ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುವ ವಾಹನ ಮಾಲೀಕರಿಗೆ ಭಾರೀ ದಂಡ ಫಿಕ್ಸ್

ಪ್ರಕಾಶಮಾನವಾದ ಹೆಡ್‌ಲೈಟ್ ಹೊಂದಿರುವ ವಾಹನಗಳ ಬಳಕೆಯು ಹೆಚ್ಚುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುವ ವಾಹನ ಮಾಲೀಕರಿಗೆ ಭಾರೀ ದಂಡ ಫಿಕ್ಸ್
ಹೈ-ಬೀಮ್ ಹೆಡ್‌ಲೈಟ್
Follow us
|

Updated on: Jun 20, 2024 | 10:24 PM

ವಾಹನಗಳಲ್ಲಿ ಪ್ರಕಾಶಮಾನವಾದ ಹೆಡ್‌ಲೈಟ್ ಗಳ ಬಳಕೆಗೆ ನಿಷೇಧವಿದ್ದರೂ ಹೈ-ಬೀಮ್ ಹೆಡ್‌ಲೈಟ್ಸ್ (High-Beam Headlights) ಹೊಂದಿರುವ ವಾಹನಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಕೂಡಾ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹೈ-ಬೀಮ್ ಹೆಡ್‌ಲೈಟ್ಸ್ ಬಳಕೆ ಕೆಲವು ಸಂದರ್ಭದಲ್ಲಿ ಅನುಕೂಲಕವಾಗಿದ್ದರೂ ಕೂಡಾ ನಗರಪ್ರದೇಶಗಳಲ್ಲಿ ಇವುಗಳ ಬಳಕೆಯು ಹೆಚ್ಚಿನ ಮಟ್ಟದ ಅಪಘಾತಗಳಿಗೆ ಮೂಲ ಕಾರಣವಾಗಿರುವುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ನಗರ ಸಂಚಾರಿ ಪೊಲೀಸರು ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಮಾಲೀಕರು ವಿರುದ್ದ ವಿಶೇಷ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.

ಜುಲೈ 1ರಿಂದಲೇ ಹೈ-ಬೀಮ್ ಹೆಡ್‌ಲೈಟ್ ಬಳಕೆ ಮಾಡುತ್ತಿರುವ ವಾಹನಗಳ ಮಾಲೀಕರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸುತ್ತಿದ್ದು, ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ದಂಡ ವಿಧಿಸಲು ಸಜ್ಜಾಗಿದ್ದಾರೆ.

ಮೊದಲ ಬಾರಿಗೆ ಸಿಕ್ಕಿಬಿಳುವ ಹೈ-ಬೀಮ್ ಹೆಡ್‌ಲೈಟ್ಸ್ ಹೊಂದಿರುವ ವಾಹನಗಳಿಗೆ ರೂ. 500 ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಎರಡನೇ ಬಾರಿಗೆ ಸಿಕ್ಕಿಬಿದ್ದಲ್ಲಿ ರೂ. 1 ಸಾವಿರ ದಂಡ ಪ್ರಯೋಗಿಸಲಾಗುತ್ತದೆ. ದಂಡಕ್ಕೂ ಕ್ಯಾರೆ ಅನ್ನದೇ ಪದೇ ಪದೇ ಸಿಕ್ಕಿಬಿಳುವ ವಾಹನಗಳನ್ನು ಸೀಜ್ ಮಾಡಲು ನಿರ್ಧರಿಸಲಾಗಿದ್ದು, ಸುರಕ್ಷಿತ ಸಂಚಾರ ನಿಯಮ ಪಾಲನೆಗೆ ಒತ್ತು ನೀಡಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಪ್ರಕಾಶಮಾನವಾದ ಹೆಡ್‌ಲೈಟ್ ಗಳಿಂದಲಾಗಿ ವಿರುದ್ದ ದಿಕ್ಕಿನಲ್ಲಿ ಬರುವ ವಾಹನ ಸವಾರರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದ್ದು, ಅನಗತ್ಯವಾಗಿರುವ ಹೈ-ಬೀಮ್ ಹೆಡ್‌ಲೈಟ್ ಗಳು ವಾಹನ ಸವಾರಿಗೆ ಕಂಟಕವಾಗಿವೆ. ಪ್ರಕಾಶಮಾನದ ಬೆಳಕು ಹೊರಸೂಸುವುದಿಂದ ವಿರುದ್ದ ದಿಕ್ಕಿನಲ್ಲಿ ಬರುವ ವಾಹನ ಸವಾರರ ಕಣ್ಣಿಗೆ ಅಘಾತವಾಗಲಿದ್ದು, ಇದು ಅಪಘಾತಗಳಿಗೆ ಮೂಲ ಕಾರಣವಾಗುತ್ತಿದೆ. ಹೀಗಾಗಿ ದೇಶಾದ್ಯಂತ ಈಗಾಗಲೇ ಹಲವು ರಾಜ್ಯಗಳು ಹೈ-ಬೀಮ್ ಹೆಡ್‌ಲೈಟ್ಸ್ ಹೊಂದಿರುವ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಇದೀಗ ರಾಜ್ಯ ಪೊಲೀಸರು ಕೂಡಾ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಈ ಕುರಿತಂತೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಸುತ್ತೋಲೆ ಹೊರಡಿಸಿದ್ದು, ಬೆಂಗಳೂರಿನಲ್ಲಿ ಮಾತ್ರವಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಾಹನಗಳ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.

ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ