Tata Punch EV: ಭರ್ಜರಿ ಮೈಲೇಜ್ ನೀಡುತ್ತೆ ಟಾಟಾ ಪಂಚ್ ಎಲೆಕ್ಟ್ರಿಕ್ ವರ್ಷನ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ನವೀಕೃತ ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಕಾರುಗಳ ಪಟ್ಟಿಯಲ್ಲಿ ಪಂಚ್ ಇವಿ ಕೂಡಾ ಪ್ರಮುಖ ಆವೃತ್ತಿಯಾಗಿದೆ.

Follow us
Praveen Sannamani
|

Updated on:Sep 06, 2023 | 8:35 PM

ಎಲೆಕ್ಟ್ರಿಕ್ ಕಾರುಗಳ(Electric Cars) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿ ಶೀಘ್ರದಲ್ಲಿ ಮತ್ತಷ್ಟು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಇವಿ ಕಾರುಗಳು ವಿವಿಧ ಸೆಗ್ಮೆಂಟ್ ಗಳಲ್ಲಿ ಬಿಡುಗಡೆಯಾಗಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ. ಹಾಗಾದ್ರೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಆ ಹೊಸ ಇವಿ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ನೆಕ್ಸಾನ್ ಎಲೆಕ್ಟ್ರಿಕ್ ಮೂಲಕ ಇವಿ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಎಲೆಕ್ಟ್ರಿಕ್ ಜೊತೆಗೆ ಟಿಗೋರ್ ಇವಿ, ಟಿಯಾಗೋ ಇವಿ ಮಾರಾಟ ಮಾಡುತ್ತಿರುವ ಟಾಟಾ ಕಂಪನಿ ಪಂಚ್(Punch) ಮೈಕ್ರೊ ಎಸ್ ಯುವಿಯಲ್ಲೂ ಇವಿ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದೆ. ಹೊಸ ಇವಿ ಕಾರು ಬಿಡುಗಡೆಗಾಗಿ ಈಗಾಗಲೇ ಕೊನೆಯ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಇವಿ ಕಾರು ಎರಡನೇ ತಲೆಮಾರಿನ ಇವಿ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಗೆ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಎಸ್ ಯುವಿ ಬಿಡುಗಡೆ

ಪಂಚ್ ಇವಿ ಬಿಡುಗಡೆಗೂ ಮುನ್ನ ಇದೇ ತಿಂಗಳಾಂತ್ಯಕ್ಕೆ ನೆಕ್ಸಾನ್ ಇವಿ ಕಾರಿನ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆಯಾಗುತ್ತಿದ್ದು, ನೆಕ್ಸಾನ್ ಇವಿ ಬಿಡುಗಡೆಯ ನಂತರವಷ್ಟೇ ಟಾಟಾ ಕಂಪನಿಯ ಇನ್ನುಳಿದ ಇವಿ ಕಾರುಗಳು ಹಂತ ಹಂತವಾಗಿ ಬಿಡುಗಡೆಯಾಗಲಿವೆ. ಇದರಲ್ಲಿ ಪಂಚ್ ಇವಿ ಕಾರು ಸಣ್ಣ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೋ ಇವಿ ಆವೃತ್ತಿಯಲ್ಲಿರುವಂತೆ ತಂತ್ರಜ್ಞಾನ ಮತ್ತು ಫೀಚರ್ಸ್ ಹೊಂದಿರಲಿದೆ. ಹೊಸ ಕಾರಿನ ಕುರಿತಾಗಿ ಟಾಟಾ ಕಂಪನಿಯಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ರೋಡ್ ಟೆಸ್ಟಿಂಗ್ ವೇಳೆ ಹಲವಾರು ಮಾಹಿತಿಗಳು ಲಭ್ಯವಾಗಿವೆ.

ಹೊಸ ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 250 ರಿಂದ 280 ಕಿಲೋ ಮೀಟರ್ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಹೊಸ ಕಾರನ್ನು ಟಾಟಾ ಕಂಪನಿ ಅಲ್ಫಾ ಕಾರು ಉತ್ಪಾದನಾ ಪ್ಲಾಟ್ ಫಾರ್ಮ್ ಅಡಿ ನಿರ್ಮಾಣ ಮಾಡುತ್ತಿದ್ದು, ಹೊಸ ಪ್ಲ್ಯಾಟ್ ಫಾರ್ಮ್ ನೊಂದಿಗೆ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮತ್ತು ಫೀಚರ್ಸ್ ನೀಡಲಾಗುತ್ತಿದೆ. ಹೀಗಾಗಿ ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಟಿಯಾಗೋ ಇವಿ ಗಿಂತಲೂ ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಇವಿ ಕಾರುಗಳಿಗೂ ಭರ್ಜರಿ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಆಕರ್ಷಕ ಫೀಚರ್ಸ್ ಗಳೊಂದಿಗೆ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ ಅನಾವರಣ

ಇನ್ನು ಪಂಚ್ ಇವಿ ಕಾರು ಭಾರತದಲ್ಲಿ 2024ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ. ಪಂಚ್ ಇವಿ ಬಿಡುಗಡೆಗೂ ಮುನ್ನ ಟಾಟಾ ಮೋಟಾರ್ಸ್ ಕಂಪನಿ ನೆಕ್ಸಾನ್ ಫೇಸ್ ಲಿಫ್ಟ್, ಹ್ಯಾರಿಯರ್ ಇವಿ ಮತ್ತು ಕರ್ವ್ ಕಾನ್ಸೆಪ್ಟ್ ಬಿಡುಗಡೆ ಮಾಡಲಿದ್ದು, ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿ 2030ರ ವೇಳೆಗೆ ಶೇ.50 ರಷ್ಟು ಇವಿ ಕಾರುಗಳ ಮಾರಾಟ ಹೊಂದುವ ಗುರಿಹೊಂದಿದೆ. ಈ ಮೂಲಕ ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ಮಹತ್ವದ ಹೆಜ್ಜೆಯಿರಿಸುತ್ತಿದ್ದು, ಹೊಸ ಇವಿ ಕಾರುಗಳು ಸುರಕ್ಷತೆಯಲ್ಲೂ ಗಮನಸೆಳೆಯಲಿವೆ.

Published On - 8:30 pm, Wed, 6 September 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ