ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸೇಲ್ ಆದ ಎಸ್ಯುವಿಗಳು ಎಷ್ಟು ಲಕ್ಷ ಗೊತ್ತೇ?
ಭಾರತೀಯ ಆಟೋಮೊಬೈಲ್ ತಯಾರಕರ ಕೈಗಾರಿಕಾ ಸಂಸ್ಥೆ (SIAM) 2024-25ನೇ ಹಣಕಾಸು ವರ್ಷದ ವಾಹನ ಮಾರಾಟ ವರದಿಯ ಮೂಲಕ ಕಳೆದ ಒಂದು ವರ್ಷದಲ್ಲಿ, ಅಂದರೆ ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ, ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡಾ 2 ರಷ್ಟು ಹೆಚ್ಚಾಗಿ 43,01,848 ಯುನಿಟ್‌ಗಳಿಗೆ ತಲುಪಿದೆ ಎಂದು ತಿಳಿಸಿದೆ.

ಬೆಂಗಳೂರು (ಏ. 18): ಭಾರತದಲ್ಲಿ ಪ್ರಯಾಣಿಕ ವಾಹನಗಳ (Passenger Vehicle) ಸಗಟು ಮಾರಾಟವು 2024-25ನೇ ಹಣಕಾಸು ವರ್ಷದಲ್ಲಿ ಶೇ. 2 ರಷ್ಟು ಹೆಚ್ಚಾಗಿ 43 ಲಕ್ಷ ಯೂನಿಟ್‌ಗಳನ್ನು ತಲುಪಿದೆ. ಯುಟಿಲಿಟಿ ವಾಹನಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಈ ದಾಖಲೆಯ ಮಾರಾಟ ಸಂಭವಿಸಿದೆ. ಒಟ್ಟು ಮಾರಾಟದಲ್ಲಿ ಯುಟಿಲಿಟಿ ವಾಹನಗಳು (ಎಸ್‌ಯುವಿ, ಎಂಪಿವಿ) ಶೇ. 65 ರಷ್ಟಿವೆ. ಪ್ರಯಾಣಿಕ ವಾಹನಗಳ ರಫ್ತು ಕೂಡ ಶೇ. 15 ರಷ್ಟು ಹೆಚ್ಚಾಗಿದ್ದು, 7.7 ಲಕ್ಷ ಯೂನಿಟ್‌ಗಳಿಗೆ ತಲುಪಿದೆ. ಅದೇ ಸಮಯದಲ್ಲಿ, ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 9 ರಷ್ಟು ಹೆಚ್ಚಾಗಿದೆ, ಆದರೆ ವಾಣಿಜ್ಯ ವಾಹನಗಳ ಮಾರಾಟವು ಸ್ವಲ್ಪ ಕಡಿಮೆಯಾಗಿದೆ. ಉತ್ತಮ ಬೇಡಿಕೆ, ಮೂಲಸೌಕರ್ಯದಲ್ಲಿನ ಹೂಡಿಕೆ ಮತ್ತು ಸರ್ಕಾರಿ ನೀತಿಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು SIAM ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
ಭಾರತೀಯ ಆಟೋಮೊಬೈಲ್ ತಯಾರಕರ ಕೈಗಾರಿಕಾ ಸಂಸ್ಥೆ (SIAM) 2024-25ನೇ ಹಣಕಾಸು ವರ್ಷದ ವಾಹನ ಮಾರಾಟ ವರದಿಯ ಮೂಲಕ ಕಳೆದ ಒಂದು ವರ್ಷದಲ್ಲಿ, ಅಂದರೆ ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗೆ, ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಶೇಕಡಾ 2 ರಷ್ಟು ಹೆಚ್ಚಾಗಿ 43,01,848 ಯುನಿಟ್‌ಗಳಿಗೆ ತಲುಪಿದೆ ಎಂದು ತಿಳಿಸಿದೆ. ಕಳೆದ 2023-24ರ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 42,18,750 ಯೂನಿಟ್‌ಗಳಷ್ಟಿತ್ತು.
ಎಸ್ಯುವಿಗಳಿಗೆ ಬಂಪರ್ ಬೇಡಿಕೆ:
ಯುಟಿಲಿಟಿ ವಾಹನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. 2023-24ನೇ ಹಣಕಾಸು ವರ್ಷದಲ್ಲಿ ಶೇ. 60 ರಷ್ಟಿದ್ದ ಯುಟಿಲಿಟಿ ವಾಹನಗಳು 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇ. 65 ರಷ್ಟು ಪಾಲು ಹೊಂದುವ ನಿರೀಕ್ಷೆಯಿದೆ. ಯುಟಿಲಿಟಿ ವಾಹನಗಳ ಮಾರಾಟವು ಶೇ. 11 ರಷ್ಟು ಹೆಚ್ಚಾಗಿ 27,97,229 ಯೂನಿಟ್‌ಗಳಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 25,20,691 ಯೂನಿಟ್‌ಗಳಷ್ಟಿತ್ತು.
Maruti Cervo: ಈ ಒಂದು ಕಾರಿಗಾಗಿ 15 ವರ್ಷಗಳಿಂದ ಕಾಯುತ್ತಿದ್ದಾರೆ ಜನರು: ಇನ್ನೂ ಬಿಡುಗಡೆ ಮಾಡಿಲ್ಲ ಮಾರುತಿ
ರಫ್ತು ಹೆಚ್ಚಾಗಿದೆ:
ಪ್ರಯಾಣಿಕ ವಾಹನಗಳ ರಫ್ತು ಹೆಚ್ಚಾಗಿದೆ. 2024-25ನೇ ಹಣಕಾಸು ವರ್ಷದಲ್ಲಿ 7.7 ಲಕ್ಷ ಯೂನಿಟ್‌ಗಳನ್ನು ರಫ್ತು ಮಾಡಲಾಗಿದೆ. ಇದು ಇಲ್ಲಿಯವರೆಗಿನ ಅತ್ಯಧಿಕ ಅಂಕಿ ಅಂಶವಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ. 15 ರಷ್ಟು ಹೆಚ್ಚಳವಾಗಿದೆ. SIAM ಪ್ರಕಾರ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾದ ಕಾರಣ ರಫ್ತು ಹೆಚ್ಚಾಗಿದೆ.
ಬೈಕ್-ಸ್ಕೂಟರ್ ಮಾರಾಟದಲ್ಲಿ ಏರಿಕೆ:
ದ್ವಿಚಕ್ರ ವಾಹನಗಳ ಮಾರಾಟವೂ ಸುಧಾರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಸಗಟು ಮಾರಾಟವು ಶೇ. 9 ರಷ್ಟು ಹೆಚ್ಚಾಗಿ 1,96,07,332 ಯೂನಿಟ್‌ಗಳಿಗೆ ತಲುಪಿದೆ. 2023-24ರ ಆರ್ಥಿಕ ವರ್ಷದಲ್ಲಿ ಅದು 1,79,74,365 ಯೂನಿಟ್‌ಗಳಷ್ಟಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಸಾರ್ವಜನಿಕ ವಿಶ್ವಾಸದಲ್ಲಿನ ಸುಧಾರಣೆಯು ವಲಯದ ಚೇತರಿಕೆಗೆ ಸಹಾಯ ಮಾಡುತ್ತಿದೆ. ಆದರೆ, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ವಾಣಿಜ್ಯ ವಾಹನಗಳ ಸಗಟು ಮಾರಾಟವು ಕಳೆದ ಹಣಕಾಸು ವರ್ಷದಲ್ಲಿ 9,68,770 ಯುನಿಟ್‌ಗಳಿಂದ ಶೇಕಡಾ ಒಂದು ರಷ್ಟು ಕುಸಿದು 9,56,671 ಯುನಿಟ್‌ಗಳಿಗೆ ತಲುಪಿದೆ. ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಇವುಗಳ ಮಾರಾಟವು ಶೇ. 7 ರಷ್ಟು ಏರಿಕೆಯಾಗಿ 7,41,420 ಯೂನಿಟ್‌ಗಳಿಗೆ ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಸಂಖ್ಯೆ 6,94,801 ಯೂನಿಟ್‌ಗಳಷ್ಟಿತ್ತು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ