ಹೀರೋ ವಿಡಾ ವಿ1 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಭರ್ಜರಿ ಆಫರ್

|

Updated on: Dec 19, 2023 | 4:44 PM

ಹೀರೋ ಮೋಟೊಕಾರ್ಪ್ ಸಬ್ ಬ್ರಾಂಡ್ ವಿಡಾ ತನ್ನ ಹೊಸ ವಿ1 ಇವಿ ಸ್ಕೂಟರ್ ಖರೀದಿದಾರರಿಗೆ ವರ್ಷಾಂತ್ಯದ ಆಫರ್ ನಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹೀರೋ ವಿಡಾ ವಿ1 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಭರ್ಜರಿ ಆಫರ್
ಹೀರೋ ವಿಡಾ ವಿ1 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್
Follow us on

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೊಕಾರ್ಪ್ ಸಬ್ ಬ್ರಾಂಡ್ ವಿಡಾ (Vida) ತನ್ನ ಹೊಸ ವಿ1 (V1) ಇವಿ ಸ್ಕೂಟರ್ ಖರೀದಿ ಮೇಲೆ ಆಕರ್ಷಕ ವರ್ಷಾಂತ್ಯದ ಆಫರ್ ಘೋಷಣೆ ಮಾಡಿದ್ದು, ಪರಿಸರ ಪ್ರಜ್ಞೆಯುಳ್ಳ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಇದು ಉತ್ತಮ ಅವಕಾಶವಾಗಿದೆ.

ವಿಡಾ ವಿ1 ಇವಿ ಸ್ಕೂಟರ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ವಿವಿಧ ವೆಚ್ಚ ಉಳಿತಾಯ ಪ್ರೋತ್ಸಾಹಗಳನ್ನ ನೀಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಬರೋಬ್ಬರಿ 31,000 ರಿಯಾಯಿತಿ ನೀಡುತ್ತಿದ್ದು, ಹೊಸ ಆಫರ್ ನೊಂದಿಗೆ ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಹೀರೋ ಮೋಟೊಕಾರ್ಪ್ ಘೋಷಣೆ ಮಾಡಿರುವ ರೂ. 31 ಸಾವಿರ ಡಿಸ್ಕೌಂಟ್ ನಲ್ಲಿ ರೂ. 6,500 ಮೌಲ್ಯದ ಸ್ಟಿಕ್ಕರ್ ಪ್ರೈಸ್ ಡಿಸ್ಕೌಂಟ್, ರೂ. 5 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಬೋನಸ್, ರೂ. 8,259 ಮೌಲ್ಯದ ಬ್ಯಾಟರಿ ವಾರಂಟಿ ಅವಧಿ ವಿಸ್ತರಣೆ, ರೂ.7,500 ಮೌಲ್ಯದ ಲಾಯಲ್ಟಿ ಬೋನಸ್, ರೂ. 2,500 ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ.1,125 ಮೈಲ್ಯದ ಚಂದಾದಾರಿಕೆ ಯೋಜನೆಯ ಡಿಸ್ಕೌಂಟ್ ನೀಡಲಾಗುತ್ತಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಯೊಂದಿಗೆ 150 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಡಾಟ್ ಒನ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಡಿಸ್ಕೌಂಟ್ ಸೌಲಭ್ಯದೊಂದಿಗೆ ಹೀರೋ ಮೋಟೊಕಾರ್ಪ್ ಕಂಪನಿಯು ವಿಡಾ ವಿ1 ಇವಿ ಸ್ಕೂಟರ್ ಖರೀದಿದಾರರಿಗೆ ಸುಲಭ ಹಣಕಾಸು ಸೌಲಭ್ಯಗಳನ್ನು ಸಹ ನೀಡುತ್ತಿದ್ದು, ವಿವಿಧ ಬ್ಯಾಂಕ್ ಗಳೊಂದಿಗೆ ಶೇಕಡಾ 5.99ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುತ್ತದೆ. ಪ್ರತಿ ತಿಂಗಳಿಗೆ ಕನಿಷ್ಠ ರೂ.2,429 ಇಎಂಐನೊಂದಿಗೆ ಸಾಲಸೌಲಭ್ಯಗಳು ಲಭ್ಯವಿದ್ದು, ಸದ್ಯ ಇದು ಬೆಂಗಳೂರಿನಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 1.60 ಲಕ್ಷ ಬೆಲೆ ಹೊಂದಿದೆ.

ವಿ1 ಇವಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ವಿ1 ಪ್ಲಸ್ ಮತ್ತು ವಿ1 ಪ್ರೊ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇವು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 3.44 kWh ಬ್ಯಾಟರಿ ಪ್ಯಾಕ್ ಮತ್ತು 3.94 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿವೆ. ಈ ಮೂಲಕ ವಿಡಾ ವಿ1 ಪ್ಲಸ್ ವೆರಿಯೆಂಟ್ ಪ್ರತಿ ಚಾರ್ಜ್ ಗೆ ಗರಿಷ್ಠ 143 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ವಿ1 ಪ್ರೊ 165 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಎರಡು ಇವಿ ಸ್ಕೂಟರ್ ಗಳು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 3.2 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕಂಪನಿಯು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿರಲಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ಇದನ್ನೂ ಓದಿ: ರೂ. 25 ಸಾವಿರ ಬೆಲೆ ಇಳಿಕೆಯೊಂದಿಗೆ ಹೊಸ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ

ಇದರಲ್ಲಿ ಮತ್ತೊಂದು ಪ್ರಮುಖ ತಂತ್ರಜ್ಞಾನ ಸೌಲಭ್ಯವೆಂದರೆ ರೈಡಿಂಗ್ ವೇಳೆ ಬ್ಯಾಟರಿ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದ ನಂತರವೂ ಕನಿಷ್ಠ 8 ಕಿ.ಮೀ ದೂರವನ್ನು ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಚಾಲನೆ ಮಾಡಬಹುದಾದ ಅವಕಾಶ ನೀಡುತ್ತದೆ. ಇದರಿಂದ ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾದರೂ ಹತ್ತಿರ ಚಾರ್ಜಿಂಗ್ ನಿಲ್ದಾಣಕ್ಕೆ ತಲುಪಲು ಈ ಸೌಲಭ್ಯವು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ಇವಿ ಸ್ಕೂಟರ್ ಗಳು ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿವೆ.

ಈ ಮೂಲಕ ಹೊಸ ವಿಡಾ 1 ಇವಿ ಸ್ಕೂಟರ್ ಗಳಲ್ಲಿ ಕರ್ವ್ ಡಿಸೈನ್ ಪ್ರೇರಿತ ಸ್ಪ್ಲೀಟ್ ಸೀಟ್, ಕೀ ಲೆಸ್ ಕಂಟ್ರೊಲ್, ಎಮರ್ಜೆನ್ಸಿ ಕಾಲ್, ಕ್ರೂಸ್ ಕಂಟ್ರೊಲ್, ಟು ವೇ ಥ್ರೊಟಲ್ ಸೌಲಭ್ಯಗಳನ್ನು ಹೊಂದಿರಲಿದ್ದು, ಸಣ್ಣ ಗಾತ್ರದ ವಿಂಡ್ ಸ್ಕ್ರೀನ್ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಸೌಲಭ್ಯಗಳಿವೆ.