AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vehicles Pollution: ಮಾಲಿನ್ಯಕ್ಕೆ ಬ್ರೇಕ್ ಹಾಕಲು ಪಾರ್ಕಿಂಗ್ ಚಾರ್ಜ್ ನಲ್ಲಿ ಭಾರೀ ಹೆಚ್ಚಳ!

ಅಪಾಯಕಾರಿ ವಾಯುಮಾಲಿನ್ಯ ಪ್ರಮಾಣದಿಂದ ಕಂಗೆಟ್ಟಿರುವ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಹನಗಳ ಸಂಚಾರದಲ್ಲಿ ಭಾರೀ ಬದಲಾವಣೆ ಪರಿಚಯಿಸಲಾಗಿದ್ದು, ಇದೀಗ ಮತ್ತೊಂದು ಹೊಸ ಕಠಿಣ ಕ್ರಮದ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.

Vehicles Pollution: ಮಾಲಿನ್ಯಕ್ಕೆ ಬ್ರೇಕ್ ಹಾಕಲು ಪಾರ್ಕಿಂಗ್ ಚಾರ್ಜ್ ನಲ್ಲಿ ಭಾರೀ ಹೆಚ್ಚಳ!
ಮಾಲಿನ್ಯಕ್ಕೆ ಬ್ರೇಕ್ ಹಾಕಲು ಪಾರ್ಕಿಂಗ್ ಚಾರ್ಜ್ ನಲ್ಲಿ ಭಾರೀ ಹೆಚ್ಚಳ!
Praveen Sannamani
|

Updated on:Nov 15, 2023 | 3:03 PM

Share

ದೆಹಲಿಯಲ್ಲಿ ವಾಯುಗುಣಮಟ್ಟ ದಿನದಿಂದ ದಿನಕ್ಕೆ ಅಪಾಯಮಟ್ಟಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವಾರು ಕಠಿಣ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸುತ್ತಿದೆ. ವಾಹನಗಳ ಮಾಲಿನ್ಯದ ಜೊತೆಗೆ ದೀಪಾವಳಿ ಪಟಾಕಿಯಿಂದಾಗಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 390ರಿಂದ 435ಕ್ಕೆ ತಲುಪಿದ್ದು, ಅತಿಯಾದ ಮಾಲಿನ್ಯದಿಂದಾಗಿ ಜನರರಲ್ಲಿ ಉಸಿರಾಟ ತೊಂದರೆ, ಕಣ್ಣುಗಳಲ್ಲಿ ಕಿರಿಕಿರಿ ಜೊತೆಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಮಾಲಿನ್ಯ ನಿಯಂತ್ರಣಕ್ಕಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದೀಗ ದೆಹಲಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಬಳಕೆಯ ವಾಹನಗಳ ಪಾರ್ಕಿಂಗ್ ದರವನ್ನು ಏರಿಕೆ ಮಾಡಲಾಗಿದೆ. ದುಬಾರಿ ಶುಲ್ಕದಿಂದಾಗಿ ಜನ ಅನಗತ್ಯವಾಗಿ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಬಹುದೆಂದು ನೀರಿಕ್ಷಿಸಲಾಗಿದ್ದು, ದುಬಾರಿ ಪಾರ್ಕಿಂಗ್ ಶುಲ್ಕವು ವಾಹನ ಮಾಲೀಕರಿಗೆ ತಲೆಬಿಸಿಯಾಗಿದೆ.

ಪಾರ್ಕಿಂಗ್ ಶುಲ್ಕ ಹೆಚ್ಚಳಕ್ಕೂ ಮುನ್ನ ಕಾರುಗಳಿಗೆ ಪ್ರತಿ ಗಂಟೆಗೆ ರೂ. 20 ರಿಂದ ಆರಂಭದಿಂದ ಪ್ರತಿ ದಿನಕ್ಕೆ ಗರಿಷ್ಠ ರೂ. 100 ಶುಲ್ಕ ವಿಧಿಸಲಾಗುತ್ತಿತ್ತು. ಹಾಗೆಯೇ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ. 10 ರಂತೆ ಪ್ರತಿ ದಿನಕ್ಕೆ ಗರಿಷ್ಠ ರೂ. 50 ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಶುಲ್ಕ ಹೆಚ್ಚಳದ ನಂತರ ಕಾರುಗಳಿಗೆ ಪ್ರತಿ ಗಂಟೆ ರೂ. 40 ರಿಂದ ಗರಿಷ್ಠ ಒಂದು ದಿನಕ್ಕೆ ರೂ. 200 ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ರೂ. 20 ರಿಂದ ಪ್ರತಿ ದಿನಕ್ಕೆ ಗರಿಷ್ಠ ರೂ. 200 ಶುಲ್ಕ ವಿಧಿಸಲಾಗುತ್ತಿದೆ. ಈ ಮೂಲಕ ಪಾರ್ಕಿಂಗ್ ಶುಲ್ಕವು ಈ ಹಿಂದಿಗಿಂತಲೂ ಶೇ. 300 ರಷ್ಟು ಹೆಚ್ಚಳವಾದಂತಾಗಿದೆ.

ಇದನ್ನೂ ಓದಿ: ADASಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ದೆಹಲಿಯಲ್ಲಿ ಸದ್ಯ 91 ಸಾರ್ವಜನಿಕ ಬಳಕೆಯ ಪಾರ್ಕಿಂಗ್ ಸ್ಥಳಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 41 ಪಾರ್ಕಿಂಗ್ ಸ್ಥಳಗಳನ್ನು ಪಾಲಿಕೆಯೇ ನೇರವಾಗಿ ನಿರ್ವಹಣೆ ಮಾಡುತ್ತಿದೆ. ಇನ್ನುಳಿದ ಪಾರ್ಕಿಂಗ್ ಸ್ಥಳಗಳನ್ನು ವಿವಿಧ ಏಜೆನ್ಸಿಗಳು ನಿರ್ವಹಿಸುತ್ತಿದ್ದು, ರಾಜಪಥ್ ನಿಂದ ಎಮ್ಸ್, ಸರೋಜಿನಿ ನಗರ್ ಮಾರ್ಕೆಟ್, ಖಾನ್ ಮಾರ್ಕೆಟ್, ಲೂಧಿ ರೋಡ್ ಮತ್ತು ಐಎನ್ಎ ಮತ್ತು ಸಫ್ದರ್‌ಜಂಗ್ ಭಾಗಗಳಲ್ಲಿ ಹೆಚ್ಚಿನ ಪಾರ್ಕಿಂಗ್ ಸ್ಥಳಗಳಿವೆ.

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಕುಸಿಯಲು ಹಲವಾರು ಕಾರಣಗಳನ್ನು ಗುರುತಿಸಲಾಗಿದ್ದು, ದೆಹಲಿಯಲ್ಲಿ ಮಾತ್ರವಲ್ಲ ದೆಹಲಿ ಎನ್ ಸಿಆರ್ ಪ್ರದೇಶಗಳಲ್ಲೂ ಅಪಾಯಕಾರಿ ಮಾಲಿನ್ಯ ಪ್ರಮಾಣ ದಾಖಲಾಗಿದೆ. ಗಾಜಿಯಾಬಾದ್‌ನಲ್ಲಿ ಬೆಳಗ್ಗೆ 6 ಗಂಟೆಗೆ ಸರಾಸರಿ ಎಕ್ಯೂಐ 443 ದಾಖಲಾಗಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆ ಹುಟ್ಟುಹಾಕಲಿದ್ದು, ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಳಷ್ಟು ಸುರಕ್ಷಿತ ಮಿತಿಯು ಏಳರಿಂದ ಎಂಟು ಪಟ್ಟು ಮೀರಿದೆ.

ಈ ಹಿನ್ನಲೆ ದೆಹಲಿಯಲ್ಲಿ ಈಗಾಗಲೇ ಬೆಸ-ಸಮ ಮೂಲಕ ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕುವುದರ ಜೊತೆಗೆ ಟ್ರಕ್ ಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಅಗತ್ಯ ಸರಕುಗಳನ್ನು ಸಾಗಿಸುವ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಎಲ್ಎನ್ ಜಿ, ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಟ್ರಕ್‌ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಣಿಜ್ಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಇದಲ್ಲದೆ ಮಾಲಿನ್ಯ ತಗ್ಗಿಸಲು ಸಾಧ್ಯವಿರುವ ಎಲ್ಲಾ ಮಾದರಿಯ ಪ್ರಯೋಗಗಳನ್ನು ತುರ್ತಾಗಿ ಜಾರಿ ತರಲಾಗಿದ್ದು, ಸಾಧ್ಯವಿರುವಷ್ಟು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಮತ್ತು ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಆಯ್ಕೆಗಳನ್ನು ನೀಡುವ ಮೂಲಕ ವಾಹನಗಳ ಬಳಕೆಯನ್ನು ತಗ್ಗಿಸಲಾಗುತ್ತಿದೆ.

Published On - 3:01 pm, Wed, 15 November 23

ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?