ಬೈಕ್ ಮಾರಾಟ: ಹಬ್ಬದ ಋತುವಿನಲ್ಲಿ ಭರ್ಜರಿ ಬೇಡಿಕೆಯೊಂದಿಗೆ ನಂ.1 ಸ್ಥಾನ ಕಾಯ್ದುಕೊಂಡ ಹೀರೋ ಮೋಟೊಕಾರ್ಪ್

ದ್ವಿಚಕ್ರ-ವಾಹನಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ದಸರಾ ಮತ್ತು ದೀಪಾವಳಿ ಸಂಭ್ರಮದ ಅವಧಿಯಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಬೈಕ್ ಮಾರಾಟ: ಹಬ್ಬದ ಋತುವಿನಲ್ಲಿ ಭರ್ಜರಿ ಬೇಡಿಕೆಯೊಂದಿಗೆ ನಂ.1 ಸ್ಥಾನ ಕಾಯ್ದುಕೊಂಡ ಹೀರೋ ಮೋಟೊಕಾರ್ಪ್
ಭರ್ಜರಿ ಬೇಡಿಕೆಯೊಂದಿಗೆ ನಂ.1 ಸ್ಥಾನ ಕಾಯ್ದುಕೊಂಡ ಹೀರೋ ಮೋಟೊಕಾರ್ಪ್
Follow us
Praveen Sannamani
|

Updated on: Nov 02, 2022 | 2:42 PM

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನ(Two Wheeler) ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಹೀರೋ ಮೋಟೊಕಾರ್ಪ್(Hero Motocorp) ಕಂಪನಿಯು ಕಳೆದ ತಿಂಗಳ ಮಾರಾಟ ವರದಿ ಪ್ರಕಟಿಸಿದ್ದು, ಕಂಪನಿಯು ಶೇ. 20 ರಷ್ಟು ಬೆಳವಣಿಗೆಯೊಂದಿಗೆ 4.54 ಲಕ್ಷ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಗಳಿಂದ ಕೋವಿಡ್ ಪರಿಣಾಮ ತಗ್ಗಿದ್ದ ವಾಹನ ಮಾರಾಟ ಪ್ರಮಾಣವು ಇದೀಗ ಸಾಕಷ್ಟು ಸುಧಾರಿಸಿದ್ದು, ಇದೀಗ ಹೀರೋ ಕಂಪನಿಯು ಎರಡಂಕಿಯ ಬೆಳವಣಿಗೆ ಸಾಧಿಸಿದೆ.

ಹಬ್ಬದ ಋತುವಿನಲ್ಲಿ ಭರ್ಜರಿ ಬೇಡಿಕೆ

ಭಾರತದಲ್ಲಿ ಹಬ್ಬದ ಋತುಗಳಲ್ಲಿ ಸಾಮಾನ್ಯವಾಗಿ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಜೋರಾಗುತ್ತದೆ. ಪ್ರಮುಖ ಹಬ್ಬಗಳಲ್ಲಿ ಹೊಸ ವಾಹನಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡುವುದರಿಂದ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೆ ಭರ್ಜರಿ ಬೇಡಿಕೆ ಹರಿದುಬಂದಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯು ಸಹ ವಿವಿಧ ದ್ವಿಚಕ್ರ ವಾಹನಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಅಕ್ಟೋಬರ್ ಅವಧಿಯಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 4.19 ಲಕ್ಷ ಯುನಿಟ್ ಬೈಕ್ ಗಳನ್ನು ಮತ್ತು 35 ಸಾವಿರ ಯುನಿಟ್ ಸ್ಕೂಟರ್ ಗಳನ್ನು ಮಾರಾಟ ಮಾಡಿದ್ದು, ಮಾರಾಟ ಪಟ್ಟಿಯಲ್ಲಿ ಸ್ಪ್ಲೆಂಡರ್ ಪ್ಲಸ್, ಗ್ಲ್ಯಾಮರ್, ಸೂಪರ್ ಸ್ಪ್ಲೆಂಡರ್, ಎಕ್ಸ್ ಪಲ್ಸ್ 200 ಮತ್ತು ಡೆಸ್ಟಿನಿ 125 ಸ್ಕೂಟರ್ ಅಗ್ರಸ್ಥಾನದಲ್ಲಿವೆ.

ಇದನ್ನೂ ಓದಿ: ಎಥರ್ ಮತ್ತು ಓಲಾ ಇವಿ ಸ್ಕೂಟರ್ ಗಳ ಪ್ರತಿಸ್ಪರ್ಧಿ ಹೀರೋ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ವಿಶೇಷತೆಗಳಿವು!

ಹೊಸ ಆಫರ್ ಘೋಷಣೆ ಮಾಡಿದ್ದ ಹೀರೋ

ಹಬ್ಬದ ಋತುಗಳಲ್ಲಿ ಹೆಚ್ಚಿನ ಬೇಡಿಕೆ ಹರಿದುಬರುವ ಪರಿಣಾಮ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರಮುಖ ದ್ವಿಚಕ್ರ ವಾಹನಗಳ ಮೇಲೆ ಹಲವಾರು ಆಕರ್ಷಕ ಆಫರ್ ಘೋಷಣೆ ಮಾಡಿತ್ತು. ಸ್ಕೂಟರ್ ಗಳ ಖರೀದಿಗೆ ಮೇಲೆ ರೂ. 13,500 ಮೌಲ್ಯದ ಆಫರ್ ನೀಡಿದ್ದ ಕಂಪನಿಯು ಗ್ರಾಹಕರಿಗೆ 5 ವರ್ಷಗಳ ಉಚಿತ ಇನ್ಸುರೆನ್ಸ್, 2 ವರ್ಷಗಳ ಉಚಿತ ಸರ್ವಿಸ್, ರೂ. 3 ಸಾವಿರ ತನಕ ಎಕ್ಸ್ ಚೆಂಜ್ ಆಫರ್, ರೂ. 4 ಸಾವಿರ ಮೌಲ್ಯದ ಗಿಫ್ಟ್ ವೋಚರ್, ಐದು ವರ್ಷಗಳ ವಾರಂಟಿ ಮತ್ತು ಶೂನ್ಯ ಬಡ್ಡಿದರಲ್ಲಿ ಆಕರ್ಷಕ ಇಎಂಐ ಆಯ್ಕೆಗಳ ಸೌಲಭ್ಯಗಳನ್ನು ನೀಡಿತ್ತು.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ ಟೆಕ್, ಹೆಚ್ಎಫ್ ಡಿಲಕ್ಸ್, ಹೆಚ್ಎಫ್ 100, ಗ್ಲ್ಯಾಮರ್ ಟೆಕ್, ಪ್ಯಾಶನ್ ಟೆಕ್, ಸೂಪರ್ ಸ್ಪ್ಲೆಂಡರ್, ಗ್ಲ್ಯಾಮರ್, ಗ್ಲ್ಯಾಮರ್ ಕಾನ್ವಾಸ್, ಪ್ಯಾಶನ್ ಪ್ರೊ, ಎಕ್ಸ್ ಟ್ರಿಮ್ 160ಆರ್, ಎಕ್ಸ್ ಟ್ರಿಮ್ 200ಎಸ್, ಎಕ್ಸ್ ಪಲ್ಸ್ 200 4ವಿ ಮತ್ತು ಎಕ್ಸ್ ಪಲ್ಸ್ 200ಟಿ ಬೈಕ್ ಮಾದರಿಗಳನ್ನು ಮತ್ತು ಪ್ರೆಷರ್ ಪ್ಲಸ್ ಟೆಕ್, ಡೆಸ್ಟಿನಿ 125 ಟೆಕ್, ಮ್ಯಾಸ್ಟ್ರೊ ಎಡ್ಜ್ 125 ಮತ್ತು ಮ್ಯಾಸ್ಟ್ರೊ ಎಡ್ಜ್ 110 ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ