AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti Cervo: ಈ ಒಂದು ಕಾರಿಗಾಗಿ 15 ವರ್ಷಗಳಿಂದ ಕಾಯುತ್ತಿದ್ದಾರೆ ಜನರು: ಇನ್ನೂ ಬಿಡುಗಡೆ ಮಾಡಿಲ್ಲ ಮಾರುತಿ

ಮಾರುತಿ ಸುಜುಕಿಯ ಈ ಕಾರು ಮಾರುತಿ ಸೆರ್ವೊ. 2010 ರಲ್ಲಿ, ಕಂಪನಿಯು ಮಾರುತಿ 800 ಬದಲಿಗೆ ಇದನ್ನು ಭಾರತಕ್ಕೆ ತರಬೇಕಿತ್ತು. ಆದರೆ ನಂತರ ಇದರ ಯೋಜನೆ ವಿಳಂಬವಾಯಿತು. ನಂತರ ಮತ್ತೊಮ್ಮೆ 2024 ರಲ್ಲಿ ಈ ಕಾರಿನ ಬಿಡುಗಡೆಯ ಬಗ್ಗೆ ಗುಸುಗುಸು ಕೇಳಿಬಂದಿತು. ಜನರು ಸುಮಾರು 15 ವರ್ಷಗಳಿಂದ ಈ ಕಾರಿಗಾಗಿ ಜನರು ಕಾಯುತ್ತಿದ್ದಾರೆ. ಇದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆಯೇ?

Maruti Cervo: ಈ ಒಂದು ಕಾರಿಗಾಗಿ 15 ವರ್ಷಗಳಿಂದ ಕಾಯುತ್ತಿದ್ದಾರೆ ಜನರು: ಇನ್ನೂ ಬಿಡುಗಡೆ ಮಾಡಿಲ್ಲ ಮಾರುತಿ
Maruti Cervo
Follow us
Vinay Bhat
|

Updated on: Apr 17, 2025 | 2:06 PM

ಬೆಂಗಳೂರು (ಏ. 17): ಇಂದಿಗೂ ಸಹ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಹಣಕ್ಕೆ ತಕ್ಕ ಮೌಲ್ಯದ ಕಾರುಗಳನ್ನು ಒದಗಿಸುವಲ್ಲಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಯಾವುದೇ ಸ್ಪರ್ಧೆಯನ್ನು ಹೊಂದಿಲ್ಲ. ಆದ್ದರಿಂದ, ಮಾರುತಿ ಸುಜುಕಿ ಭಾರತದಲ್ಲಿ 3 ಲಕ್ಷ ರೂ. ಗಿಂತ ಕಡಿಮೆ ಬೆಲೆಯ ಕಾರನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಇದು ಇಂದಿನವರೆಗೆ ಬಿಡುಗಡೆ ಆಗಿಲ್ಲ. ಜನರು ಸುಮಾರು 15 ವರ್ಷಗಳಿಂದ ಈ ಕಾರಿಗಾಗಿ ಜನರು ಕಾಯುತ್ತಿದ್ದಾರೆ. ಇದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆಯೇ? ಈ ಕಾರು ಯಾವಾಗ ಬಿಡುಗಡೆಯಾಗಲಿದೆ?.

ಮಾರುತಿ ಸುಜುಕಿಯ ಈ ಕಾರು ಮಾರುತಿ ಸೆರ್ವೊ. 2010 ರಲ್ಲಿ, ಕಂಪನಿಯು ಮಾರುತಿ 800 ಬದಲಿಗೆ ಇದನ್ನು ಭಾರತಕ್ಕೆ ತರಬೇಕಿತ್ತು. ಆದರೆ ನಂತರ ಇದರ ಯೋಜನೆ ವಿಳಂಬವಾಯಿತು. ನಂತರ ಮತ್ತೊಮ್ಮೆ 2024 ರಲ್ಲಿ ಈ ಕಾರಿನ ಬಿಡುಗಡೆಯ ಬಗ್ಗೆ ಗುಸುಗುಸು ಕೇಳಿಬಂದಿತು.

ಮಾರುತಿ ಸೆರ್ವೊ ಏಕೆ ವಿಶೇಷ?:

ಮಾರುತಿ ಕರ್ವೊ ಕಾರು 1976 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಅದರ ಕೂಪ್ ಶೈಲಿ, ಕೈಗೆಟುಕುವ ಬೆಲೆ ಮತ್ತು ಉತ್ತಮ ಮೈಲೇಜ್ ಕಾರಣದಿಂದಾಗಿ, ಈ ಕಾರು ಬಿಡುಗಡೆಯಾದ ತಕ್ಷಣ ಮಾರುಕಟ್ಟೆಯಲ್ಲಿ ಸಾಖಷ್ಟು ಜನಪ್ರಿಯವಾಯಿತು. ಆ ಸಮಯದಲ್ಲಿ, ಈ ಕಾರನ್ನು 539cc, 797cc ಮತ್ತು 970cc ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ, ಅದರ ಹಲವು ತಲೆಮಾರುಗಳು ಬಂದವು.

ಇದನ್ನೂ ಓದಿ
Image
ಬಹುನಿರೀಕ್ಷಿತ ಮಾರುತಿ ವ್ಯಾಗನ್ಆರ್ 2025 ಬಿಡುಗಡೆ: ಬೆಲೆ, ಮೈಲೇಜ್ ಎಷ್ಟು?
Image
ಟಾಟಾ ಪಂಚ್ ಅಥವಾ ಹುಂಡೈ ಎಕ್ಸ್​ಟೆರ್: CNG ನಲ್ಲಿ ಯಾವ ಕಾರು ಉತ್ತಮ?
Image
ಕಾರಿನಲ್ಲಿ ಕೂಲಂಟ್ ಖಾಲಿಯಾದರೆ ಏನಾಗುತ್ತದೆ?: ತಪ್ಪಿಯೂ ನಿರ್ಲಕ್ಷಿಸದಿರಿ
Image
ಘಿಬ್ಲಿ ಜಗತ್ತಿನಲ್ಲಿ ಈ 5 ಫೇಮಸ್ ಕಾರುಗಳು ಹೇಗಿವೆ ನೋಡಿ?

ಈ ಕಾರಿನ ಐದನೇ ತಲೆಮಾರಿನ ಮಾದರಿಯನ್ನು ಕೊನೆಯದಾಗಿ 2006 ಮತ್ತು 2009 ರ ನಡುವೆ ಉತ್ಪಾದಿಸಲಾಯಿತು. ಇದು 5-ಬಾಗಿಲಿನ ಹ್ಯಾಚ್‌ಬ್ಯಾಕ್ ಕಾರು ಆಗಿತ್ತು. ಅಲ್ಲದೆ, ಈ ಕಾರು ಫ್ರಂಟ್ ವೀಲ್ ಡ್ರೈವ್ ಮತ್ತು ಫೋರ್ ವೀಲ್ ಡ್ರೈವ್ ಆಯ್ಕೆಯನ್ನು ಹೊಂದಿತ್ತು. ಈ ಕಾರು ಹೆಚ್ಚಾಗಿ ಸುಜುಕಿ ಆಲ್ಟೊವನ್ನು ಹೋಲುತ್ತದೆ. ಆ ಸಮಯದಲ್ಲಿ ಇದಕ್ಕೆ 658 ಸಿಸಿ ಎಂಜಿನ್ ಅನ್ನು ಸಹ ನೀಡಲಾಗಿತ್ತು. ಅಲ್ಲದೆ ಇದನ್ನು ಟರ್ಬೊ ಚಾರ್ಜ್ ಆಯ್ಕೆಯೊಂದಿಗೆ ನೀಡಲಾಗಿತ್ತು.

WagonR 2025: ಬಹುನಿರೀಕ್ಷಿತ ಮಾರುತಿ ವ್ಯಾಗನ್ಆರ್ 2025 ಬಿಡುಗಡೆ: ಬೆಲೆ, ಮೈಲೇಜ್ ಎಷ್ಟು?

ಆ ಕಾರು 2009 ರಿಂದ ಬಿಡುಗಡೆ ಆಗಿಲ್ಲ:

ಐದನೇ ತಲೆಮಾರಿನ ಮಾರುತಿ ಕರ್ವೋ ಕಾರಿನ ಮಾರಾಟ ಗುರಿಯನ್ನು 60,000 ಯುನಿಟ್‌ಗಳಿಗೆ ನಿಗದಿಪಡಿಸಲಾಗಿತ್ತು. ಆದರೆ ಈ ಕಾರಿನ ಕೇವಲ 12,000 ಯುನಿಟ್‌ಗಳು 2009 ರಲ್ಲಿ ಮಾರಾಟವಾದವು. ಇದಾದ ನಂತರ, ಸುಜುಕಿ ಮೋಟಾರ್ ಕಾರ್ಪೊರೇಷನ್ 2009 ರಲ್ಲಿ ವಿಶ್ವಾದ್ಯಂತ ಇದನ್ನು ಸ್ಥಗಿತಗೊಳಿಸಿತು. ಇದಾದ ನಂತರವೇ ಭಾರತದಂತಹ ದೊಡ್ಡ ಮಾರುಕಟ್ಟೆಯಲ್ಲಿ ಇದನ್ನು ಬಿಡುಗಡೆ ಮಾಡುವ ಯೋಜನೆಯನ್ನು ರೂಪಿಸಲಾಯಿತು. ಆದಾಗ್ಯೂ, ಆ ಸಮಯದಲ್ಲಿ ಮಾರುತಿ 800, ಮಾರುತಿ ವ್ಯಾಗನ್ಆರ್, ಮಾರುತಿ ಆಲ್ಟೊ, ಮಾರುತಿ ರಿಟ್ಜ್ ಮತ್ತು ಮಾರುತಿ ಸ್ವಿಫ್ಟ್‌ನಂತಹ ಸಣ್ಣ ಕಾರುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದವು. ಹೀಗಾಗಿ ಈ ಕಾರನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.

ಈಗ ಮತ್ತೊಮ್ಮೆ ದೇಶದಲ್ಲಿ 5 ಲಕ್ಷ ರೂ. ಗಿಂತ ಕಡಿಮೆ ಬೆಲೆಯ ಕಾರುಗಳ ಆಯ್ಕೆಗಳು ಕಡಿಮೆಯಾಗಿವೆ ಮತ್ತು ಮೇಲೆ ತಿಳಿಸಲಾದ ಎಲ್ಲಾ ಮಾರುತಿ ಕಾರುಗಳ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ಮಾರುತಿ ಸೆರ್ವೊ ಕಾರನ್ನು 3 ಲಕ್ಷ ರೂ. ಗಳ ಬೆಲೆಯಲ್ಲಿ ಬಿಡುಗಡೆ ಮಾಡಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಮಾರುತಿಯ ಹೊರತಾಗಿ, ಟಾಟಾ ಮೋಟಾರ್ಸ್ ಟಾಟಾ ನ್ಯಾನೋವನ್ನು ಮರಳಿ ತರುವ ಬಗ್ಗೆಯೂ ವದಂತಿಗಳಿವೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ