ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಮೇಲೆ ಸಖತ್ ಆಫರ್ ನೀಡುತ್ತಿದೆ ರೆನಾಲ್ಟ್
ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳ ಮೇಲೆ ಆಕರ್ಷಕ ಇಯರ್ ಎಂಡ್ ಆಫರ್ ನೀಡುತ್ತಿದ್ದು, ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ಬಜೆಟ್ ಬೆಲೆಯ ಆಕರ್ಷಕ ಕಾರು ಮಾದರಿಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ರೆನಾಲ್ಟ್ ಇಂಡಿಯಾ (Renault India) ಕಂಪನಿಯು ತನ್ನ ಸಂಭಾವ್ಯ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಕ್ವಿಡ್, ಕೈಗರ್, ಟ್ರೈಬರ್ ಕಾರುಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ಘೋಷಿಸಿದೆ. ಹೊಸ ಆಫರ್ ಗಳಲ್ಲಿ ಕಂಪನಿಯು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಲೊಯಾಲಿಟಿ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಗ್ರಾಹಕರು ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಕ್ವಿಡ್ ಹ್ಯಾಚ್ ಬ್ಯಾಕ್
ಬಜೆಟ್ ಬೆಲೆಯ ಹ್ಯಾಚ್ ಬ್ಯಾಕ್ ಕಾರುಗಳ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಕ್ವಿಡ್ ಕಾರು ಮಾದರಿಯು 2015ರಿಂದಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕ್ವಿಡ್ ಕಾರಿನ ಮೇಲೆ ಕಂಪನಿಯು ಒಟ್ಟಾರೆ ರೂ. 50 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 20 ಸಾವಿರ ಮೌಲ್ಯದ ಕ್ಯಾಶ್ ಬ್ಯಾಕ್, ರೂ.20 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮತ್ತು ರೂ. 10 ಸಾವಿರ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ. ಬಿಎಸ್6 ಎರಡನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡ ಪೂರೈಸಿರುವ ಹೊಸ ಕ್ವಿಡ್ ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 4.70 ಲಕ್ಷದಿಂದ ರೂ. 6.45 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ ಮಾಹಿತಿ ಬಹಿರಂಗ
ಟ್ರೈಬರ್ ಮಿನಿ ಎಂಪಿವಿ
ರೆನಾಲ್ಟ್ ಕಂಪನಿಯು ಟ್ರೈಬರ್ ಮಿನಿ ಎಂಪಿವಿ ಖರೀದಿಯ ಮೇಲೆ ರೂ. 20 ಸಾವಿರ ಕ್ಯಾಶ್ ಬ್ಯಾಕ್ ಒಳಗೊಂಡ ರೂ. 50 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಹೆಚ್ಚಿನ ಆಫರ್ ಅನ್ವಯಿಸಲಿದ್ದು, ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಟ್ರೈಬರ್ ಕಾರು ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 6.33 ಲಕ್ಷದಿಂದ ರೂ. 8.97 ಲಕ್ಷ ಬೆಲೆ ಹೊಂದಿದ್ದು, ಇದು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.
ಕೈಗರ್ ಕಂಪ್ಯಾಕ್ಟ್ ಎಸ್ ಯುವಿ
ಕೈಗರ್ ಕಂಪ್ಯಾಕ್ಟ್ ಎಸ್ ಯುವಿ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ಉತ್ತಮ ಆಫರ್ ನೀಡುತ್ತಿದ್ದು, ಗರಿಷ್ಠ ರೂ. 65 ಸಾವಿರ ಮೌಲ್ಯದ ಆಫರ್ ಘೋಷಿಸಿದೆ. ಹೊಸ ಆಫರ್ ಗಳು ಆಯ್ದ ವೆರಿಯೆಂಟ್ ಗಳ ಖರೀದಿ ಮೇಲೆ ಮಾತ್ರ ಅನ್ವಯಿಸಲಿದ್ದು, ವೆಹಿಕಲ್ ಸ್ಕಾರ್ಪೇಜ್ ಪಾಲಿಸಿ ಅಡಿಯಲ್ಲೂ ಕೆಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಇದು ಕೂಡಾ 1.0 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ರೆನಾಲ್ಟ್ ಇಂಡಿಯಾ ಕಂಪನಿಗೆ ಇದು ಹೆಚ್ಚಿನ ಬೇಡಿಕೆ ತಂದುಕೊಡುತ್ತಿರುವ ಕಾರು ಮಾದರಿಯಾಗಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಇದರೊಂದಿಗೆ ಹೊಸ ಕಾರುಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ಗ್ರಾಮೀಣ ಭಾಗದ ಗ್ರಾಹಕರು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರಿಗಾಗಿ ಹೆಚ್ಚುವರಿಯಾಗಿ ರೂ.5 ಸಾವಿರ ಮೌಲ್ಯದ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ನೈಟ್ ಎಡಿಷನ್ ಗಳ ಮೇಲೆ ನೀಡಲಾಗಿಲ್ಲ.