Bajaj CNG Bike: ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್

ವಾಹನ ಮಾರುಕಟ್ಟೆಯಲ್ಲಿ ಸಿಎನ್‌ಜಿ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಶೀಘ್ರದಲ್ಲಿಯೇ ಬಜಾಜ್ ಆಟೋ ಕಂಪನಿಯು ತನ್ನ ಬಹುನೀರಿಕ್ಷಿತ ಸಿಎನ್‌ಜಿ ಬೈಕ್ ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆಯಲ್ಲಿದೆ.

Bajaj CNG Bike: ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್
ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್
Follow us
Praveen Sannamani
|

Updated on:May 03, 2024 | 6:58 PM

ಹೆಚ್ಚುತ್ತಿರುವ ಮಾಲಿನ್ಯ ಮತ್ತು ದುಬಾರಿ ನಿರ್ವಹಣಾ ವೆಚ್ಚಗಳಿಂದಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕಡಿಮೆ ನಿರ್ವಹಣೆ ಹೊಂದಿರುವ ಸಿಎನ್ ಜಿ(CNG) ವಾಹನಗಳು ಇದೀಗ ಗಮನಸೆಳೆಯುತ್ತಿವೆ. ಹೀಗಾಗಿ ಬಜಾಜ್ ಆಟೋ ಕಂಪನಿಯು ಕೂಡಾ ತನ್ನ ಹೊಸ ಸಿಎನ್‌ಜಿ ಬೈಕ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಬೈಕ್ ಮುಂದಿನ ತಿಂಗಳು ಜೂನ್ 18ಕ್ಕೆ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಬಜಾಜ್ ಕಂಪನಿಯು ತನ್ನ ಹೊಸ ಸಿಎನ್‌ಜಿ ಬೈಕ್ ಮಾದರಿಯನ್ನು ಬ್ರೂಜರ್ ಹೆಸರಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಇದು ಪ್ಲಾಟಿನಾ ಬೈಕ್ ಮಾದರಿಯನ್ನು ಆಧರಿಸಿ ಬಿಡುಗಡೆಯಾಗಬಹುದಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ 110 ಸಿಸಿ ಇಲ್ಲವೇ 125 ಸಿಸಿ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಕಿಟ್ ಜೋಡಣೆ ಮಾಡಲಾಗುತ್ತಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ಭರ್ಜರಿ ಮೈಲೇಜ್ ನೀಡಲಿದೆ.

ಇದನ್ನೂ ಓದಿ: ಅತಿ ಕಡಿಮೆ ಬೆಲೆಯಲ್ಲಿ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಹೊಂದಿರುವ ಹೊಸ ಬೈಕ್ ಮಾದರಿಯನ್ನು ಬಜಾಜ್ ಕಂಪನಿಯು ಸದ್ಯಕ್ಕೆ ಬ್ರೂಜರ್ ಇ101 (Bruzer E101) ಕೋಡ್ ನೇಮ್ ನೊಂದಿಗೆ ಅಭಿವೃದ್ದಿಪಡಿಸಲಾಗುತ್ತಿದ್ದು, ಇದರಲ್ಲಿ ಲಭ್ಯತೆಗೆ ಅನುಗುಣವಾಗಿ ಸಿಎನ್‌ಜಿ ಜೊತೆ ಪೆಟ್ರೋಲ್ ಬಳಕೆ ಮಾಡಬಹುದಾಗಿದೆ. ಹೊಸ ಬೈಕ್ ಮಾದರಿಯನ್ನು ಬಜಾಜ್ ಕಂಪನಿಯು ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉತ್ತರಾಖಂಡದ ಪಂತ್ ನಗರದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಇದು ಎಂಟ್ರಿ ಲೆವಲ್ ಪೆಟ್ರೋಲ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿರುವ ಸಿಎನ್ ಜಿ ಬೈಕ್ ಮಾದರಿಯು 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ 70ರಿಂದ 75 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ. ಆದರೆ ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಹೊಸ ಬೈಕ್ ಮಾದರಿಯಲ್ಲಿ ಹಲವಾರು ಹೊಸ ಫೀಚರ್ಸ್ ನೀಡಿರುವ ಬಜಾಜ್ ಕಂಪನಿಯು ಬಳಕೆದಾರರಿಗೆ ಅನೂಕರವಾಗುವ ಹಲವು ಸರಳ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಿದೆ. ಜೊತೆಗೆ ಹೊಸ ಬೈಕಿನಲ್ಲಿ ಬಲ್ಬ್ ಇಂಡಿಕೇಟರ್ ನೊಂದಿಗೆ ಎಲ್ಇಡಿ ಹೆಡ್ ಲೈಟ್, ಬ್ರ್ಯಾಸ್ಡ್ ಹ್ಯಾಂಡಲ್‌ಬಾರ್‌ನೊಂದಿಗೆ ಹ್ಯಾಂಡ್‌ಗಾರ್ಡ್‌ಗಳು ಮತ್ತು ಮಿಶ್ರಲೋಹದ ಅಲಾಯ್ ಚಕ್ರಗಳನ್ನು ಜೋಡಣೆಯನ್ನು ನೀರಿಕ್ಷೆ ಮಾಡಬಹುದಾಗಿದೆ.

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಪ್ರಯಾಣಿಕರ ಬಳಕೆಯ ವಾಹನಗಳಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಮತ್ತು ಎಥೆನಾಲ್ ಇಂಧನ ಚಾಲಿತ ಮಾದರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೀಗ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ ಕಂಪನಿ ಸಹ ಇದೀಗ ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

Published On - 6:55 pm, Fri, 3 May 24