ದಸರಾ ಧಮಾಕಾ! ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ

|

Updated on: Oct 16, 2023 | 9:17 PM

ಹೋಂಡಾ ಕಾರ್ಸ್ ಕಂಪನಿಯು ದಸರಾ ವಿಶೇಷತೆಗಾಗಿ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ದಸರಾ ಧಮಾಕಾ! ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
Follow us on

ದೇಶಾದ್ಯಂತ ದಸರಾ ಸಂಭ್ರಮ ಹೆಚ್ಚುತ್ತಿದ್ದು, ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಲವರು ತಮ್ಮ ಇಷ್ಟದ ವಾಹನಗಳನ್ನು ಖರೀದಿ ಮಾಡುತ್ತಾರೆ. ಇದಕ್ಕಾಗಿಯೇ ವಾಹನ ಕಂಪನಿಗಳು ಸಹ ಈ ಸಂದರ್ಭದಲ್ಲಿ ಹೆಚ್ಚಿನ ಆಫರ್ ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಕಾರುಗಳ(Cars) ಖರೀದಿ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ.

ಮಾರುತಿ ಸುಜುಕಿ ಕಾರುಗಳ ಮೇಲಿನ ಆಫರ್
ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ತನ್ನ ಪ್ರಮುಖ ಕಾರುಗಳ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ನೆಕ್ಸಾ ಶೋರೂಂ ನಲ್ಲಿ ಲಭ್ಯವಿರುವ ಇಗ್ನಿಸ್, ಬಲೊನೊ ಮತ್ತು ಸಿಯಾಜ್ ಕಾರುಗಳ ಮೇಲೆ ಹೆಚ್ಚಿನ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ನೀಡಲಾಗುತ್ತಿದ್ದು, ಬರೋಬ್ಬರಿ 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್ ಬ್ಯಾಕ್ ಕಾರು ಖರೀದಿಯ ಮೇಲೆ ರೂ. 65 ಸಾವಿರ ತನಕ ಆಫರ್ ನೀಡುತ್ತಿದ್ದು, ಇಗ್ನಿಸ್ ಕಾರಿನ ಮ್ಯಾನುವಲ್ ಆವೃತ್ತಿಯ ಮೇಲೆ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದೆ.

ಇಗ್ನಿಸ್ ಹ್ಯಾಚ್ ಬ್ಯಾಕ್ ನಂತರ ಬಲೆನೊ ಹ್ಯಾಚ್ ಬ್ಯಾಕ್ ಕಾರಿನ ಮೇಲೂ ಮಾರುತಿ ಸುಜುಕಿ ಕಂಪನಿಯು ಅತ್ಯುತ್ತಮ ಆಫರ್ ನೀಡುತ್ತಿದೆ. ಬಲೆನೊ ಕಾರು ಖರೀದಿ ಮೇಲೆ ರೂ. 55 ಸಾವಿರ ಆಫರ್ ಲಭ್ಯವಿದ್ದು, ಇದರಲ್ಲೂ ಕೂಡಾ ರೂ. 5 ಸಾವಿರ ಮೌಲ್ಯದ ವಿಶೇಷ ಆಫರ್ ಒಳಗೊಂಡಿದೆ. ಹ್ಯಾಚ್ ಬ್ಯಾಕ್ ಕಾರಿನ ಮಾರಾಟದಲ್ಲಿ ಬಲೆನೊ ಕಾರು ಸದ್ಯ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಆಫರ್ ಗಳಲ್ಲಿ ಸಿಎನ್ ಜಿ ಮಾದರಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ.

ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಕಾರುಗಳಲ್ಲಿ ಪ್ರಮುಖವಾಗಿರುವ ಸಿಯಾಜ್ ಸೆಡಾನ್ ಮೇಲೂ ಅತ್ಯುತ್ತಮ ಆಫರ್ ನೀಡುತ್ತಿದ್ದು, ರೂ. 53 ಸಾವಿರ ಆಫರ್ ಪಡೆದುಕೊಳ್ಳಬಹುದಾಗಿದೆ. ಸಿಯಾಜ್ ಕಾರಿನ ಮೇಲೂ ವಿಶೇಷ ಆಫರ್ ಜೊತೆಗೆ ಎಕ್ಸ್ ಚೆಂಜ್ ಬೋನಸ್ ನೀಡಲಾಗುತ್ತಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿವೆ.

ಇದನ್ನೂ ಓದಿ: ನಿಸ್ಸಾನ್ ಮ್ಯಾಗ್ನೈಟ್ ಹೊಸ ಬಜೆಟ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ 

ಹೋಂಡಾ ಕಾರುಗಳ ಮೇಲೆ ಭರ್ಜರಿ ಆಫರ್
ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದಸರಾ ಸಂಭ್ರಮಕ್ಕಾಗಿ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಅಮೇಜ್ ಕಂಪ್ಯಾಕ್ಟ್ ಸೆಡಾನ್ ಮತ್ತು ಸಿಟಿ ಸೆಡಾನ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ಕಾರ್ಸ್ ಕಂಪನಿಯು ತನ್ನ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳು ಅಮೇಜ್ ಮತ್ತು ಸಿಟಿ ಕಾರುಗಳನ್ನು ಹೊರತುಪಡಿಸಿ ಸಿಟಿ ಸೆಡಾನ್ ಕಾರಿನ ಹೈಬ್ರಿಡ್ ಆವೃತ್ತಿ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ಎಲಿವೇಟ್ ಕಾರಿನ ಮೇಲೆ ಯಾವುದೇ ಆಫರ್ ನೀಡಲಾಗುತ್ತಿಲ್ಲ.

ಹೋಂಡಾ ಕಾರ್ಸ್ ಕಂಪನಿಯು ಸಿಟಿ ಸೆಡಾನ್ ಕಾರಿನ ಖರೀದಿಯ ಮೇಲೆ ರೂ. 75 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 26 ಸಾವಿರ ಮೌಲ್ಯದ ಆಕ್ಸೆಸರಿಸ್ ಆಫರ್ ನೀಡಲಾಗುತ್ತಿದೆ. ಇನ್ನುಳಿದಂತೆ ಹೊಸ ಕಾರು ಖರೀದಿಯ ಮೇಲೆ ಲೊಯಾಲಿಟಿ ಬೋನಸ್ ಮತ್ತು ಎಕ್ಸ್ ಚೆಂಜ್ ಆಫರ್ ಅನ್ವಯಿಸಲಿದ್ದು, ಇದು 1.5 ಲೀಟರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ವಿಶೇಷ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಹೋಂಡಾ ಕಾರ್ಸ್ ಕಂಪನಿಯು ರೂ. 57 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಗ್ರಾಹಕರು ರೂ. 20 ಸಾವಿರ ಮೌಲ್ಯದ ಕ್ರ್ಯಾಶ್ ಟಿಸ್ಕೌಂಟ್ ಮತ್ತು ರೂ. 15 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ನೀಡುತ್ತಿದ್ದು, ಇನ್ನುಳಿದಂತೆ ಲೊಯಾಲಿಟಿ ಆಫರ್ ಮತ್ತು ಆಕ್ಸೆಸರಿಸ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಹ್ಯುಂಡೈ ಕಾರುಗಳ ಮೇಲಿನ ಆಫರ್
ದಸರಾ ಸಂಭ್ರಮಕ್ಕಾಗಿ ಹ್ಯುಂಡೈ ಇಂಡಿಯಾ ಕೂಡಾ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ಗಳನ್ನು ನೀಡಲಾಗುತ್ತಿದೆ.

ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ಐ20 ಎನ್-ಲೈನ್ ಆವೃತ್ತಿಯ ಮೇಲೆ ಸುಮಾರು ರೂ. 50 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಹೊಸ ಆಫರ್ ಗಳು ಫೇಸ್ ಲಿಫ್ಟ್ ಐ20 ಎನ್-ಲೈನ್ ಮೇಲೆ ಅನ್ವಯಿಸುವುದಿಲ್ಲ. ಹಳೆಯ ಮಾದರಿಯ ಮೇಲೆ ಮಾತ್ರ ಹೊಸ ಆಫರ್ ಗಳು ಲಭ್ಯವಿದ್ದು, ಹೊಸ ಆವೃತ್ತಿಯ ಮೇಲೆ ರೂ. 10 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮಾತ್ರ ಅನ್ವಯಿಸಲಿದೆ.

ಇನ್ನು ಹೊಸ ಆಫರ್ ಗಳಲ್ಲಿ ಗ್ರ್ಯಾಂಡ್ ಐ10 ನಿಯೋಸ್ ಕಾರಿನ ಮೇಲೆ ರೂ. 43 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದ್ದರೆ ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೆ ರೂ. 33 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹಾಗೆಯೇ ವೆರ್ನಾ ಸೆಡಾನ್ ಕಾರು ಖರೀದಿಯ ಮೇಲೆ ರೂ. 25 ಸಾವಿರ ಮೌಲ್ಯದ ಆಫರ್ ನೀಡಲಾಗುತ್ತಿದ್ದು, ಅಲ್ಕಾಜರ್ ಎಸ್ ಯುವಿ ಖರೀದಿಯ ಮೇಲೆ ರೂ. 20 ಸಾವಿರ ಮೌಲ್ಯದ ಆಫರ್ ಗಳನ್ನು ನೀಡಲಾಗುತ್ತಿದೆ.

Published On - 6:51 pm, Mon, 16 October 23