ಕೇವಲ ಒಂದೇ ವರ್ಷದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೋಂಡಾ ಶೈನ್ 100 ಬೈಕ್

|

Updated on: May 23, 2024 | 9:11 PM

ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಹೊಸ ಶೈನ್ 100 ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಕೇವಲ ಒಂದೇ ವರ್ಷದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೋಂಡಾ ಶೈನ್ 100 ಬೈಕ್
ಹೋಂಡಾ ಶೈನ್ 100 ಬೈಕ್
Follow us on

ಕೈಗೆಟುಕುವ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (Honda Motorcycle and Scooter India)  ಕಂಪನಿ ತನ್ನ ಹೊಸ ಶೈನ್ 100 (Shine 100) ಬೈಕ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಶೈನ್ 100 ಬೈಕ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕೇವಲ 1 ವರ್ಷದ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿದೆ.

100 ಸಿಸಿಯಿಂದ 110 ಸಿಸಿ ಬೈಕ್ ವಿಭಾಗದಲ್ಲಿ ತನ್ನದೇ ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆದಿರುವ ಶೈನ್ 100 ಮಾದರಿಯು ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 3 ಲಕ್ಷ ಯುನಿಟ್ ಮಾರಾಟಗೊಂಡಿದೆ. ಇದು ಈ ಸೆಗ್ಮೆಂಟ್ ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಬೈಕ್ ಮಾದರಿಯಾಗಿದ್ದು, ಆಕರ್ಷಕ ಬೆಲೆ ಮತ್ತು ಫೀಚರ್ಸ್ ಗಳೊಂದಿಗೆ ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹೊಸ ಶೈನ್ 100 ಬೈಕ್ ಮಾದರಿಯು ಕೇವಲ ಒಂದೇ ಒಂದು ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 64,900 ಬೆಲೆ ಹೊಂದಿದೆ. ಇದರೊಂದಿಗೆ ಹೊಸ ಬೈಕ್ ಆರ್ ಡಿಇ ಮಾನದಂಡ ಪೂರೈಸಿದ 99.7 ಸಿಸಿ, ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, ಇದು 4 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 7.61 ಹಾರ್ಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಹೊಸ ಬೈಕ್ ಮಾದರಿಯು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 55 ರಿಂದ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್

ಇನ್ನು ಹೊಸ ಶೈನ್ 100 ಬೈಕ್ ಮಾದರಿಯು ಶೈನ್ 125 ಮಾದರಿಯಿಂದ ಹಲವು ವಿನ್ಯಾಸ ವೈಶಿಷ್ಟ್ಯತೆಗಳನ್ನ ಎರವಲು ಪಡೆದುಕೊಂಡಿದ್ದು, ರೆಡ್, ಬ್ಲ್ಯೂ, ಗೋಲ್ಡ್, ಗ್ರಿನ್ ಮತ್ತು ಗ್ರೇ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದಲ್ಲದೆ ಹೊಸ ಬೈಕಿನಲ್ಲಿ ಹೋಂಡಾ ಕಂಪನಿಯು ಸಿಂಗಲ್ ಪೀಸ್ ಸೀಟ್ ಸೇರಿದಂತೆ ಆಲ್ ಬ್ಲ್ಯಾಕ್ ಅಲಾಯ್ ವ್ಹೀಲ್, ಹಾಲೋಜೆನ್ ಹೆಡ್ ಲ್ಯಾಂಪ್, ಅಲ್ಯುಮಿನಿಯಂ ಗ್ರ್ಯಾಬ್ ರೈಲ್, ಡ್ಯುಯಲ್ ಪಾಡ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಕಾಂಬಿ ಬ್ರೇಕಿಂಗ್ ಸಿಸ್ಟಂ ಮತ್ತು ಸೈಡ್ ಸ್ಟ್ಯಾಂಡ್ ಅಲರ್ಟ್ ಫೀಚರ್ಸ್ ನೀಡಲಾಗಿದೆ.