ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?

ಒಂದೊಮ್ಮೆ ಇಲಿ ಕಾರಿನ ವೈರಿಂಗ್ ಕಟ್ ಮಾಡಿದರೆ ಇನ್ಶೂರೆನ್ಸ್​ ಸಿಗುತ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಯಾವ ಇನ್ಶೂರೆನ್ಸ್​ ಪಾಲಿಸಿ ನಿಮ್ಮ ಬಳಿ ಇದ್ದರೆ ಹಣ ಪಡೆಯಬಹುದು ಎನ್ನುವ ಮಾಹಿತಿ ಇಲ್ಲಿದೆ.

ಒಂದೊಮ್ಮೆ ಇಲಿ ಕಾರಿನ ವೈರಿಂಗ್​ ಕತ್ತರಿಸಿದರೆ ಇನ್ಶೂರೆನ್ಸ್​ ಸಿಗುತ್ತಾ?
ಕಾರು
Follow us
|

Updated on: Sep 04, 2024 | 12:21 PM

ಸಾಮಾನ್ಯವಾಗಿ ಎಲ್ಲಾ ಕಡೆ ಇಲಿ ಕಾಟ ಇದ್ದೇ ಇರುತ್ತದೆ. ಮನೆಯಲ್ಲಿ ಬಟ್ಟೆಯಿಂದ ಹಿಡಿದು ಕಾರಿನ ವೈರಿಂಗ್​ವರೆಗೂ ಎಲ್ಲವನ್ನೂ ಇಲಿಗಳು ಕಡಿಯುತ್ತವೆ. ವಾಹನದ ವೈರಿಂಗ್ ಕಚ್ಚುವುದರಿಂದ ಕೆಲವೊಮ್ಮೆ ಸೆನ್ಸರ್ ಗಳೂ ಹಾಳಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ವೈರಿಂಗ್ ಕಟ್ ಆದರೆ ಮನಸ್ಸಲ್ಲಿ ಮೂಡುವ ಪ್ರಶ್ನೆ ಇಲಿಗಳಿಂದ ಆಗುವ ಹಾನಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದೇ ಎಂಬುದು. ಕಾರು ರಿಪೇರಿ ಮಾಡಲು ಇನ್ಶೂರೆನ್ಸ್​ ಕಂಪನಿಯು ಹಣ ಕೊಡುತ್ತಾ ಅಥವಾ ನೀವೇ ನಿಮ್ಮ ಕೈಯಿಂದ ಹಣ ಹಾಕಬೇಕೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತದೆ. ನಿಮ್ಮಲ್ಲಿರುವ ಹಲವು ಗೊಂದಲಗಳಿಗೆ ಉತ್ತರ ಇಲ್ಲಿದೆ.

ಟಿವಿ9 ಹಿಂದಿ​ ಈ ಕುರಿತು ಮಾಹಿತಿ ನೀಡಿದ್ದು, ಕಟಾರಿಯಾ ಇನ್ಶೂರೆನ್ಸ್​ ಮೋಟಾರ್ ಹೆಡ್ ಸಂತೋಷ್ ಸಹಾನಿ ಅವರೊಂದಿಗೆ ಸಂವಾದದ ಕೆಲವು ಮಾಹಿತಿ ಹಂಚಿಕೊಂಡಿದೆ.

ಮತ್ತಷ್ಟು ಓದಿ: ಟಾಟಾದಿಂದ ಹೊಸ ಇನ್ಷೂರೆನ್ಸ್, ಏನಿದು ಕಾರ್ ವಿಮೆ?

ಇಲಿ ಕಡಿತದಿಂದ ಒಂದೊಮ್ಮೆ ಕಾರಿಗೆ ಸಮಸ್ಯೆಯುಂಟಾದಲ್ಲಿ ಇನ್ಶೂರೆನ್ಸ್​ ಕಂಪನಿಗಳು ಹಣವನ್ನು ಭರಿಸುತ್ತದೆ. ಕಂಪನಿಯು ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ ಆದರೆ ಕೆಲವು ಕಂಡೀಷನ್ಸ್​ಗಳಿರಲಿವೆ. ನೀವು ವಾಹನಕ್ಕೆ ವ್ಯಕ್ತಿ ಕೇವಲ ಸಮಗ್ರ ಕಾರು ವಿಮಾ ಪಾಲಿಸಿ (Comprehensive Policy) ಹೊಂದಿದ್ದರೆ ಈ ನಷ್ಟವನ್ನು ಈ ಪಾಲಿಯಡಿಯಲ್ಲಿ ಭರಿಸಲಾಗುವುದಿಲ್ಲ.

ಅವರು ಝೀರೋ ಡಿಪ್ರಿಸಿಯೇಷನ್ ಪಾಲಿಸಿ(Zero Depreciation Policy )ಯನ್ನು ಕೂಡ ಹೊಂದಿರಬೇಕು. ಈ ಎರಡು ವಿಮೆಗಳನ್ನು ನೀವು ಹೊಂದಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ವಿಮೆ ಕಂಪನಿಗಳು ಹಣವನ್ನು ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾರಿನ ಚಾಲಕ ಕೈಯಿಂದಲೇ ಹಣವನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ವಿಮಾ ಕಂಪನಿಯು ನೀಡುವುದಿಲ್ಲ.

ಆಟೊಮೊಬೈಲ್​ಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ