Volvo EM90: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ ತನ್ನ ಹೊಚ್ಚ ಹೊಸ ಇಎಂ90 ಎಲೆಕ್ಟ್ರಿಕ್ ಎಂಪಿವಿ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಇವಿ ಕಾರು ಮಾದರಿಯು ಭರ್ಜರಿ ಮೈಲೇಜ್ ಜೊತೆಗೆ ಹಲವಾರು ಐಷಾರಾಮಿ ಫೀಚರ್ಸ್ ಪಡೆದುಕೊಂಡಿದೆ.

Volvo EM90: ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..
ವೊಲ್ವೊ ತನ್ನ ಹೊಚ್ಚ ಹೊಸ ಇಎಂ90 ಎಲೆಕ್ಟ್ರಿಕ್ ಎಂಪಿವಿ
Follow us
Praveen Sannamani
|

Updated on: Nov 16, 2023 | 7:47 PM

ಸ್ಪೀಡಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ (Volvo) ಮುಂಬರುವ 2025ರ ವೇಳೆ ಶೇ. 50 ರಷ್ಟು ಕಾರುಗಳನ್ನು ಇವಿ ಆವೃತ್ತಿಯಲ್ಲಿ ಮಾರಾಟ ಮಾಡುವ ಗುರಿಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಲೆಕ್ಟ್ರಿಕ್ ಮಾದರಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದೀಗ ವೊಲ್ವೊ ಕಂಪನಿಯು ತನ್ನ ಹೊಸ ಇಎಂ90 (EM90) ಎಲೆಕ್ಟ್ರಿಕ್ ಎಂಪಿವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಇದು 1953 ಡ್ಯುಯೆಟ್ ಎಸ್ಟೇಟ್ ಕಾರಿನಿಂದ ಪ್ರೇರಣೆ ಪಡೆದುಕೊಂಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವೊಲ್ವೊ ಕಂಪನಿಯು ಎಕ್ಸ್ ಸಿ40 ರೀಚಾರ್ಜ್, ಸಿ40 ರೀಚಾರ್ಜ್ ಬಿಡುಗಡೆಯೊಂದಿಗೆ ಇಎಕ್ಸ್30 ಮತ್ತು ಇಎಕ್ಸ್90 ಕಾರು ಮಾದರಿಗಳನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇಎಂ90 ಎಲೆಕ್ಟ್ರಿಕ್ ಎಂಪಿವಿಯನ್ನು ಅನಾವರಣಗೊಳಿಸಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

Volvo EM90 (1)

ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!

ಹೊಸ ಇಎಂ90 ಎಲೆಕ್ಟ್ರಿಕ್ ಕಾರಿನಲ್ಲಿ 116kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಇದು ರಿಯಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 272 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 738 ಕಿಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಹೊಸ ಕಾರಿನಲ್ಲಿರುವ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 30 ನಿಮಿಷಗಳಲ್ಲಿ ಶೇ. 80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದ್ದು, ಗರಿಷ್ಠ 272 ಹಾರ್ಸ್ ಪವರ್ ಉತ್ಪಾದಿಸುತ್ತದೆ.

ಹಾಗೆಯೇ ಹೊಸ ಇಎಂ90 ಇವಿ ಕಾರಿನಲ್ಲಿ ಹಲವಾರು ಸುಧಾರಿತ ಫೀಚರ್ಸ್ ಗಳನ್ನು ನೀಡಲಾಗಿದ್ದು, 6 ಸೀಟರ್ ಸೌಲಭ್ಯಗಳೊಂದಿಗೆ ಹಲವಾರು ಐಷಾರಾಮಿ ಸೌಲಭ್ಯಗಳಿವೆ. ಡ್ಯುಯಲ್ ಚೆಂಬರ್ ಸಸ್ಷೆಂಷನ್ ಮೇಲೆ ನಿರ್ಮಾಣವಾಗಿರುವ ಹೊಸ ಕಾರಿನಲ್ಲಿ ಸೈಲೆಂಟ್ ಟೈರ್ ಗಳು ಪ್ರಮುಖ ಆಕರ್ಷಣೆಯಾಗಿದ್ದು, ರೋಡ್ ನಾಯ್ಸ್ ಕ್ಯಾನ್ಸಲೇಷನ್ ಟೆಕ್ನಾಲಜಿ ಹೊಂದಿದೆ. ಜೊತೆಗೆ ಆರ್ಮ್ ಸ್ಟೈಲ್ ಲಾಂಜ್ ಸೀಟ್ ಗಳನ್ನು ಹೊಂದಿದ್ದು, ಡ್ರೈವರ್ ಕ್ಯಾಬಿನ್ ಮತ್ತು ಕ್ಯಾಪ್ಟನ್ ಕ್ಯಾಬಿನ್ ಪ್ರತ್ಯೇಕ ಮಾಡುವ ಮಾಡುವ ಮೂಲಕ ಅರಾಮವಾಗಿ ಸಭೆ ನಡೆಸಬಹುದಾಗಿದೆ.

Volvo EM90 (2)

ಇದರೊಂದಿಗೆ ಹೊಸ ಕಾರಿನಲ್ಲಿ ವೆಂಟಿಲೆಟೆಡ್ ಆಸನಗಳೊಂದಿಗೆ ರಿಕೈನ್ ಸೌಲಭ್ಯವನ್ನು ಸಹ ನೀಡಲಾಗಿದ್ದು, ಪ್ರತಿ ಆಸನದಲ್ಲೂ ಹ್ಯಾಪ್ಟಿಕ್ ಕಂಟ್ರೋಲ್ ಪ್ಯಾನೆಲ್, ಕ್ಲೈಮೆಟ್ ಕಂಟ್ರೋಲ್ ಗಾಗಿ 15.6 ಇಂಚಿನ ಸ್ಕ್ರೀನ್ ಹಾಗೂ 15.4 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸುಧಾರಿತ ಫೀಚರ್ಸ್ ಹೊಂದಿರುವ ಸೆಂಟರ್ ಕನ್ಸೊಲ್ ಜೋಡಣೆ ಮಾಡಲಾಗಿದೆ.

ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!

ಹೊಸ ಇಎಂ90 ಎಲೆಕ್ಟ್ರಿಕ್ ಕಾರನ್ನು ವೊಲ್ವೊ ಕಂಪನಿಯು ಸದ್ಯಕ್ಕೆ ಚೀನಿ ಮಾರುಕಟ್ಟೆಗಾಗಿ ಬಿಡುಗಡೆ ಮಾಡುತ್ತಿದ್ದು, ಚೀನಿ ಮೂಲದ ಗಿಲಿ ಜೊತೆಗೆ ಸಹಭಾಗಿತ್ವದಲ್ಲಿ ಪರಿಚಯಿಸುತ್ತಿದೆ. ಗಿಲಿ ನಿರ್ಮಾಣದ ಜಿಕರ್ 009 ಮಾದರಿಯೊಂದಿಗೆ ಹೊಸ ಇಎಂ90 ಸಾಕಷ್ಟು ಸಾಮ್ಯತೆ ಹೊಂದಿದ್ದು, ಇದು 2025ರ ವೇಳೆಗೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಡುವ ಸಾಧ್ಯತೆಗಳಿವೆ.