AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honda Car Discounts: ಹೋಂಡಾ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ನವೆಂಬರ್ ತಿಂಗಳ ಡಿಸ್ಕೌಂಟ್ ಘೋಷಣೆ ಮಾಡಿದೆ.

Honda Car Discounts: ಹೋಂಡಾ ಪ್ರಮುಖ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಹೋಂಡಾ ಕಾರು
Praveen Sannamani
|

Updated on:Nov 02, 2022 | 8:08 PM

Share

ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದ್ದು, ಗ್ರಾಹಕರು ಹೋಂಡಾ ಹೊಸ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 63 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ. ಹೊಸ ಆಫರ್ ಗಳು ನಾಲ್ಕನೇ ತಲೆಮಾರಿನ ಸಿಟಿ ಮತ್ತು ಐದನೇ ತಲೆಮಾರಿನ ಸಿಟಿ ಸೆಡಾನ್ ಕಾರುಗಳ ಜೊತೆಗೆ ಅಮೇಜ್, ಜಾಝ್, ಡಬ್ಲ್ಯುಆರ್-ವಿ ಕಾರುಗಳ ಮೇಲೆ ಆಫರ್ ನೀಡುತ್ತಿದೆ.

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್​ಯುವಿ

ಹೋಂಡಾ ಕಂಪನಿಯು ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್​ಯುವಿ ಖರೀದಿ ಮೇಲೆ ಗರಿಷ್ಠ ರೂ. 63,144 ತನಕ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ರೂ. 30 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 36,144 ಮೌಲ್ಯದ ಉಚಿತ ಆಕ್ಸೆಸರಿಸ್ ಪಡೆದುಕೊಳ್ಳಬಹುದು. ಇನ್ನುಳಿದಂತೆ ಹೊಸ ಕಾರು ಖರೀದಿಗಾಗಿ ರೂ. 10 ಸಾವಿರ ತನಕ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಬಲೆನೊ ಸಿಎನ್​ಜಿ ಬಿಡುಗಡೆ!

ಸಿಟಿ ಸೆಡಾನ್(5ನೇ ತಲೆಮಾರಿನ ಆವೃತ್ತಿ)

ಸೆಡಾನ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸೆಡಾನ್ ಹೊಸ ತಲೆಮಾರಿನ ಆವೃತ್ತಿಯ ಮೇಲೆ ಹೋಂಡಾ ಕಂಪನಿಯು ರೂ. 59,292 ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮ್ಯಾನುವಲ್ ಮಾದರಿಗಳ ಖರೀದಿ ಮೇಲೆ ರೂ. 30 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 32,292 ಮೌಲ್ಯದ ಉಚಿತ ಆಕ್ಸೆಸರಿಸ್ ಖರೀದಿಸಬಹುದಾಗಿದೆ. ಜೊತೆಗೆ ಹೊಸ ಕಾರು ಖರೀದಿಗಾಗಿ ರೂ. 10 ಸಾವಿರ ತನಕ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ಹೈಬ್ರಿಡ್ ಸಿಟಿ ಮಾದರಿಯ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ಜಾಝ್ ಹ್ಯಾಚ್​ಬ್ಯಾಕ್

ಪ್ರೀಮಿಯಂ ಹ್ಯಾಚ್​ಬ್ಯಾಕ್ ಕಾರು ಮಾದರಿಯಾಗಿರುವ ಜಾಝ್ ಆವೃತ್ತಿಯ ಖರೀದಿಯ ಮೇಲೆ ಹೋಂಡಾ ಕಂಪನಿಯು ರೂ. 25 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ನಲ್ಲಿ ರೂ. 10 ಸಾವಿರದಷ್ಟು ಎಕ್ಸ್ ಚೆಂಜ್, ರೂ. 7 ಸಾವಿರ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ಲಾಯಲ್ಟಿ ಬೋನಸ್ ಮತ್ತು ರೂ. 3 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿರಲಿದೆ.

ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 500 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಇವಿ ಕಾರು

ಅಮೇಜ್ ಕಂಪ್ಯಾಕ್ಟ್ ಸೆಡಾನ್

ಕಂಪ್ಯಾಕ್ಟ್ ಸೆಡಾನ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಅಮೇಜ್ ಖರೀದಿಯ ಮೇಲೆ ಕಂಪನಿಯು ರೂ. 19,896 ಆಫರ್ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ ರೂ. 10 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 11,896 ಮೌಲ್ಯದ ಆಕ್ಸೆಸರಿಸ್ ಲಭ್ಯವಿದೆ. ಹಾಗೆಯೇ ಹೊಸ ಕಾರು ಖರೀದಿಯ ಮೇಲೆ ರೂ. 5 ಸಾವಿರ ತನಕ ಲಾಯಲ್ಟಿ ಬೋನಸ್ ಮತ್ತು ರೂ. 3 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ.

ಸಿಟಿ ಸೆಡಾನ್(ನಾಲ್ಕನೇ ತಲೆಮಾರಿನ ಆವೃತ್ತಿ)

ಹೋಂಡಾ ಕಂಪನಿಯು ಹೊಸ ತಲೆಮಾರಿನ ಸಿಟಿ ಸೆಡಾನ್ ಮಾದರಿಯೊಂದಿಗೆ ಹಳೆಯ ತಲೆಮಾರಿನ ಸಿಟಿ ಮಾದರಿಯ ಮಾರಾಟವನ್ನು ಮುಂದುವರಿಸಿದ್ದು, ಹಳೆಯ ಮಾದರಿಯ ಮೇಲೆ ರೂ. 5 ಸಾವಿರ ತನಕ ಲಾಯಲ್ಟಿ ಬೋನಸ್ ನೀಡುತ್ತಿದೆ. ಹಳೆಯ ತಲೆಮಾರಿನ ಮಾದರಿಯು ಸದ್ಯ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ತಲೆಮಾರಿನ ಆವೃತ್ತಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಮಾದರಿಗಳು ಖರೀದಿಗೆ ಲಭ್ಯವಿವೆ.

Published On - 8:08 pm, Wed, 2 November 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ