Jawa 42 Bobber Black Mirror: ಕ್ಲಾಸಿಕ್ ಸ್ಟೈಲ್ ನಲ್ಲಿ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ

|

Updated on: Sep 07, 2023 | 7:30 PM

ಜಾವಾ ಮೋಟಾರ್‌ಸೈಕಲ್ಸ್ ಕಂಪನಿ ತನ್ನ ಜನಪ್ರಿಯ ಜಾವಾ 42 ಬಾಬರ್‌ ಬೈಕ್ ನಲ್ಲಿ ಹೊಸದಾಗಿ ಬ್ಲ್ಯಾಕ್ ಮಿರರ್ ಎಡಿಷನ್ ಬಿಡುಗಡೆ ಮಾಡಿದೆ.

Jawa 42 Bobber Black Mirror: ಕ್ಲಾಸಿಕ್ ಸ್ಟೈಲ್ ನಲ್ಲಿ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ
ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ
Follow us on

ಕ್ಲಾಸಿಕ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಜಾವಾ ಮೋಟಾರ್‌ಸೈಕಲ್ಸ್(JAWA Motorcycle) ಕಂಪನಿಯು ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ (Jawa 42 Bobber Black Mirror) ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.25 ಲಕ್ಷ ಬೆಲೆ ಹೊಂದಿದೆ.

ಸ್ಪೆಷಲ್ ಎಡಿಷನ್ ವಿಶೇಷತೆಗಳೇನು?

ಮಾರ್ಡನ್ ಕ್ಲಾಸಿಕ್ ವಿನ್ಯಾಸದೊಂದಿಗೆ ಸುಧಾರಿತ ಪರ್ಫಾಮೆನ್ಸ್ ಮತ್ತು ಕಂಫರ್ಟ್ ಹೊಂದಿರುವ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಆವೃತ್ತಿಯು ಫ್ಯಾಕ್ಟರಿ ಕಸ್ಟಮ್ ನೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಡ್ಯುಯಲ್ ಟೋನ್‌ ಫಿನಿಶಿಂಗ್ ಅನ್ನು ಹೊಂದಿದೆ.

ಹೊಸ ಬೈಕಿನಲ್ಲಿ ಮರುವಿನ್ಯಾಸಗೊಳಿಸಲಾದ ಗೇರ್ ಬಾಕ್ಸ್ ಮತ್ತು ಎಂಜಿನ್ ಕವರ್‌ಗಳು ಗಮನಸೆಳೆಯಲಿದ್ದು, ಇದರಲ್ಲಿ ಟ್ಯೂಬ್‌ಲೆಸ್ ಟೈರ್‌ಗಳು, ಕ್ರೋಮ್ ಹೊಂದಿರುವ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಬಣ್ಣದ ಸೈಡ್ ಪ್ಯಾನೆಲ್, ಪ್ರೀಮಿಯಂ ಆಗಿರುವ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಟಿವಿಎಸ್ ಅಪಾಚೆ ಆರ್‌ಟಿಆರ್ 310 ಸ್ಟ್ರೀಟ್ ಫೈಟರ್ ಬೈಕ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಮಾದರಿಯಲ್ಲಿ ಈ ಹಿಂದಿನ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗಿದ್ದು, ಇದು ಹೊಸ ಪರಿಷ್ಕರಣೆಯೊಂದಿಗೆ ರೀಟ್ಯೂನ್ ಪಡೆದುಕೊಂಡಿದೆ. ರೀಟ್ಯೂನ್ ಮಾಡಲಾಗಿರುವ 334 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 29.49 ಹಾರ್ಸ್ ಪವರ್ ಮತ್ತು 32.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಬೈಕಿನಲ್ಲಿ ಪರ್ಫಾಮೆನ್ಸ್ ಸುಧಾರಿಸಲು ನವೀಕರಿಸಲಾದ ಮೊನೊಶಾಕ್ ಸಸ್ಪೆನ್ಷನ್ ನೊಂದಿಗೆ ಹಗುರವಾಗಿರುವ ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್ ನೀಡಲಾಗಿದ್ದು, ಇದು ಲಾಂಗ್ ರೈಡಿಂಗ್ ಇಷ್ಟಪಡುವ ಕ್ಲಾಸಿಕ್ ಬೈಕ್ ರೈಡರ್ ಗಳನ್ನು ಮತ್ತಷ್ಟು ಸೆಳೆಯಲಿದೆ.

ಇದನ್ನೂ ಓದಿ: ಯುವಕರ ಹಾಟ್ ಫೇವರಿಟ್ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬಿಡುಗಡೆ

ಇನ್ನು ಹೊಸ ಜಾವಾ 42 ಬಾಬರ್‌ ಬ್ಲ್ಯಾಕ್ ಮಿರರ್ ಬೈಕ್ ಬಿಡುಗಡೆ ಕುರಿತು ಮಾತನಾಡಿರುವ ಜಾವಾ ಯೆಜ್ಡಿ ಮೋಟಾರ್‌ ಸೈಕಲ್ ಕಂಪನಿಯ ಸಿಇಒ ಆಶಿಶ್ ಸಿಂಗ್ ಜೋಶಿ ಅವರು, ಜಾವಾ 42 ಬಾಬರ್‌ ಯಶಸ್ವಿ ಬಿಡುಗಡೆಯೊಂದಿಗೆ ಬಾಬರ್ ಬೈಕ್ ವಿಭಾಗದಲ್ಲಿ ನಮ್ಮ ಪ್ರಾಬಲ್ಯವನ್ನು ಬಲಪಡಿಸುತ್ತಿದ್ದು, ಇದೀಗ ನಮ್ಮ ಫ್ಯಾಕ್ಟರಿ ಕಸ್ಟಮ್ ಪೋರ್ಟ್‌ಫೋಲಿಯೊ ಬ್ಲ್ಯಾಕ್ ಮಿರರ್ ಆವೃತ್ತಿಯು ಭಾರತದಲ್ಲಿ ರೈಡಿಂಗ್ ಸಮುದಾಯನ್ನು ಮತ್ತಷ್ಟು ಸೆಳೆಯುವ ವಿಶ್ವಾಸವಿದೆ ಎಂದಿದ್ದಾರೆ.