ರೆಟ್ರೋ ಕ್ಲಾಸಿಕ್ ಶೈಲಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ಕವಾಸಕಿ (Kawasaki) ಡಬ್ಲ್ಯೂ175 ಸ್ಟ್ರೀಟ್ ಮಾದರಿಯು ಹೊಸ ನವೀಕರಣದೊಂದಿಗೆ ಬಿಡುಗಡೆಯಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.35 ಲಕ್ಷ ಬೆಲೆ ಹೊಂದಿದೆ. ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿ ಕಂಪನಿಯು ಕಳೆದ ವರ್ಷವಷ್ಟೇ ತನ್ನ ಕಡಿಮೆ ಬೆಲೆಯ ಡಬ್ಲ್ಯೂ175 ಮತ್ತು ಡಬ್ಲ್ಯೂ175 ಸ್ಟ್ರೀಟ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಡಬ್ಲ್ಯೂ175 ಸ್ಟ್ರೀಟ್ ಮಾದರಿಯನ್ನು ಕೆಲವು ಬದಲಾವಣೆಗಳೊಂದಿಗೆ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದು ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಸೇರಿದಂತೆ ವಿವಿಧ ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.
ಡಬ್ಲ್ಯು175 ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರುವ ಹೊಸ ಡಬ್ಲ್ಯೂ175 ಸ್ಟ್ರೀಟ್ ಮಾದರಿಯು ರೆಟ್ರೋ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ಗಮನಸೆಳೆಯುತ್ತಿದ್ದು, ಇದರಲ್ಲಿ ಪ್ರಕಾಶಮಾನವಾಗಿರುವ ರೌಂಡ್ ಹಾಲೋಜೆನ್ ಹೆಡ್ ಲ್ಯಾಂಪ್, ಟಿಯರ್ ಡ್ರಾಫ್ ವಿನ್ಯಾಸದ ಫ್ಯೂಲ್ ಟ್ಯಾಂಕ್ ಸೇರಿದಂತೆ ಟ್ಯೂಬ್ ಲೆಸ್ ಟೈರ್ ವೈಶಿಷ್ಟ್ಯತೆಯ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಆರ್‌ಇ ಹಿಮಾಲಯನ್ Vs ಯೆಜ್ಡಿ ಅಡ್ವೆಂಚರ್.. ಅಡ್ವೆಂಚರ್ ರೈಡ್‌ಗೆ ಯಾವುದು ಬೆಸ್ಟ್?
ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಡಬಲ್ ಕ್ರೇಡಲ್ ಫ್ರೇಮ್ ಸೆಟಪ್ ಹೊಂದಿದ್ದು, ಬೈಕಿನ ಮುಂಭಾಗದಲ್ಲಿ ಕನ್ವೆಷನಲ್ ಫೋರ್ಕ್ ಸಸ್ಷೆಂಷನ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಸಸ್ಷೆಂಷನ್ ನೀಡಲಾಗಿದೆ. ಇದರೊಂದಿಗೆ ಹೊಸ ಬೈಕ್ ಮಾದರಿಯು 152ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 12.1 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಹೊಂದಿದ್ದು, ಇದು ಒಟ್ಟಾರೆ 135.5 ಕೆ.ಜಿ ತೂಕ ಹೊಂದಿದೆ.
ಕವಾಸಕಿ ಕಂಪನಿಯು ಡಬ್ಲ್ಯೂ175 ಸ್ಟ್ರೀಟ್ ಬೈಕಿನಲ್ಲಿ 177 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಜೋಡಿಸಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 12.82 ಹಾರ್ಸ್ ಪವರ್ ಮತ್ತು 13.3 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಸೇರಿದಂತೆ ಮುಂಭಾಗ ಚಕ್ರದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 110 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.
ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!
ಇನ್ನು ಹೊಸ ಬೈಕಿನಲ್ಲಿ ಉತ್ತಮ ಗುಣಮಟ್ಟದ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ ಸಿಡಿ ಡಿಜಿಟಲ್ ಮೀಟರ್ ನೀಡಲಾಗಿದ್ದು, ಇದು ಕ್ಯಾಂಡಿ ಎಮರ್ಲಾಡ್ ಗ್ರೀನ್ ಮತ್ತು ಮೆಟಾಲಿಕ್ ಮೂನ್ ಡಸ್ಟ್ ಗ್ರೇ ಬಣ್ಣಗಳ ಆಯ್ಕೆ ಹೊಂದಿದೆ.