Low Safety Rates Cars: ಭಾರತದಲ್ಲಿ ಜನಪ್ರಿಯವಾಗಿರುವ ಟಾಪ್ 5 ಕಳಪೆ ಕಾರುಗಳಿವು!

|

Updated on: Apr 25, 2024 | 6:52 PM

ಗ್ಲೊಬಲ್ ಎನ್ ಸಿಎಪಿ ಸುರಕ್ಷಿತ ಕಾರುಗಳ ಅಭಿಯಾನದಡಿ ಇತ್ತೀಚೆಗೆ ಭಾರತದಲ್ಲಿ ಮಾರಾಟವಾಗುತ್ತಿರುವ ವಿವಿಧ ಕಾರು ಮಾದರಿಗಳು ಕ್ರ್ಯಾಶ್ ಟೆಸ್ಟ್ ಎದುರಿಸಿದ್ದು, ಇದರಲ್ಲಿ ಕಡಿಮೆ ಸುರಕ್ಷಾ ಫೀಚರ್ಸ್ ನೊಂದಿಗೆ ಕಳಪೆ ಪ್ರದರ್ಶನ ತೋರಿದ ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Low Safety Rates Cars: ಭಾರತದಲ್ಲಿ ಜನಪ್ರಿಯವಾಗಿರುವ ಟಾಪ್ 5 ಕಳಪೆ ಕಾರುಗಳಿವು!
ಕಳಪೆ ಗುಣಮಟ್ಟದ ಕಾರುಗಳು
Follow us on

ಹೊಸ ಕಾರು ಖರೀದಿದಾರರು ಸುರಕ್ಷಿತ ಕಾರುಗಳ ಮಾಲೀಕತ್ವದತ್ತ ಮುಖ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳ ಸುರಕ್ಷತೆಯಲ್ಲಿ ಭಾರೀ ಬದಲಾವಣೆ ತರಲಾಗುತ್ತಿದೆ. ಸುರಕ್ಷಿತ ಕಾರುಗಳ ಸಂಖ್ಯೆ ಹೆಚ್ಚಳದ ನಡುವೆಯೂ ಕಳಪೆ ಕಾರುಗಳ (Low Safety Cars) ಮಾರಾಟ ಕೂಡಾ ಗಣನೀಯವಾಗಿ ಏರಿಕೆಯಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಲಿರುವ ಕಳಪೆ ಗುಣಮಟ್ಟದ ಕಾರುಗಳ ಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಸದ್ಯ ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಯಲ್ಲಿ ಹಿಂದೆ ಬಿದ್ದಿರುವ ಕಾರುಗಳ ಯಾವುವು? ಅವುಗಳ ಸೇಫ್ಟಿ ರೇಟಿಂಗ್ಸ್ ಎಷ್ಟು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಸುರಕ್ಷಿತ ಕಾರುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರು ಕಂಪನಿಗಳು ಮಹತ್ವದ ಬದಲಾವಣೆಗಳನ್ನು ಅಳವಡಿಸಿಕೊಂಡಿವೆ. ಆದರೆ ಇನ್ನು ಕೆಲವು ಕಾರು ಕಂಪನಿಗಳು ಸುರಕ್ಷತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಕಡಿಮೆ ಬೆಲೆಯಲ್ಲಿ ಕಳಪೆ ಕಾರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಕಾರುಗಳೇ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮುಗ್ಗರಿಸಿದ್ದು, ಇವು ಗ್ರಾಹಕರಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಮಹೀಂದ್ರಾ ಬೊಲೆರೊ ನಿಯೋ

ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಮಹೀಂದ್ರಾ ಬೊಲೆರೊ ನಿಯೋ ಎಸ್ ಯುವಿ ಮಾದರಿಯು ಕೇವಲ 1 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಗ್ಲೊಬಲ್ ನ್ಯೂ ಕಾರ್‌ ಅಸೆಸ್‌ಮೆಂಟ್‌ ಪ್ರೋಗ್ರಾಂ ನ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಕಾರು ಹೆಚ್ಚಿನ ಹಾನಿಯೊಂದಿಗೆ ಪ್ರಯಾಣಿಕರಿಗೆ ಗಂಭೀರ ಪ್ರಾಣಹಾನಿ ಉಂಟುಮಾಡಬಹುದಾಗಿದೆ.

ಇದನ್ನೂ ಓದಿ: ರಣಬಿಸಿಲಿನಲ್ಲೂ ಅರಾಮದಾಯಕ ಕಾರು ಪ್ರಯಾಣಕ್ಕೆ ಸಹಕಾರಿಯಾಗುವ ಟಿಪ್ಸ್..

ಹೋಂಡಾ ಅಮೇಜ್

ಕಂಪ್ಯಾಕ್ಟ್ ಸೆಡಾನ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಹೋಂಡಾ ಕಂಪನಿಯು ಅಮೇಜ್ ಕಾರಿನ ಸುರಕ್ಷತೆಯಲ್ಲಿ ಹಿಂದಿಬಿದ್ದಿದೆ. ಅಮೇಜ್ ಕಾರು 2 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದು, ಇದು ಕೂಡಾ ಅಪಘಾತದ ಸಂದರ್ಭದಲ್ಲಿ ಹೆಚ್ಚಿನ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ. ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಜೋಡಣೆ ಹೊರತಾಗಿಯೂ ಉತ್ಪಾದನಾ ಗುಣಮಟ್ಟವು ಕಳಪೆಯಾಗಿದ್ದು, ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸಾಕಷ್ಟು ಸುಧಾರಿಸಬೇಕಿದೆ.

ಸಿಟ್ರನ್ ಇಸಿ3 ಎಲೆಕ್ಟ್ರಿಕ್

ಭಾರತದಲ್ಲಿ ಇತ್ತೀಚಗೆ ಬಿಡುಗಡೆಯಾಗಿರುವ ಇಸಿ3 ಎಲೆಕ್ಟ್ರಿಕ್ ಕಾರು ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ವಿಚಾರಕ್ಕೆ ಗ್ರಾಹಕರಿಂದ ಟೀಕೆ ಎದುರಿಸುತ್ತಿದ್ದು, ಕಳಪೆ ಕಾರು ಮಾರಾಟದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇಸಿ3 ಕಾರು ವಯಸ್ಕರ ಪ್ರಯಾಣಿಕರ ಸುರಕ್ಷತೆಗಾಗಿ ಸೊನ್ನೆ ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದ್ದರೆ ಮಕ್ಕಳ ಸುರಕ್ಷತೆಗಾಗಿ ಕೇವಲ 1 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಮಾರುತಿ ಸುಜುಕಿ ಇಗ್ನಿಸ್ ಮತ್ತು ವ್ಯಾಗನ್ಆರ್

ಇತ್ತೀತೆಗೆ ಕ್ರ್ಯಾಶ್ ಟೆಸ್ಟಿಂಗ್ ಎದುರಿಸಿದ ಕಾರುಗಳಲ್ಲಿ ಮಾರುತಿ ಸುಜುಕಿ ಇಗ್ನಿಸ್ ಮತ್ತು ವ್ಯಾಗನ್ಆರ್ ಹ್ಯಾಚ್ ಬ್ಯಾಕ್ ಕಾರುಗಳು ಕೂಡಾ ಕಳಪೆ ಪ್ರದರ್ಶನ ನೀಡಿವೆ. ಇಗ್ನಿಸ್ ಮತ್ತು ವ್ಯಾಗನ್ಆರ್ ಕಾರು ಮಾದರಿಗಳು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕೇವಲ 1 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ಕಳಪೆ ಗುಣಮಟ್ಟದ ಉತ್ಪಾದನೆಯೊಂದಿಗೆ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಹಾನಿ ಉಂಟುಮಾಡಲಿವೆ.

Published On - 6:12 pm, Thu, 25 April 24