ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..

|

Updated on: Jun 23, 2024 | 8:44 PM

ಪರಿಸರ ಸ್ನೇಹಿ ಇಂಧನ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ಹೆಚ್ಚುತ್ತಿರುವುದರಿಂದ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನು ಸಿಎನ್ ಜಿ ಮಾದರಿಯಾಗಿ ಮಾರ್ಪಾಡುಗೊಳಿಸುವ ಯೋಜನೆಗೆ ತಮಿಳುನಾಡಿನ ಕಂಪನಿಯೊಂದು ಚಾಲನೆ ನೀಡಿದೆ.

ಕೇವಲ ರೂ. 15 ಸಾವಿರಕ್ಕೆ ಸಿಎನ್‌ಜಿ ಆವೃತ್ತಿಯಾಗಲಿವೆ ನಿಮ್ಮ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು..
ಸಿಎನ್‌ಜಿ ಆವೃತ್ತಿಯಾಗಲಿವೆ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು
Follow us on

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ತಡೆಯಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಮೂಲದ ಆಟೋಮೊಬೈಲ್ ಕಂಪನಿಯೊಂದು ಪ್ರಸ್ತುತ ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನೇ ಸಿಎನ್‌ಜಿ ಆವೃತ್ತಿಯಾಗಿ (CNG Version ) ಮಾರ್ಪಡಿಸುವ ಬೃಹತ್ ಯೋಜನೆ ರೂಪಿಸಿದೆ.

ಪೆಟ್ರೋಲ್ ಚಾಲಿತ ಹಳೆಯ ಕಾರುಗಳಲ್ಲಿ ಮಾಲೀಕರ ಆದ್ಯತೆ ಮೇರೆಗೆ ಈಗಾಗಲೇ ಹಲವು ಆಟೋಮೊಬೈಲ್ ಕಂಪನಿಗಳು ಸಿಎನ್ ಜಿ ಕಿಟ್ ಜೋಡಣೆ ಮಾಡುತ್ತಿದ್ದು, ಇದೀಗ ತಮಿಳುನಾಡಿನ ತಿರುಚ್ಚಿ ಮೂಲದ ಕೆಆರ್ ಫ್ಯೂಲ್ಸ್ ಕಂಪನಿಯು ಅತಿ ಕಡಿಮೆ ಬೆಲೆಯಲ್ಲಿ ಎಲ್ಲಾ ಮಾದರಿಯ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಿಗೆ ಸಿಎನ್ ಜಿ ಕಿಟ್ ಜೋಡಣೆ ಮಾಡುವುದಾಗಿ ಘೋಷಿಸಿದೆ.

ಕೆಆರ್ ಫ್ಯೂಲ್ಸ್ ಕಂಪನಿಯು ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಿಗೆ ಸಿಎನ್ ಜಿ ಕಿಟ್ ಜೋಡಣೆ ಮಾಡಲು ಕೇಂದ್ರ ಸಾರಿಗೆ ಇಲಾಖೆಯಿಂದ ಅನುಮೋದನೆ ಪಡೆದುಕೊಂಡಿದ್ದು, ಸಿಎನ್ ಜಿ ಕಿಟ್ ಜೋಡಣೆ ಮಾಡಲು ಒಟ್ಟಾರೆಯಾಗಿ ರೂ. 15,500 ಬೆಲೆ ನಿಗದಿ ಮಾಡಿದೆ. ಇದರಲ್ಲಿ ರೂ. 10,500 ಸಿಎನ್ ಜಿ ಕಿಟ್ ಗೆ ದರ ನಿಗದಿ ಮಾಡಲಾಗಿದ್ದರೆ ಇನ್ನುಳಿದ ರೂ. 5000 ಸಿಎನ್ ಜಿ ಕಿಟ್ ಜೋಡಣೆಗಾಗಿ ಶುಲ್ಕು ವಿಧಿಸಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಸಿಎನ್ ಜಿ ಕಿಟ್ ನಲ್ಲಿ ಕೆಆರ್ ಫ್ಯೂಲ್ಸ್ ಕಂಪನಿಯು 5 ಲೀಟರ್ ಸಾಮರ್ಥ್ಯದ ಸಿಎನ್ ಜಿ ಟ್ಯಾಂಕ್ ಜೊತೆಗೆ ಇಸಿಯು ವೈರಿಂಗ್ ಮತ್ತು ಇಂಜೆಕ್ಟರ್‌ಗಳನ್ನು ಒಳಗೊಂಡಿರಲಿದ್ದು, ಸಿಎನ್ ಜಿ ಕಿಟ್ ಜೋಡಣೆ ನಂತರ ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ಸಹ ಮಾಲೀಕರಿಗೆ ವಿತರಣೆ ಮಾಡಲಿದೆ. ಇದಕ್ಕಾಗಿ ಬೃಹತ್ ಯೋಜನೆ ರೂಪಿಸಿರುವ ಕೆಆರ್ ಫ್ಯೂಲ್ಸ್ ಕಂಪನಿಯು ಈಗಾಗಲೇ ದೇಶಾದ್ಯಂತ ತನ್ನ ವಿನೂತನ ಉತ್ಪನ್ನವನ್ನು ಗ್ರಾಹಕರಿಗೆ ತಲುಪಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ.

ತಮಿಳುನಾಡಿನ ತಿರುಚ್ಚಿಯಲ್ಲಿ ಸಿಎನ್ ಜಿ ಕಿಟ್ ಉತ್ಪಾದನಾ ಘಟಕ ಹೊಂದಿರುವ ಕೆಆರ್ ಫ್ಯೂಲ್ಸ್ ಕಂಪನಿಯು ಈಗಾಗಲೇ 8 ಸಾವಿರ ಯುನಿಟ್ ಗಳನ್ನು ಸಿದ್ದಪಡಿಸಿದ್ದು, ಬಿಎಸ್ 4 ಪ್ರಮಾಣಿಕೃತ ದ್ವಿಚಕ್ರ ವಾಹನಗಳಿಗೆ ಮಾತ್ರ ಸಿಎನ್ ಜಿ ಕಿಟ್ ಜೋಡಣೆ ಮಾಡಲು ನಿರ್ಧರಿಸಿದೆ. ಈ ಮೂಲಕ ಕಂಪನಿಯು ಮಾಲಿನ್ಯಕ್ಕೆ ಕಾರಣವಾಗಿರುವ ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳನ್ನು ಸುಲಭವಾಗಿ ಪರಿಸರ ಸ್ನೇಹಿ ಮಾರ್ಪಡಿಸಲಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಇದನ್ನೂ ಓದಿ: ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುವ ವಾಹನ ಮಾಲೀಕರಿಗೆ ಭಾರೀ ದಂಡ ಫಿಕ್ಸ್

ಇನ್ನು ಪೆಟ್ರೋಲ್ ಚಾಲಿತ ದ್ವಿಚಕ್ರವಾಹನಗಳನ್ನು ಸಿಎನ್ ಜಿ ಆವೃತ್ತಿಯಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಈ ಹಿಂದೆಯೂ ಹಲವು ಕಂಪನಿಗಳು ಪ್ರಯತ್ನಿಸಿದ್ದವು. 2017ರಲ್ಲಿಯೇ ಲಾವಾಟೊ ಎನ್ನುವ ಕಂಪನಿಯು ಕೂಡಾ ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿ ಸಿಎನ್ ಜಿ ಕಿಟ್ ಜೋಡಣೆ ಮಾಡಿ ಯಶಸ್ವಿಯಾಗಿತ್ತು. ಆದರೆ ಕಾರಣಾಂತರಗಳಿಂದ ಹೊಸ ಯೋಜನೆಯನ್ನು ದೊಡ್ಡಮಟ್ಟದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಕೆಆರ್ ಫ್ಯೂಲ್ಸ್ ಕಂಪನಿಯು ಹೊಸ ಪಯತ್ನಗಳೊಂದಿಗೆ ಮೊದಲ ಬಾರಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಸಿಎನ್ ಜಿ ಲಭ್ಯತೆ ಇರುವ ಸ್ಥಳಗಳಲ್ಲಿನ ದ್ವಿಚಕ್ರ ವಾಹನಗಳ ಮಾಲೀಕರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು.