Ola EV Scooter: ಓಲಾ ಇವಿ ಸ್ಕೂಟರ್ ಖರೀದಿ ಮೇಲೆ ರೂ. 26 ಸಾವಿರ ದೀಪಾವಳಿ ಆಫರ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಇವಿ ಸ್ಕೂಟರ್ ಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಹಲವಾರು ಆಫರ್ ಗಳನ್ನು ಘೋಷಣೆ ಮಾಡಿದೆ. ಹಾಗಾದ್ರೆ ಹೊಸ ಆಫರ್ ಗಳಲ್ಲಿ ಏನೆಲ್ಲಾ ಕೊಡುಗೆಗಳನ್ನು ನೀಡಲಾಗುತ್ತಿದೆ. ಯಾವ ಮಾದರಿಯ ಮೇಲೆ ಎಷ್ಟು ಆಫರ್ ನೀಡಲಾಗುತ್ತಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ.

Ola EV Scooter: ಓಲಾ ಇವಿ ಸ್ಕೂಟರ್ ಖರೀದಿ ಮೇಲೆ ರೂ. 26 ಸಾವಿರ ದೀಪಾವಳಿ ಆಫರ್
ಓಲಾ ಇವಿ ಸ್ಕೂಟರ್ ಖರೀದಿ ಮೇಲೆ ರೂ. 26 ಸಾವಿರ ದೀಪಾವಳಿ ಆಫರ್
Follow us
Praveen Sannamani
|

Updated on: Nov 10, 2023 | 2:20 PM

ದೀಪಾವಳಿ ವಿಶೇಷತೆಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಗಳ (Electric Scooter) ಖರೀದಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಹಲವಾರು ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ವಿಸ್ತರಿತ ಬ್ಯಾಟರಿ ಪ್ಯಾಕ್ ವಾರಂಟಿ, ಎಕ್ಸ್ ಚೆಂಜ್ ಆಫರ್ ಗಳನ್ನು ನೀಡಲಾಗುತ್ತಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಜನಪ್ರಿಯ ಇವಿ ಸ್ಕೂಟರ್ ಮಾದರಿಗಳಾದ ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1ಎಕ್ಸ್ ಮೇಲೆ ಆಫರ್ ನೀಡುತ್ತಿದ್ದು, ವಿವಿಧ ಆಫರ್ ಗಳೊಂದಿಗೆ ರೂ. 26,500 ತನಕ ಉಳಿತಾಯ ಮಾಡಬಹುದಾಗಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ದಸರಾ ವಿಶೇಷತೆಗಾಗಿ ಭಾರತ್ ಇವಿ ಫೆಸ್ಟ್ ಅಭಿಯಾನ ಕೈಗೊಂಡಿದ್ದು, ಹೊಸ ಇವಿ ಅಭಿಯಾನದಡಿ ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ವಿಸ್ತರಿತ ಬ್ಯಾಟರಿ ವಾರಂಟಿಗಳು ದೊರೆಯಲಿವೆ. ಭಾರತ್ ಇವಿ ಫೆಸ್ಟ್ ಅಭಿಯಾನವು ಇದೇ ತಿಂಗಳು 22ರಿಂದ 24ರ ತನಕ ನಡೆಯಲಿದ್ದು, 72 ಗಂಟೆಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ ಭಾರೀ ಪ್ರಮಾಣದಲ್ಲಿ ಇವಿ ಸ್ಕೂಟರ್ ಮಾರಾಟ ಯೋಜನೆ ಹೊಂದಿದೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!

ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ರೂ. 26,500 ಮೌಲ್ಯದ ವಿವಿಧ ಆಫರ್ ಗಳೊಂದಿಗೆ ರೂ. 2 ಸಾವಿರ ಮೌಲ್ಯದ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಇದರಲ್ಲಿ ಎಸ್ 1 ಪ್ರೊ ಹೊಸ ಆವೃತ್ತಿಯ ಖರೀದಿಯ ಮೇಲೆ ರೂ. 7 ಸಾವಿರ ಮೌಲ್ಯದ ಬ್ಯಾಟರಿ ವಾರಂಟಿ ವಿಸ್ತರಣೆ ಮತ್ತು ರೂ. 2 ಸಾವಿರ ಮೌಲ್ಯದ ವಿಶೇಷ ಕೊಡುಗೆ ನೀಡಲಾಗುತ್ತಿದೆ.

ಹೊಸ ವಾರಂಟಿಗಳಲ್ಲಿ ಎಸ್1 ಏರ್ ಮತ್ತು ಎಸ್1 ಎಕ್ಸ್ ಪ್ಲಸ್ ಇವಿ ಸ್ಕೂಟರ್ ಗಳ ಖರೀದಿ ಮೇಲೆ ಶೇ.50 ರಷ್ಟು ಡಿಸ್ಕೌಂಟ್ ಹೊಂದಿರುವ ಬ್ಯಾಟರಿ ಪ್ಯಾಕ್ ಮತ್ತು ವಿಸ್ತರಿತ ವಾರಂಟಿ ನೀಡಲಾಗಿದ್ದು, ಈ ಹೊಸ ಆಫರ್ ಮೂಲಕ ಗ್ರಾಹಕರು ರೂ. 24,500 ಉಳಿತಾಯ ಮಾಡಬಹುದಾಗಿದೆ.

ಹಾಗೆಯೇ ಪೆಟ್ರೋಲ್ ಎಂಜಿನ್ ಪ್ರೇರಿತ ಸ್ಕೂಟರ್ ಗಳನ್ನು ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಮಾದರಿಗಳೊಂದಿಗೆ ಎಕ್ಸ್ ಚೆಂಜ್ ಮಾಡಿಕೊಳ್ಳುವ ಗ್ರಾಹಕರಿಗೆ ರೂ. 5 ಸಾವಿರದಿಂದ ರೂ. 10 ಸಾವಿರ ಎಕ್ಸ್ ಚೆಂಜ್ ಬೋನಸ್ ನೀಡುತ್ತಿದ್ದು, ದೇಶಾದ್ಯಂತ ತೆರೆಯಲಾಗಿರುವ ಸುಮಾರು 1 ಸಾವಿರ ಓಲಾ ಇವಿ ಎಕ್ಸ್ಪಿರೆನ್ಸ್ ಸೆಂಟರ್ ಗಳಲ್ಲಿ ಎಕ್ಸ್ ಚೆಂಜ್ ಮಾಡಿಕೊಳ್ಳಬಹುದಾಗಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ನೀಡುತ್ತಿರುವ ಆಫರ್ ಗಳಲ್ಲಿ ರೂ. 2 ಸಾವಿರ ಮೌಲ್ಯದ ರೇಫರ್ಲ್ ಕೇರ್ ಪ್ಲಸ್ ಕೂಡಾ ಘೋಷಣೆ ಮಾಡಿದ್ದು, ನೀವು ಮತ್ತೊಬ್ಬ ಗ್ರಾಹಕನಿಗೆ ಓಲಾ ಇವಿ ಸ್ಕೂಟರ್ ಖರೀದಿಗೆ ಸಲಹೆ ನೀಡುವ ಮೂಲಕ ರೇಫರ್ಲ್ ಕೇರ್ ಪ್ಲಸ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಓಲಾ ಎಲೆಕ್ಟ್ರಿಕ್ ಕಂಪನಿ ತನ್ನ ಪಾಲುದಾರ ಹಣಕಾಸು ಸಂಸ್ಥೆಗಳ ಕ್ರೆಡಿಕ್ ಕಾರ್ಡ್ ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 7,500 ಹೆಚ್ಚುವರಿ ಆಫರ್ ನೀಡಲಿದ್ದು, ಶೇ. 5.99 ಬಡ್ಡಿದರದಲ್ಲಿ ಗ್ರಾಹಕರಿಗೆ ವಿಶೇಷ ಸಾಲಸೌಲಭ್ಯಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಎರಡನೇ ತಲೆಮಾರಿನ ಎಸ್1 ಪ್ರೊ ಮಾದರಿಯನ್ನು ಎಕ್ಸ್ ಶೋರೂಂ ಪ್ರಕಾರ ರೂ. 1,47,499 ಬೆಲೆ ಹೊಂದಿದ್ದರೆ, ಎಸ್1 ಏರ್ ಸ್ಕೂಟರ್ ಮಾದರಿಯು 1,19,999 ಬೆಲೆ ಹೊಂದಿದೆ. ಇದರೊಂದಿಗೆ ಎಸ್1 ಎಕ್ಸ್ ಪ್ಲಸ್ ಆವೃತ್ತಿಯು ರೂ. 1,09,99 ಬೆಲೆ ಹೊಂದಿದ್ದರೆ ಎಸ್1 ಎಕ್ಸ್ 3ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ರೂ. 99,999 ಮತ್ತು 2ಕೆವಿಹೆಚ್ ಬ್ಯಾಟರಿ ಪ್ಯಾಕ್ ಮಾದರಿಯು ರೂ. 89,999 ಬೆಲೆ ಹೊಂದಿದೆ.