ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದ್ದು, ಗ್ರಾಹಕರು ಹೋಂಡಾ ಹೊಸ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 63 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ. ಹೊಸ ಆಫರ್ ಗಳು ನಾಲ್ಕನೇ ತಲೆಮಾರಿನ ಸಿಟಿ ಮತ್ತು ಐದನೇ ತಲೆಮಾರಿನ ಸಿಟಿ ಸೆಡಾನ್ ಕಾರುಗಳ ಜೊತೆಗೆ ಅಮೇಜ್, ಜಾಝ್, ಡಬ್ಲ್ಯುಆರ್-ವಿ ಕಾರುಗಳ ಮೇಲೆ ಆಫರ್ ನೀಡುತ್ತಿದೆ.
ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್ಯುವಿ
ಹೋಂಡಾ ಕಂಪನಿಯು ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್ಯುವಿ ಖರೀದಿ ಮೇಲೆ ಗರಿಷ್ಠ ರೂ. 63,144 ತನಕ ಆಫರ್ ಘೋಷಣೆ ಮಾಡಿದ್ದು, ಇದರಲ್ಲಿ ರೂ. 30 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 36,144 ಮೌಲ್ಯದ ಉಚಿತ ಆಕ್ಸೆಸರಿಸ್ ಪಡೆದುಕೊಳ್ಳಬಹುದು. ಇನ್ನುಳಿದಂತೆ ಹೊಸ ಕಾರು ಖರೀದಿಗಾಗಿ ರೂ. 10 ಸಾವಿರ ತನಕ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಬಲೆನೊ ಸಿಎನ್ಜಿ ಬಿಡುಗಡೆ!
ಸಿಟಿ ಸೆಡಾನ್(5ನೇ ತಲೆಮಾರಿನ ಆವೃತ್ತಿ)
ಸೆಡಾನ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸೆಡಾನ್ ಹೊಸ ತಲೆಮಾರಿನ ಆವೃತ್ತಿಯ ಮೇಲೆ ಹೋಂಡಾ ಕಂಪನಿಯು ರೂ. 59,292 ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮ್ಯಾನುವಲ್ ಮಾದರಿಗಳ ಖರೀದಿ ಮೇಲೆ ರೂ. 30 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 32,292 ಮೌಲ್ಯದ ಉಚಿತ ಆಕ್ಸೆಸರಿಸ್ ಖರೀದಿಸಬಹುದಾಗಿದೆ. ಜೊತೆಗೆ ಹೊಸ ಕಾರು ಖರೀದಿಗಾಗಿ ರೂ. 10 ಸಾವಿರ ತನಕ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ಹೈಬ್ರಿಡ್ ಸಿಟಿ ಮಾದರಿಯ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.
ಜಾಝ್ ಹ್ಯಾಚ್ಬ್ಯಾಕ್
ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು ಮಾದರಿಯಾಗಿರುವ ಜಾಝ್ ಆವೃತ್ತಿಯ ಖರೀದಿಯ ಮೇಲೆ ಹೋಂಡಾ ಕಂಪನಿಯು ರೂ. 25 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ನಲ್ಲಿ ರೂ. 10 ಸಾವಿರದಷ್ಟು ಎಕ್ಸ್ ಚೆಂಜ್, ರೂ. 7 ಸಾವಿರ ಎಕ್ಸ್ ಚೆಂಜ್ ಬೋನಸ್, ರೂ. 5 ಸಾವಿರ ಲಾಯಲ್ಟಿ ಬೋನಸ್ ಮತ್ತು ರೂ. 3 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿರಲಿದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 500 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡುತ್ತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಈ ಇವಿ ಕಾರು
ಅಮೇಜ್ ಕಂಪ್ಯಾಕ್ಟ್ ಸೆಡಾನ್
ಕಂಪ್ಯಾಕ್ಟ್ ಸೆಡಾನ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಅಮೇಜ್ ಖರೀದಿಯ ಮೇಲೆ ಕಂಪನಿಯು ರೂ. 19,896 ಆಫರ್ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ ರೂ. 10 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಅಥವಾ ರೂ. 11,896 ಮೌಲ್ಯದ ಆಕ್ಸೆಸರಿಸ್ ಲಭ್ಯವಿದೆ. ಹಾಗೆಯೇ ಹೊಸ ಕಾರು ಖರೀದಿಯ ಮೇಲೆ ರೂ. 5 ಸಾವಿರ ತನಕ ಲಾಯಲ್ಟಿ ಬೋನಸ್ ಮತ್ತು ರೂ. 3 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ.
ಸಿಟಿ ಸೆಡಾನ್(ನಾಲ್ಕನೇ ತಲೆಮಾರಿನ ಆವೃತ್ತಿ)
ಹೋಂಡಾ ಕಂಪನಿಯು ಹೊಸ ತಲೆಮಾರಿನ ಸಿಟಿ ಸೆಡಾನ್ ಮಾದರಿಯೊಂದಿಗೆ ಹಳೆಯ ತಲೆಮಾರಿನ ಸಿಟಿ ಮಾದರಿಯ ಮಾರಾಟವನ್ನು ಮುಂದುವರಿಸಿದ್ದು, ಹಳೆಯ ಮಾದರಿಯ ಮೇಲೆ ರೂ. 5 ಸಾವಿರ ತನಕ ಲಾಯಲ್ಟಿ ಬೋನಸ್ ನೀಡುತ್ತಿದೆ. ಹಳೆಯ ತಲೆಮಾರಿನ ಮಾದರಿಯು ಸದ್ಯ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ತಲೆಮಾರಿನ ಆವೃತ್ತಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಹೈಬ್ರಿಡ್ ಮಾದರಿಗಳು ಖರೀದಿಗೆ ಲಭ್ಯವಿವೆ.
Published On - 8:08 pm, Wed, 2 November 22