ರೂ. 25 ಸಾವಿರ ಬೆಲೆ ಇಳಿಕೆಯೊಂದಿಗೆ ಹೊಸ ಕವಾಸಕಿ ಡಬ್ಲ್ಯೂ175 ಬೈಕ್ ಬಿಡುಗಡೆ
ಕವಾಸಕಿ ಕಂಪನಿಯು ತನ್ನ ಕಡಿಮೆ ಬೆಲೆಯ ಹೊಸ ಡಬ್ಲ್ಯೂ175 ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕವಾಸಕಿ (kawasaki) ತನ್ನ ಹೊಸ ಡಬ್ಲ್ಯೂ175 ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ಬೈಕ್ ಮಾದರಿಯು ಈ ಹಿಂದಿನ ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 1.22 ಲಕ್ಷ ಬೆಲೆ ಹೊಂದಿದೆ.
ಭಾರತದಲ್ಲಿ ಕಳೆದ ವರ್ಷ ಬಿಡುಗಡೆಗೊಂಡಿದ್ದ ಕವಾಸಕಿ ಹೊಸ ಡಬ್ಲ್ಯೂ175 ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.47 ಲಕ್ಷ ಮತ್ತು 1.49 ಲಕ್ಷ ಬೆಲೆ ಹೊಂದಿತ್ತು. ಇದೀಗ ನವೀಕೃತ್ ಮಾದರಿಗಳು ಎಕ್ಸ್ ಶೋರೂಂ ಪ್ರಕಾರ ರೂ. 1.22 ಲಕ್ಷದಿಂದ ರೂ. 1.35 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಮಾದರಿಯು ಒಟ್ಟು ರೂ. 25 ಸಾವಿರ ಕಡಿಮೆ ಬೆಲೆ ಹೊಂದಿಂತಾಗಿದೆ.
ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?
ಡಬ್ಲ್ಯೂ175 ಬೈಕ್ ಮಾದರಿಯು ತಾಂತ್ರಿಕ ಸೌಲಭ್ಯಗಳಿಗೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ಸ್ಟ್ರೀಟ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಳೆದ ವಾರ ಡಬ್ಲ್ಯೂ175 ಸ್ಟ್ರೀಟ್ ಬಿಡುಗಡೆ ಮಾಡಿದ್ದ ಕವಾಸಕಿ ಕಂಪನಿ ಇದೀಗ ಡಬ್ಲ್ಯೂ175 ಸ್ಟ್ಯಾಂಡರ್ಡ್ ಮಾದರಿಯನ್ನು ಪರಿಚಯಿಸಿದೆ.
ಹೊಸ ಬೈಕ್ ಮಾದರಿಯೊಂದಿಗೆ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿರುವ ಕವಾಸಕಿ ಕಂಪನಿ ರಾಯಲ್ ಎನ್ಫೀಲ್ಡ್ ಹಂಟರ್ 350 ಮಾದರಿಗೆ ಉತ್ತಮ ಪೈಪೋಟಿ ನೀಡಲಿದ್ದು, ಇದು ಎಬೊನಿ ಮತ್ತು ಕ್ಯಾಂಡಿ ರೆಡ್ ಎನ್ನುವ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಟ್ಯೂಬ್ ವೈಶಿಷ್ಟ್ಯತೆಯ 17 ಇಂಚಿನ ವೈರ್ ಸ್ಪೋಕ್ ವ್ಹೀಲ್ ಗಳು, ಹೊಲೊಜೆನ್ ಹೆಡ್ ಲ್ಯಾಂಪ್, ದೊಡ್ಡದಾದ ಅನಲಾಗ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸಣ್ಣದಾದ ಎಲ್ಇಡಿ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಹೊಂದಿದೆ.
ಆದರೆ ಡಬ್ಲ್ಯು175 ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರುವ ಹೊಸ ಡಬ್ಲ್ಯೂ175 ಸ್ಟ್ರೀಟ್ ಮಾದರಿಯು ರೆಟ್ರೋ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಗಮನಸೆಳೆಯುತ್ತಿದ್ದು, ಇದರಲ್ಲಿ ಪ್ರಕಾಶಮಾನವಾಗಿರುವ ರೌಂಡ್ ಹಾಲೋಜೆನ್ ಹೆಡ್ ಲ್ಯಾಂಪ್, ಟಿಯರ್ ಡ್ರಾಫ್ ವಿನ್ಯಾಸದ ಫ್ಯೂಲ್ ಟ್ಯಾಂಕ್ ಸೇರಿದಂತೆ ಟ್ಯೂಬ್ ಲೆಸ್ ಟೈರ್ ವೈಶಿಷ್ಟ್ಯತೆಯ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೊಂದಿಗೆ ಆಕರ್ಷಕ ಬೆಲೆಯ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಕವಾಸಕಿ ಕಂಪನಿಯು ಡಬ್ಲ್ಯೂ175 ಬೈಕಿನಲ್ಲಿ 177 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಜೋಡಿಸಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 13 ಹಾರ್ಸ್ ಪವರ್ ಮತ್ತು 13.2 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಸೇರಿದಂತೆ ಮುಂಭಾಗ ಚಕ್ರದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 110 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.
ಈ ಮೂಲಕ ಇದು ಪ್ರೀಮಿಯಂ ಬ್ರಾಂಡ್ ಗಳಲ್ಲಿ ಕಡಿಮೆ ಬೆಲೆ ಬೈಕ್ ಉತ್ಪನ್ನಗಳನ್ನು ಎದುರು ನೋಡುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದ್ದು, ಇದು ರಾಯಲ್ ಎನ್ಫೀಲ್ಡ್ ಹಂಟರ್ 350 ಸೇರಿದಂತೆ ಟಿವಿಎಸ್ ರೋನಿನ್, ಯಮಹಾ ಎಫ್ ಜೆಡ್-ಎಕ್ಸ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.