

ಕುಶಾಕ್ ಸ್ಪೋರ್ಟ್ಲೈನ್

ಸ್ಕೋಡಾ ಕಂಪನಿಯು ಕುಶಾಕ್ ಕಾರಿನ ಸಿಗ್ನೆಚರ್ ವೆರಿಯೆಂಟ್ ಆಧರಿಸಿ ಹೊಸ ಸ್ಪೋರ್ಟ್ಲೈನ್ ಪರಿಚಯಿಸಿದ್ದು, ಇದು ಪ್ರಮುಖ ಮೂರು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 14.70 ಲಕ್ಷದಿಂದ ರೂ. 17.40 ಲಕ್ಷ ಬೆಲೆ ಹೊಂದಿದೆ. ಸ್ಪೋರ್ಟ್ಲೈನ್ ಮಾದರಿಯನ್ನು ವಿಶೇಷವಾಗಿ ಬ್ಲ್ಯಾಕ್ ಥೀಮ್ ನೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಜೊತೆಗೆ 17 ಇಂಚಿನ ಅಲಾಯ್ ವ್ಹೀಲ್ಸ್, ಸ್ಪೋರ್ಟ್ಲೈನ್ ಬ್ಯಾಡ್ಜ್, ಬ್ಲ್ಯಾಕ್ ಔಟ್ ಹೊಂದಿರುವ ಗ್ರಿಲ್ ಸರೌಂಡ್, ಸ್ಕಫ್ ಪ್ಲೇಟ್, ರಿಯರ್ ವ್ಯೂ ಮಿರರ್, ರೂಫ್ ಅಂಡ್ ರೈಲ್ಸ್, ಟೈಲ್ ಗೇಟ್ ಗಾರ್ನಿಶ್ ಹೊಂದಿದೆ.

Skoda kushaq and slavia (2)

ಸ್ಪೋರ್ಟ್ಲೈನ್ ಕುಶಾಕ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬ್ಲ್ಯಾಕ್ ಅಂಡ್ ಬಿಝ್ ಬಣ್ಣದ ಕ್ಯಾಬಿನ್ ನೀಡಲಾಗಿದ್ದು, ಅಲ್ಯುನಿಯಂ ಪಡೆಲ್ಸ್, ಫುಲ್ ಎಲ್ಇಡಿ ಹೆಡ್ ಲೈಟ್ಸ್, ಆಟೋ ರೈನ್ ವೈಪರ್ಸ್, 10 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಡ್ರೈವರ್ ಡಿಸ್ ಪ್ಲೇ, ಸಿಂಗಲ್ ಪೇನ್ ಸನ್ ರೂಫ್, ಫ್ರಂಟ್ ವೆಂಟೆಲೆಟೆಡ್ ಆಸನಗಳು ಸೇರಿದಂತೆ ಆರು ಏರ್ ಬ್ಯಾಗ್ ಗಳನ್ನು ನೀಡಲಾಗಿದೆ.

ಹೊಸ ಕುಶಾಕ್ ಸ್ಪೋರ್ಟ್ಲೈನ್ ಕಾರಿನಲ್ಲಿ ಎಂಜಿನ್ ಆಯ್ಕೆಯು ಸಾಮಾನ್ಯ ಮಾದರಿಯಲ್ಲಿರುವಂತೆ ಮುಂದುವರೆಸಲಾಗಿದ್ದು, 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳಿವೆ. 1.0 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದೆ.

ಸ್ಲಾವಿಯಾ ಮಾಂಟೆ ಕಾರ್ಲೊ ಮತ್ತು ಸ್ಪೋರ್ಟ್ಲೈನ್ ಎಡಿಷನ್

ಸ್ಕೋಡಾ ಕಂಪನಿ ಸ್ಲಾವಿಯಾ ಸೆಡಾನ್ ಮಾದರಿಯಲ್ಲಿ ಮೊದಲ ಬಾರಿಗೆ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ ಮಾಡಿದ್ದು, ಜೊತೆಗೆ ಸ್ಪೋರ್ಟ್ಲೈನ್ ಸಹ ಪರಿಚಯಿಸಿದೆ. ಈ ಹಿಂದೆ ರ್ಯಾಪಿಡ್ ಮಾದರಿಯಲ್ಲಿದ್ದ ಮಾಂಟೆ ಕಾರ್ಲೊ ಸ್ಪೋರ್ಟಿ ಮಾದರಿಯು ಇದೀಗ ಹೊಸ ಸ್ಲಾವಿಯಾದಲ್ಲೂ ಪರಿಚಯಿಸಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 14.05 ಲಕ್ಷದಿಂದ ರೂ. 18.49 ಲಕ್ಷ ಬೆಲೆ ಹೊಂದಿದೆ.

Skoda kushaq and slavia (1)

ಮಾಂಟೆ ಕಾರ್ಲೊ ಎಡಿಷನ್ ನಲ್ಲಿ ಕುಶಾಕ್ ಕಾರಿನಲ್ಲಿರುವಂತೆ ಬ್ಲ್ಯಾಕ್ ಹೈಲೈಟ್ಸ್ ಹೊಂದಿರುವ ಫ್ರಂಟ್ ಗ್ರೀಲ್, ಡೋರ್ ಹ್ಯಾಂಡಲ್ಸ್, ಸೈಡ್ ಸ್ಕರ್ಟ್ಸ್, ರಿಯರ್ ಸ್ಪಾಯ್ಲರ್ ಮತ್ತು ಬಂಪರ್ ಒಳಗೊಂಡಿದೆ. ಹಾಗೆಯೇ ಹೊಸ ಕಾರಿನಲ್ಲಿ 16 ಇಂಚಿನ ಬ್ಲ್ಯಾಕ್ ಕಲರ್ ಅಲಾಯ್ ವ್ಹೀಲ್ಸ್ ಹೊಂದಿದ್ದು, ಒಳಭಾಗದಲ್ಲಿ ರೆಡ್ ಅಂಡ್ ಬ್ಲ್ಯಾಕ್ ಥೀಮ್ ನೊಂದಿಗೆ ಹೊಸ ಇನ್ಸ್ಟುಮೆಂಟ್ ಕ್ಲಸ್ಟರ್, ಅಲ್ಯುನಿಯಂ ಪೆಡಲ್ಸ್ ನೀಡಲಾಗಿದೆ.

ಇನ್ನು ಹೊಸ ಸ್ಲಾವಿಯಾ ಮಾಂಟೆ ಕಾರ್ಲೊ ಮಾದರಿಯಲ್ಲಿ ಟೊರ್ನಾಡೋ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳ ಆಯ್ಕೆ ಹೊಂದಿದ್ದು, ಸ್ಪೋರ್ಟ್ಲೈನ್ ಎಡಿಷನ್ ನಲ್ಲೂ ಸಹ ಬ್ಲ್ಯಾಕ್ ಥೀಮ್ ನೊಂದಿಗೆ ಅಭಿವೃದ್ದಿಗೊಂಡಿದೆ. ಈ ಮೂಲಕ ಹೊಸ ಕಾರು ಕುಶಾಕ್ ಕಾರಿನಲ್ಲಿರುಂತೆ ಎಂಜಿನ್ ಆಯ್ಕೆ ಹೊಂದಿದ್ದು, 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ