ಜಾವಾ, ಯೆಜ್ಡಿ ಕ್ಲಾಸಿಕ್ ಬೈಕ್ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್ ಘೋಷಣೆ

|

Updated on: Dec 12, 2023 | 9:36 PM

ಕ್ಲಾಸಿಕ್ ಬೈಕ್ ಪ್ರಿಯರ ಜಾವಾ ಮತ್ತು ಯೆಜ್ಡಿ ವಿವಿಧ ಬೈಕ್ ಮಾದರಿಗಳ ಮೇಲೆ ಆಕರ್ಷಕ ಇಯರ್ ಎಂಡ್ ಆಫರ್ ಗಳನ್ನು ನೀಡಲಾಗುತ್ತಿದ್ದು, ಕ್ಲಾಸಿಕ್ ಬೈಕ್ ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಜಾವಾ, ಯೆಜ್ಡಿ ಕ್ಲಾಸಿಕ್ ಬೈಕ್ ಖರೀದಿದಾರರಿಗೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಜಾವಾ, ಯೆಜ್ಡಿ ಕ್ಲಾಸಿಕ್ ಬೈಕ್ ಗಳು
Follow us on

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್(Classic Legends) ಕಂಪನಿಯು ತನ್ನ ಜಾವಾ(Jawa) ಮತ್ತು ಯೆಜ್ಡಿ (Yezdi) ಬೈಕ್ ಮಾದರಿಗಳ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಇಯರ್ ಎಂಡ್ ಆಫರ್ ಗಳೊಂದಿಗೆ ಗ್ರಾಹಕರು ಹೆಚ್ಚಿನ ಉಳಿತಾಯ ಮಾಡಬಹುದಾಗಿದೆ. ಹೊಸ ಆಫರ್ ಗಳು ಜಾವಾ ಬೈಕ್ ಸರಣಿಯಲ್ಲಿರುವ ಜಾವಾ, ಜಾವಾ 42, ಜಾವಾ 42 ಬಾಬ್ಬರ್, ಜಾವಾ ಪೆರಾಕ್ ಬೈಕ್‌ ಮತ್ತು ಯೆಜ್ಡಿ ಮೋಟಾರ್ ಸೈಕಲ್ ಸರಣಿಯಲ್ಲಿರುವ ಯೆಜ್ಡಿ ರೋಡ್ ಸ್ಟರ್, ಯೆಜ್ಡಿ ಸ್ಕ್ರಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಗಳನ್ನು ಒಳಗೊಂಡಿದೆ.

ಜಾವಾ ಮತ್ತು ಯೆಜ್ಡಿ ಹೊಸ ಆಫರ್ ಗಳಲ್ಲಿ ಗ್ರಾಹಕರು ರೂ. 10 ಸಾವಿರ ಎಕ್ಸ್ ಚೆಂಜ್ ಆಫರ್ ಪಡೆದುಕೊಳ್ಳಬಹುದಾಗಿದ್ದು, ಎಕ್ಸ್ ಚೆಂಜ್ ಆಫರ್ ಜೊತೆಗೆ ನಾಲ್ಕು ವರ್ಷಗಳ ಅಥವಾ 50,000 ಕಿ.ಮೀ ವಿಶೇಷ ವಿಸ್ತರಿತ ವಾರಂಟಿ ನೀಡಲಾಗುತ್ತದೆ. ಜಾವಾ ಮತ್ತು ಯೆಜ್ಡಿ ಬೈಕ್ ಗಳ ಮೇಲೆ ಸಾಮಾನ್ಯವಾಗಿ 2 ವರ್ಷ ಅಥವಾ 24 ಸಾವಿರ ಕಿ.ಮೀ ಮೇಲೆ ಆಫರ್ ಸಿಗಲಿದ್ದು, ವರ್ಷಾಂತ್ಯದ ಆಫರ್ ನಲ್ಲಿ ಬೈಕ್ ಖರೀದಿಸುವ ಗ್ರಾಹಕರಿಗೆ ಇದೀಗ ಡಬಲ್ ವಾರಂಟಿ ಆಫರ್ ಸಿಗುತ್ತಿದೆ.

ಇದರೊಂದಿಗೆ ಜಾವಾ ಮತ್ತು ಯೆಜ್ಡಿ ಹೊಸ ಆಫರ್ ಗಳಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಬೈಕ್ ಮಾದರಿಯನ್ನು ಪ್ರತಿ ತಿಂಗಳು ರೂ.1,888 ರಿಂದ ಪ್ರಾರಂಭವಾಗುವ ಇಎಂಐ ಸೌಲಭ್ಯಗಳೊಂದಿಗೆ ಖರೀದಿಸಬಹುದಾಗಿದ್ದು, ಅಡ್ವೆಂಚರ್ ಪ್ರಿಯರಿಗಾಗಿ ಶೇ. 50 ರಷ್ಟು ರಿಯಾಯ್ತಿ ದರದಲ್ಲಿ ಆಕ್ಸೆಸರಿಸ್ ಪ್ಯಾಕೇಜ್ ಕೂಡಾ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?

ಇನ್ನು ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಇತ್ತೀಚೆಗೆ ನವೀಕೃತ ಜಾವಾ 42 ಮತ್ತು ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳು ಕ್ರಮವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.98 ಲಕ್ಷ ಮತ್ತು ರೂ. 2.08 ಲಕ್ಷ ಆರಂಭಿಕ ಬೆಲೆ ಹೊಂದಿವೆ. ಇದರಲ್ಲಿ ಹೊಸ ಜಾವಾ 42 ಆವೃತ್ತಿಯು ಡ್ಯುಯಲ್‌ ಟೋನ್‌ ರೂಪಾಂತರದೊಂದಿಗೆ ಸ್ಪಷ್ಟವಾದ ಲೆನ್ಸ್ ಇಂಡಿಕೇಟರ್‌ಗಳು, ಶಾರ್ಟ್-ಹ್ಯಾಂಗ್‌ ಫೆಂಡರ್‌ಗಳು ಮತ್ತು ಹೊಸ ಡಿಂಪಲ್ ಫ್ಯೂಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರೀಮಿಯಂ ಲುಕ್ ನೀಡುವುದಕ್ಕಾಗಿ ಹೊಸ ಬೈಕಿನಲ್ಲಿ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ನೀಡಲಾಗಿದೆ.

ಹಾಗೆಯೇ ನವೀಕೃತ ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಯು ಈ ಬಾರಿ ಗುರುತರವಾದ ವಿನ್ಯಾಸ ನವೀಕರಣಗಳನ್ನು ಹೊಂದಿದ್ದು, ಸ್ಪೋರ್ಟಿಯರ್ ಲುಕ್ ನೊಂದಿಗೆ ಮೊಣಕಾಲಿಗೆ ಆಯಾಸವಾಗದಂತೆ ಅರಾಮದಾಯಕವಾದ ವಿರಾಮಕ್ಕಾಗಿ ಪಟ್ಟಿ ನೀಡಲಾಗಿದೆ. ಜೊತೆಗೆ ಪ್ರೀಮಿಯಂ ಆಗಿರುವ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಮತ್ತು ಎಂಜಿನ್ ಮತ್ತು ಎಕ್ಸಾಸ್ಟ್ ಮೇಲೆ ರಾವೆನ್ ಟೆಕ್ಸ್‌ಚರ್‌ ಫಿನಿಶ್‌ ಸೇರಿಸಲಾಗಿದೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!

ಹೊಸ ಬೈಕ್ ಮಾದರಿಗಳಲ್ಲಿ 334 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 29.5 ಹಾರ್ಸ್ ಪವರ್ ಮತ್ತು 28.9 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಇದು 1440 ಎಂ.ಎಂ ವ್ಹೀಲ್ ಬೇಸ್ ನೊಂದಿಗೆ ಅರಾಮದಾಯಕ ಪ್ರಯಾಣಕ್ಕೆ ಅನುಕೂಲಕವಾದ ಆವೃತ್ತಿಯಾಗಿದೆ.