AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

EV Cars Mileage Tips: ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ಹೆಚ್ಚಿಸಲು ಏನು ಮಾಡಬೇಕು?, ಇಲ್ಲಿದೆ ನೋಡಿ ಟಿಪ್ಸ್

ಇವಿ ಕಾರುಗಳು ಆಯಾ ಕಂಪನಿಗಳು ಹೇಳಿದಷ್ಟು ಮೈಲೇಜ್ ಹಿಂದಿರುಗಿಸುವುದಿಲ್ಲ ಎಂಬ ಅಸಮಾಧಾನ ಗ್ರಾಹಕರಿಂದ ಬರುತ್ತಲೇ ಇದೆ. ಇವಿ ಕಾರುಗಳು ಕಂಪನಿಗಳು ನೀಡುವ ಮೈಲೇಜ್ ಮಾಹಿತಿಯು ARAI ಸಂಸ್ಥೆಯು ಪ್ರಮಾಣಿಕರಿಸಿದ ಮೈಲೇಜ್ ಆಗಿರುತ್ತದೆ. ಆದರೆ ಇದು ನೈಜ ರಸ್ತೆಗಳಲ್ಲಿ ಚಾಲನೆ ಮಾಡಿದಾಗ ಮೈಲೇಜ್ ನಲ್ಲಿ ಸಾಕಷ್ಟು ಬದಲಾವಣೆಗೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣವೆನೆಂದರೆ ಚಾಲಕನ ಚಾಲನಾ ಶೈಲಿ.

EV Cars Mileage Tips: ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ಹೆಚ್ಚಿಸಲು ಏನು ಮಾಡಬೇಕು?, ಇಲ್ಲಿದೆ ನೋಡಿ ಟಿಪ್ಸ್
Indian Electric Cars Mileage Tips
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 15, 2025 | 12:03 PM

Share

ಎಲೆಕ್ಟ್ರಿಕ್ ವಾಹನಗಳು ಅತಿ ಕಡಿಮೆ ಸಮಯದಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಭವಿಷ್ಯದ ತಂತ್ರಜ್ಞಾನ ಹೊಂದಿರುವ ಈ ವಾಹನಗಳು ಗ್ರಾಹಕರ ಮೊದಲ ಆಯ್ಕೆಯಾಗುತ್ತದೆ. ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಇವಿ ಕಾರು ಬಳಕೆಯು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಇವು ಸಾಂಪ್ರಾದಾಯಿಕ ಕಾರುಗಳಿಂತಲೂ ವಿಭಿನ್ನ ಅನುಭವ ನೀಡುತ್ತಿವೆ. ದೇಶಾದ್ಯಂತ ಇವಿ ವಾಹನ ಮಾರಾಟವು ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಇವಿ ವಾಹನಗಳ ವಿಭಾಗದಲ್ಲಿ ಸದ್ಯ ಇವಿ ದ್ವಿಚಕ್ರ ವಾಹನಗಳು ಅಗ್ರಸ್ಥಾನದಲ್ಲಿದ್ದರೆ ನಂತರದ ಸ್ಥಾನದಲ್ಲಿ ಇವಿ ಕಾರುಗಳು ಹೆಚ್ಚಿನ ಬೇಡಿಕೆಯಲ್ಲಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಕಷ್ಟು ಜನರಿಗೆ ಇವಿ ವಾಹನಗಳ ಖರೀದಿ ಮಾಡುವ ಬಯಕೆ ಇದ್ದರೂ ಇವಿ ಕಾರುಗಳ ದುಬಾರಿ ಬೆಲೆ, ಬ್ಯಾಟರಿ ರೇಂಜ್ ಮತ್ತು ಅವುಗಳ ನಿರ್ವಹಣೆ ವಿಚಾರದಲ್ಲಿರುವ ಗೊಂದಲಗಳಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಇವಿ ಕಾರುಗಳ ಸುಲಭ ನಿರ್ವಹಣೆಗಾಗಿ ಮತ್ತು ಗ್ರಾಹಕರ ಸ್ನೇಹಿ ಫೀಚರ್ಸ್‌ಗಳ ಮೂಲಕ ಇವಿ ವಾಹನಗಳ ಬಳಕೆಯನ್ನ ಸುಲಭವಾಗಿಸಲು ಕಂಪನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದೆ.

ಇವಿ ಕಾರುಗಳು ಆಯಾ ಕಂಪನಿಗಳು ಹೇಳಿದಷ್ಟು ಮೈಲೇಜ್ ಹಿಂದಿರುಗಿಸುವುದಿಲ್ಲ ಎಂಬ ಅಸಮಾಧಾನ ಗ್ರಾಹಕರಿಂದ ಬರುತ್ತಲೇ ಇದೆ. ಇವಿ ಕಾರುಗಳು ಕಂಪನಿಗಳು ನೀಡುವ ಮೈಲೇಜ್ ಮಾಹಿತಿಯು ARAI ಸಂಸ್ಥೆಯು ಪ್ರಮಾಣಿಕರಿಸಿದ ಮೈಲೇಜ್ ಆಗಿರುತ್ತದೆ. ಆದರೆ ಇದು ನೈಜ ರಸ್ತೆಗಳಲ್ಲಿ ಚಾಲನೆ ಮಾಡಿದಾಗ ಮೈಲೇಜ್ ನಲ್ಲಿ ಸಾಕಷ್ಟು ಬದಲಾವಣೆಗೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣವೆನೆಂದರೆ ಚಾಲಕನ ಚಾಲನಾ ಶೈಲಿ, ರಸ್ತೆಗಳ ಸ್ಥಿತಿಗತಿ ಮತ್ತು ಟ್ರಾಫಿಕ್ ದಟ್ಟಣೆಯನ್ನ ಆಧರಿಸಿ ನಿರ್ಧಾರಗೊಳ್ಳುತ್ತದೆ.

Tesla Model Y Facelift: ಎಲೋನ್ ಮಸ್ಕ್ ಅವರ ಹೊಸ ಟೆಸ್ಲಾ ಕಾರು ಬಿಡುಗಡೆ: ಹೇಗಿದೆ, ಬೆಲೆ ಎಷ್ಟು?

ಇವಿ ಕಾರುಗಳ ಬ್ಯಾಟರಿ ದಕ್ಷತೆ ಹೆಚ್ಚಿಸಲು ಮೊದಲು ಚಾಲನಾ ಶೈಲಿಯನ್ನು ಸುಧಾರಿಸುವ ಅವಶ್ಯಕತೆಯಿದೆ. ಇವಿ ಕಾರುಗಳು ಫಾರ್ವಡ್ ಡ್ರೈವಿಂಗ್ ಸಿಸ್ಟಂ ಹೊಂದಿರುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ ಪಡೆದುಕೊಳ್ಳುತ್ತವೆ. ಆದರೆ ನೀವು ಹೊಸ ಇವಿ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಬಯಸಿದರೆ ಇಕೋ ಮತ್ತು ನಾರ್ಮಲ್ ಮೋಡ್‌ಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ವೇಗ ಹೆಚ್ಚದಂತೆ ಮಧ್ಯಮ ವೇಗದಲ್ಲಿ ಚಾಲನೆ ಮಾಡುವುದು ಉತ್ತಮ ಎನ್ನಬಹುದು.

ಹಾಗೆಯೇ ಹೆಚ್ಚಿನ ಮೈಲೇಜ್ ಬಯಸಿದರೆ ಸ್ಪೋರ್ಟ್ಸ್ ಮೋಡ್‌ ಬಳಕೆಯನ್ನ ಕಡಿಮೆ ಮಾಡಬೇಕಾಗುತ್ತದೆ. ಸ್ಪೋರ್ಟ್ಸ್ ಮೋಡ್ ಕಾರು ಚಾಲನೆಯ ವೇಳೆ ನಿಮಗೆ ಹೆಚ್ಚಿನ ಉತ್ಸಾಹವನ್ನು ಕೊಡಬಹುದು. ಆದರೆ ಇದು ಬ್ಯಾಟರಿ ವ್ಯಾಪ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ನಿಗದಿತ ವೇಗದಲ್ಲಿ ಚಾಲನೆ ಮೂಲಕ ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ.

ಜೊತೆಗೆ ಇವಿ ಕಾರುಗಳಲ್ಲಿ ರೀಜನರೇಟಿವ್ ಅಥವಾ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕವೂ ಇವಿ ಕಾರುಗಳ ಮೈಲೇಜ್ ಹೆಚ್ಚಿಸಬಹುದಾಗಿದೆ. ಎಲೆಕ್ಟ್ರಿಕ್ ಕಾರುಗಳ ವೇಗವರ್ಧನೆಯೊಂದಿಗೆ ಬ್ರೇಕಿಂಗ್ ಸಮಯದಲ್ಲಿ ಉತ್ಪತ್ತಿಯಾಗುವ ಚಲನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಆಗ ಅಧಿಕ-ವೋಲ್ಟೇಜ್ ಬ್ಯಾಟರಿ ಸ್ವಯಂಚಾಲಿತಲಾಗಿ ಚಾರ್ಜ್ ಆಗಲಿದ್ದು, ಇದು ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಇದರೊಂದಿಗೆ ಇವಿ ಕಾರುಗಳಲ್ಲಿ ಚಾಲನೆ ಮಾಡುವಾಗ ಅವಶ್ಯವಿದ್ದಾಗ ಮಾತ್ರ ಎಸಿ ಸೌಲಭ್ಯ ಬಳಸಿ. ನಿಮ್ಮ ಕಾರಿನಲ್ಲಿ ಆಟೋ ಏರ್‌ ಕಂಡಿಷನರ್ ಸೌಲಭ್ಯವಿದ್ದಲ್ಲಿ ಅದನ್ನು ಇಕೋ ಮೋಡ್‌‌ಗೆ ಬದಲಿಸಿ 24 ರಿಂದ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಿಸಬಹುದಾಗಿದೆ.

ಇನ್ನು ಇವಿ ವಾಹನಗಳಲ್ಲಿನ ಮೈಲೇಜ್ ಪ್ರಮಾಣದ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಕಾರಿನ ಚಕ್ರಗಳ ಗಾಳಿಯ ಒತ್ತಡದ ಏರಿಳಿತವು ಕೂಡಾ ಕಾರಣವಾಗುತ್ತದೆ. ಇದಕ್ಕಾಗಿ ಇತ್ತೀಚೆಗೆ ಪ್ರಮುಖ ವಾಹನ ಕಂಪನಿಗಳು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿವೆ. ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯದಿಂದ ಚಾಲಕನು ಯಾವ ಚಕ್ರದಲ್ಲಿ ಎಷ್ಟು ಪ್ರಮಾಣದ ಗಾಳಿಯ ಒತ್ತಡ ಇದೆ ಎಂಬುವುದನ್ನು ತಿಳಿಯಬಹುದಾಗಿದೆ. ಈ ಮೂಲಕ ಕಾರಿನ ಮೈಲೇಜ್ ತಗ್ಗದ್ದಂತೆ ಎಚ್ಚರವಹಿಸಬಹುದಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ