IPL 2025: ಸಿಎಸ್‌ಕೆ ವಿರುದ್ಧ ಗೆದ್ದ ಬಳಿಕ ಆರ್ಸಿಬಿ ಗೆಲುವಿನ ಸಂಭ್ರಮ ಹೇಗಿತ್ತು ನೀವೇ ನೋಡಿ
RCB vs CSK IPL 2025: ಐಪಿಎಲ್ 2025 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರೋಮಾಂಚಕ 2 ರನ್‌ಗಳ ಅಂತರದಿಂದ ಸೋಲಿಸಿತು. ವಿರಾಟ್ ಕೊಹ್ಲಿ ಮತ್ತು ರೊಮಾರಿಯೊ ಶೆಫರ್ಡ್ ಅವರ ಅರ್ಧಶತಕಗಳು ಆರ್‌ಸಿಬಿಗೆ 213 ರನ್‌ಗಳನ್ನು ಗಳಿಸಲು ಸಹಾಯ ಮಾಡಿದವು. ಸಿಎಸ್‌ಕೆ ಪರ ಆಯುಷ್ ಮ್ಹಾತ್ರೆ ಮತ್ತು ರವೀಂದ್ರ ಜಡೇಜಾ ಅರ್ಧಶತಕ ಗಳಿಸಿದರೂ, ಯಶ್ ದಯಾಳ್ ಅವರ ಅದ್ಭುತ ಬೌಲಿಂಗ್ ಚೆನ್ನೈಯ ಗೆಲುವಿಗೆ ಅಡ್ಡಗಾಲು ಹಾಕಿತು.
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಮಾಂಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ರನ್‌ಗಳಿಂದ ಸೋಲಿಸುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿತು. ಆರ್ಸಿಬಿಯ ಈ ಗೆಲುವಿನಲ್ಲಿ ಕೊನೆಯ ಓವರ್‌ಗಳು ಪ್ರಮುಖ ಪಾತ್ರವಹಿಸಿದವು. ಮೊದಲು ಬ್ಯಾಟಿಂಗ್ನಲ್ಲಿ ಕೊನೆಯ 2 ಓವರ್ಗಳಲ್ಲಿ 50 ಕ್ಕೂ ಹೆಚ್ಚು ರನ್ ಕಲೆಹಾಕಿದ ಆರ್ಸಿಬಿ, ಆ ಬಳಿಕ ಬೌಲಿಂಗ್ನಲ್ಲೂ ಕೊನೆಯ 2 ಓವರ್ಗಳಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ, ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ 213 ರನ್ ಕಲೆಹಾಕಿತು. ತಂಡದ ಪರ ವಿರಾಟ್ ಕೊಹ್ಲಿ ಮತ್ತು ಜಾಕೋಬ್ ಬೆಥೆಲ್ ಅರ್ಧಶತಕ ಬಾರಿಸಿದರೆ, ಕೊನೆಯಲ್ಲಿ ಬಂದ ರೊಮಾರಿಯೊ ಶೆಫರ್ಡ್ ಕೂಡ 14 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಗಳಿಸಿದರು. ಇದಕ್ಕೆ ಪ್ರತಿಯಾಗಿ ಆಯುಷ್ ಮ್ಹಾತ್ರೆ ಮತ್ತು ರವೀಂದ್ರ ಜಡೇಜಾ ಕೂಡ ಅರ್ಧಶತಕ ಬಾರಿಸುವ ಮೂಲಕ ಚೆನ್ನೈ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಆದರೆ ಕಳೆದ ಸೀಸನ್‌ನಂತೆ ಈ ಬಾರಿಯೂ ಯಶ್ ದಯಾಳ್ ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲ್ಲದಂತೆ ತಡೆದರು.