Honda CB350 BABT: ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಹೋಂಡಾ ಸಿಬಿ350 ಬಾಬ್ಟ್

|

Updated on: Nov 15, 2023 | 10:10 PM

ಹೊಸ ಬೈಕ್ ಆವೃತ್ತಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಮತ್ತೊಂದು ಹೊಸ ಕಫೆ ರೇಸರ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

Honda CB350 BABT: ಕ್ಲಾಸಿಕ್ 350 ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಹೋಂಡಾ ಸಿಬಿ350  ಬಾಬ್ಟ್
ಹೋಂಡಾ ಸಿಬಿ350 ಬಾಬ್ಟ್
Follow us on

ಬಿಗ್ ವಿಂಗ್ ಶೋರೂಂಗಳ ಮೂಲಕ ಪ್ರೀಮಿಯಂ ಬೈಕ್ ಮಾರಾಟದ ಮೇಲೆ ಹೆಚ್ಚಿನ ಗಮನಹರಿಸುತ್ತಿರುವ ಹೋಂಡಾ ಮೋಟಾರ್‌ ಸೈಕಲ್ (Honda Motorcycle) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದೀಗ ಸಿಬಿ350 ಆಧರಿಸಿರುವ ಹೊಸ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದೆ.

ಹೊಸ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯ ಮೊದಲ ಟೀಸರ್ ಹಂಚಿಕೊಂಡಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ರಾಯಲ್ ಎನ್ಫೀಡ್ ಕ್ಲಾಸಿಕ್ 350 ಮತ್ತು ಬುಲೆಟ್ 350 ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡುತ್ತಿದ್ದು, ಇದು 350 ಸಿಸಿ ವಿಭಾಗದಲ್ಲಿ ಹೊಸ ಭರವಸೆ ಮೂಡಿಸುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!

ಬುಲೆಟ್ 350 ಮತ್ತು ಕ್ಲಾಸಿಕ್ 350 ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲು ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಬಿ350 ಆರ್ ಎಸ್ ಬೈಕ್ ಮಾದರಿ ಲಭ್ಯತೆಯಿದ್ದರೂ ಇದು ಕೆಲವು ಕಾರಣಾಂತರಗಳಿಂದ ಗ್ರಾಹಕರನ್ನ ಸೆಳೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಸಿಬಿ350 ಆರ್ ಎಸ್ ನವೀಕರಣದ ಬದಲಾಗಿ ಗ್ರಾಹಕರ ಬೇಡಿಕೆಯೆಂತೆ ಹೊಚ್ಚ ಹೊಸ ಸಿಬಿ350 ಬಾಬ್ಟ್ ಬಿಡುಗಡೆ ಮಾಡಲಾಗುತ್ತಿದ್ದು, ಇದು ರೂ. 2.20 ಲಕ್ಷದಿಂದ ರೂ. 2.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

ವಿಶೇಷ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆ ಹೊಂದಲಿರುವ ಹೊಸ ಸಿಬಿ350 ಬಾಬ್ಟ್ ಬೈಕ್ ಮಾದರಿಯು ಹೈನೆಸ್ ಸಿಬಿ350 ಬೈಕ್ ಮಾದರಿಯಿಂದ ಎರವಲು ಪಡೆಯಲಾದ 350 ಸಿಸಿ ಎಂಜಿನ್ ನೊಂದಿಗೆ ಮತ್ತಷ್ಟು ಕ್ಲಾಸಿಕ್ ಆಗಿ ನಿರ್ಮಾಣಗೊಳ್ಳುತ್ತಿದೆ. ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ದಿನನಿತ್ಯದ ಬಳಕೆಯ ಜೊತೆಗೆ ಅಡ್ವೆಂಚರ್ ಚಾಲನಾ ಉದ್ದೇಶಕ್ಕೂ ಉತ್ತಮ ಆಯ್ಕೆಯಾಗಲಿದೆ.

ಹೊಸ ಬೈಕಿನಲ್ಲಿ ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಜೊತೆಗೆ ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ, ಎಲ್ಇಡಿ ಲೈಟ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಅಪ್ ಮತ್ತು ಗೇರ್ ಪೊಸಿಷನ್ ಇಂಡಿಕೇಟರ್ ಸೌಲಭ್ಯಗಳಿರಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಓಲಾ ಇವಿ ಸ್ಕೂಟರ್ ಖರೀದಿ ಮೇಲೆ ರೂ. 26 ಸಾವಿರ ದೀಪಾವಳಿ ಆಫರ್

ಇನ್ನು ಹೊಸ ಬೈಕ್ ಮಾದರಿಯ ಕುರಿತಾಗಿ ಹೋಂಡಾ ಕಂಪನಿಯು ಟೀಸರ್ ಹೊರತುಪಡಿಸಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಹಲವಾರು ಪ್ರೀಮಿಯಂ ಫೀಚರ್ಸ್ ಗಳು ಹೊಸ ಬೈಕಿನಲ್ಲಿ ಜೋಡಿಸಿರುವ ಸಾಧ್ಯತೆಗಳಿದ್ದು, ಇದು ಮುಂಬರುವ 2024ರ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.