AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahindra XUV300: ಹೊಸ ಮಾನದಂಡಗಳೊಂದಿಗೆ 2023ರ ಮಹೀಂದ್ರಾ ಎಕ್ಸ್ ಯುವಿ300 ಬಿಡುಗಡೆ

ಮಹೀಂದ್ರಾ ಕಂಪನಿಯು ಹೊಸ ಎಕ್ಸ್ ಯುವಿ300 ನವೀಕೃತ ಆವೃತ್ತಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ರಿಯರ್ ಡ್ರೈವಿಂಗ್ ಎಮಿಷನ್ ಮಾನದಂಡಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

Mahindra XUV300: ಹೊಸ ಮಾನದಂಡಗಳೊಂದಿಗೆ 2023ರ ಮಹೀಂದ್ರಾ ಎಕ್ಸ್ ಯುವಿ300 ಬಿಡುಗಡೆ
ಹೊಸ ಮಾನದಂಡಗಳೊಂದಿಗೆ 2023ರ ಮಹೀಂದ್ರಾ ಎಕ್ಸ್ ಯುವಿ300 ಬಿಡುಗಡೆ
Praveen Sannamani
|

Updated on:Mar 07, 2023 | 7:42 PM

Share

ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ಜಾರಿಗೆ ತರುತ್ತಿರುವ 2ನೇ ಹಂತದ ಬಿಎಸ್ 6 ಜಾರಿಗೆ ತರುತ್ತಿದ್ದು, ಹೊಸ ನಿಯಮ ಜಾರಿಗೆ ಮುನ್ನ ಮಹೀಂದ್ರಾ(Mahindra) ಕಂಪನಿಯು ನವೀಕೃತ ಎಕ್ಸ್ ಯುವಿ300(XUV300) ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಆರ್ ಡಿಇ ನಿಯಮದೊಂದಿಗೆ ಬಾರಿ ಬದಲಾವಣೆ ಪಡೆದುಕೊಂಡಿದ್ದು, ಹೊಸ ಬದಲಾವಣೆಯೊಂದಿಗೆ ತುಸು ದುಬಾರಿಯಾಗಿರಲಿದೆ.

ಎಸ್ ಯುವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್ ಯುವಿ300 ನವೀಕೃತ ಮಾದರಿಯನ್ನ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯಲ್ಲಿ ಕಂಪನಿಯು ಈ ಬಾರಿ ಹಲವಾರು ಬದಲಾವಣೆಗಳನ್ನ ಪರಿಚಯಿಸಿದ್ದು, ಆರ್ ಡಿಇ ಮಾಲಿನ್ಯ ಹೊರಸೂಸುವಿಕೆಯ ಮಾನದಂಡಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ವೆರಿಯೆಂಟ್ ಮತ್ತು ಬೆಲೆ

ಹೌದು, ಮಹೀಂದ್ರಾ ಕಂಪನಿಯು ಎಕ್ಸ್ ಯುವಿ300 ಹೊಸ ಆವೃತ್ತಿಯನ್ನ ಹಿಂದೆಂದಿಗಿಂತಲೂ ಹೆಚ್ಚು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಒಟ್ಟು 14 ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಬೆಸ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.41 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 14.07 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ ಪೆಟ್ರೋಲ್ ವೆರಿಯೆಂಟ್ ಗಳು ರೂ. 15 ಸಾವಿರದಷ್ಟು ದುಬಾರಿಯಾಗಿವೆ. ಹಾಗೆಯೇ ಡೀಸೆಲ್ ವೆರಿಯೆಂಟ್ ಗಳು ಈ ಹಿಂದಿನ ಮಾದರಿಗಿಂತಲೂ ರೂ. 22 ಸಾವಿರದಷ್ಟು ದುಬಾರಿಯಾಗಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್ ಯುವಿ300 ಕಾರು ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ರಿಯರ್ ಡ್ರೈವ್ ಎಮಿಷನ್ ಮಾನದಂಡಗಳನ್ನು ಪೂರೈಸಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೋಡಣೆ ಮಾಡಿದೆ. ಹೊಸ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಮಾದರಿಯು ಹೊಸ ಆರ್ ಡಿಇ ಮಾನದಂಡದೊಂದಿಗೆ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಅತಿ ಕಡಿಮೆ ಮಾಲಿನ್ಯ ಹೊರಸೂಸಲಿವೆ.

ಜೊತೆಗೆ ಹೊಸ ಕಾರು ಮಾದರಿಯು ಇದೀಗ ಶೇ. 20 ರಷ್ಟು ಎಥೆನಾಲ್ ಮಿಶ್ರಿಣದೊಂದಿಗೆ ಚಾಲನೆಯಾಗಲಿದೆ. ಸದ್ಯ ಇಂಧನಗಳಲ್ಲಿ ಶೇ.10 ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಕೇಂದ್ರ ಸರ್ಕಾರವು ಮುಂಬರುವ ಏಪ್ರಿಲ್ 1ರಿಂದ ಶೇ.20 ರಷ್ಟು ಎಥೆನಾಲ್ ಮಿಶ್ರಣ ಮಾಡಲಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಹೊಸ ಕಾರಿಗಳಿಗೂ ರಿಯರ್ ಡ್ರೈವ್ ಎಮಿಷನ್ ಮಾನದಂಡವನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ಕಾರಿನಲ್ಲಿರುವ ಪೆಟ್ರೋಲ್ ಮಾದರಿಯು 1.2 ಲೀಟರ್ ಎಂಜಿನ್ ನೊಂದಿಗೆ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಇದು 109 ಹಾರ್ಸ್ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 1.5 ಲೀಟರ್ ಡೀಸೆಲ್ ಮಾದರಿಯು ಸಹ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಇದು 115 ಹಾರ್ಸ್ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಕಾರಿನಲ್ಲಿ ಕಂಪನಿಯು ಆರು ಏರ್ ಬ್ಯಾಗ್ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಸಿಸ್ಟಂ, ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೇರಿದಂತೆ ಹಲವು ಸೌಲಭ್ಯ ನೀಡಿದೆ.

Published On - 7:38 pm, Tue, 7 March 23