ಭರ್ಜರಿ ಮೈಲೇಜ್ ನೊಂದಿಗೆ ಆಕರ್ಷಕ ಬೆಲೆಯ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಕೈನೆಟಿಕ್ ಗ್ರೀನ್ ಕಂಪನಿಯು ತನ್ನ ಹೊಚ್ಚ ಹೊಸ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಭಾರತದಲ್ಲಿ ಈ ಹಿಂದೆ ಲೂನಾ ಮತ್ತು ಕೈನೆಟಿಕ್-ಹೋಂಡಾ ಸ್ಕೂಟರ್ ಬ್ರಾಂಡ್ ಗಳೊಂದಿಗೆ ಭಾರೀ ಜನಪ್ರಿಯತೆ ಸಾಧಿಸಿದ್ದ ಕೈನೆಟಿಕ್ ಕಂಪನಿಯು ಇದೀಗ ಕೈನೆಟಿಕ್ ಗ್ರೀನ್ (Kinetic Green) ಹೆಸರಿನೊಂದಿಗೆ ತನ್ನ ಹೊಚ್ಚ ಹೊಸ ಕೈನೆಟಿಕ್ ಜುಲು (Kinetic Green) ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 94,900 ಬೆಲೆ ಹೊಂದಿದೆ.
ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಪಡೆದುಕೊಂಡಿದ್ದು, ಸರಳ ವಿನ್ಯಾಸ ಮತ್ತು ಅತ್ಯುತ್ತಮ ತಾಂತ್ರಿಕ ಅಂಶಗಳೊಂದಿಗೆ ನಗರ ಸಂಚಾರಕ್ಕೆ ಉತ್ತಮ ಆಯ್ಕೆಯಾಗಿದೆ.
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2.27kWh ಲೀ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ BLDC ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, ಇದು ಪ್ರತಿ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 104 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಬಜಾಜ್ ಚೇತಕ್ ಅರ್ಬೆನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
BLDC ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 2.8 ಹಾರ್ಸ್ ಪವರ್ ಉತ್ಪಾದಿಸುವ ಹೊಸ ಇವಿ ಸ್ಕೂಟರ್ ನಗರದಲ್ಲಿ ಟ್ರಾಫಿಕ್ ದಟ್ಟಣೆ ಪ್ರದೇಶಗಳಲ್ಲಿ ಅರಾಮವಾಗಿ ಸಂಚರಿಸಲು ಅನುಕೂಲಕರವಾಗಿದ್ದು, ಇದು 15 ಎಎಂಪಿ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೆಲವೇ ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಕೈನೆಟಿಕ್ ಜುಲು ಇವಿ ಸ್ಕೂಟರ್ ಮಾದರಿಯು ಇತರೆ ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ಕಂಪ್ಯಾಕ್ಟ್ ವಿನ್ಯಾಸ ಹೊಂದಿದ್ದು, ಇದು 1,830 ಎಂಎಂ ಉದ್ದಳತೆಯೊಂದಿಗೆ 715 ಎಂಎಂ ಅಗಲ, 1,135 ಎಂಎಂ ಎತ್ತರ ಮತ್ತು 160 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ 93 ಕೆಜಿ ಒಟ್ಟಾರೆ ತೂಕ ಹೊಂದಿದೆ.
ಇದರೊಂದಿಗೆ ಹೊಸ ಇವಿ ಸ್ಕೂಟರಿನಲ್ಲಿ ಎಲ್ಇಡಿ ಡಿಎಲ್ಆರ್ ಗಳು, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜಿಂಗ್ ಪೋರ್ಟ್, ಫ್ರಂಟ್ ಬ್ಯಾಗ್ ಹುಕ್, ಫ್ರಂಟ್ ಸ್ಟೋರೇಜ್ ಬಾಕ್ಸ್, ಸ್ಟೈಲಿಶ್ ಆಗಿರುವ ಗ್ರ್ಯಾಬ್ ಹ್ಯಾಂಡಲ್ ಮತ್ತು ಅತ್ಯುತ್ತಮವಾಗಿರುವ ಅಂಡರ್ ಸೀಟ್ ಸ್ಟೋರೇಜ್ ನೀಡಲಾಗಿದ್ದು, ಸುರಕ್ಷತೆಗಾಗಿ ಆಟೋ ಕಟ್ ಚಾರ್ಜರ್, ಫ್ರಂಟ್ ಅಂಡ್ ರಿಯರ್ ಡಿಸ್ಕ್ ಬ್ರೇಕ್, ಸೈಡ್ ಸ್ಟ್ಯಾಂಡ್ ಸೆನ್ಸಾರ್ ಮತ್ತು ಅಂಡರ್ ಸೀಟ್ ಸ್ಟೋರೇಜ್ ಲೈಟಿಂಗ್ ನೀಡಲಾಗಿದೆ.
ಇದನ್ನೂ ಓದಿ: ವಿಶೇಷ ಫೀಚರ್ಸ್ ಗಳೊಂದಿಗೆ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕ್ ಬಿಡುಗಡೆ
ಇನ್ನು ಹೊಸ ಇವಿ ಸ್ಕೂಟರಿನಲ್ಲಿ ಕೈನೆಟಿಕ್ ಕಂಪನಿಯು ಕ್ಲೌಡ್ ಗ್ರೇ, ಎಫ್ ಬಿ ಬ್ಲ್ಯೂ, ಫಿಕ್ಸೆಲ್ ವೈಟ್, ಬ್ಲ್ಯಾಕ್ ಎಕ್ಸ್, ಇನ್ಸ್ಟಾ ಆರೇಂಜ್ ಮತ್ತು ಯುಟ್ಯೂಬ್ ರೆಡ್ ಬಣ್ಣಗಳ ಆಯ್ಕೆ ನೀಡಿದ್ದು, ಇದು ಓಲಾ ಎಸ್1 ಎಕ್ಸ್, ಟಿವಿಎಸ್ ಐಕ್ಯೂಬ್ ಸೇರಿದಂತೆ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಿಗೆ ಅತ್ಯುತ್ತಮ ಪೈಪೋಟಿಯಾಗಿದೆ.