Mahindra Scorpio N: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹೇಗಿದೆ ನೋಡಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಲಿಷ್ಠತೆ!

|

Updated on: Dec 12, 2022 | 6:43 PM

ಮಹೀಂದ್ರಾ ಹೊಸ ಸ್ಕಾರ್ಪಿಯೋ ಎನ್ ಎಸ್ ಯುವಿ ಮಾದರಿಯ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ ಪ್ರಕಟಗೊಂಡಿದ್ದು, ಸುರಕ್ಷತೆಯಲ್ಲಿ ಹೊಸ ಕಾರು ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿದೆ.

Mahindra Scorpio N: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಹೇಗಿದೆ ನೋಡಿ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಲಿಷ್ಠತೆ!
ಮಹೀಂದ್ರಾ ಸ್ಕಾರ್ಪಿಯೋ ಎನ್ ಕ್ರ್ಯಾಶ್ ಟೆಸ್ಟಿಂಗ್
Follow us on

ಹೊಸ ತಲೆಮಾರಿನ ಎಸ್ ಯುವಿ ಮಾದರಿಗಳೊಂದಿಗೆ ಸದ್ದು ಮಾಡುತ್ತಿರುವ ಮಹೀಂದ್ರಾ(Mahindra) ಕಂಪನಿಯು ಹೊಸ ತಲೆಮಾರಿನ ಸ್ಕಾರ್ಪಿಯೋ ಎನ್(Scorpio N) ಸುರಕ್ಷತೆಯಲ್ಲಿ ಗಮನಸೆಳೆಯುತ್ತಿದ್ದು, ಹೊಸ ಕಾರು ಗ್ಲೋಬಲ್ ಎನ್ ಸಿಎಪಿ(NCAP) ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಗರಿಷ್ಠ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡ ಮಹೀಂದ್ರಾ ಮೂರನೇ ಕಾರು ಮಾದರಿ ಇದಾಗಿದ್ದು, ಎಕ್ಸ್ ಯುವಿ300 ಮತ್ತು ಎಕ್ಸ್ ಯುವಿ700 ನಂತರ ಸ್ಕಾರ್ಪಿಯೋ ಎನ್ ಕೂಡಾ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದೆ.

ಹೊಸ ಗ್ಲೋಬಲ್ ಎನ್ ಸಿಎಪಿ ಪ್ರೋಟೋಕಾಲ್‌ ಅಡಿಯಲ್ಲಿ ನಡೆದ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್ ಮಾನದಂಡಗಳನ್ನು ಸಾಕಷ್ಟು ಬದಲಾವಣೆಗೊಳಿಸಲಾಗಿದ್ದು, ಸ್ಕಾರ್ಪಿಯೋ ಎನ್ ಮಾದರಿಯು ಹೊಸ ಮಾನದಂಡಗಳಲ್ಲಿಯೇ ಗರಿಷ್ಠ ರೇಟಿಂಗ್ಸ್ ಪಡೆದುಕೊಂಡಿದೆ. ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಪೆಡೆಸ್ಟ್ರೆನ್ ಪ್ರೊಟೆಕ್ಷನ್, ಪೋಲ್ ಸೈಡ್ ಇಂಪ್ಯಾಕ್ಟ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಸೌಲಭ್ಯಗಳಲ್ಲಿ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದರೆ ಮಾತ್ರ ಹೊಸ ವಾಹನಕ್ಕೆ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಲಾಗುತ್ತದೆ.

ಹಳೆಯ ಪ್ರೋಟೋಕಾಲ್‌ಗಳ ಅಡಿಯಲ್ಲಿ ಸ್ಟಾರ್ ರೇಟಿಂಗ್ ಅನ್ನು ಮುಂಭಾಗದ ಕ್ರ್ಯಾಶ್ ಟೆಸ್ಟಿಂಗ್ ಕಾರ್ಯಕ್ಷಮತೆಯನ್ನು ಆಧರಿಸಿ ರೇಟಿಂಗ್ಸ್ ನೀಡಲಾಗುತ್ತಿತ್ತು. ಆದರೆ ಇದೀಗ ಹೊಸ ಪ್ರೋಟೋಕಾಲ್ ಗಳು ಸಾಕಷ್ಟು ಕಠಿಣಗೊಳಿಸಲಾಗಿದ್ದು, ಸ್ಕಾರ್ಪಿಯೋ ಎನ್ ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 34 ಅಂಕಗಳಿಗೆ 29.25 ಮತ್ತು ಮಕ್ಕಳ ಸುರಕ್ಷತೆಯಲ್ಲಿ 48 ಅಂಕಗಳಿಗೆ 28.94 ಅಂಕಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಭಾರತದಲ್ಲೂ ಬಿಡುಗಡೆಯಾಲಿದೆ ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ನೀಡುವ ಎಂಜಿ 4 ಇವಿ

ಹೊಸ ಕಾರಿನಲ್ಲಿರುವ ಒಟ್ಟಾರೆ ಸುರಕ್ಷಾ ಫೀಚರ್ಸ್ ಮತ್ತು ಕಾರ್ಯಕ್ಷಮತೆ ಆಧರಿಸಿ 5 ಸ್ಟಾರ್ ರೇಟಿಂಗ್ಸ್ ನೀಡಲಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕನಿಷ್ಠ 3 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದುವುದು ಕಡ್ಡಾಯವಾಗಿದೆ. 3 ಸ್ಟಾರ್ ರೇಟಿಂಗ್ಸ್ ಗಿಂತಲೂ ಕಡಿಮೆ ರೇಟಿಂಗ್ಸ್ ಹೊಂದಿದ್ದಲ್ಲಿ ಅಂತಹ ಕಾರುಗಳನ್ನು ಕಳಪೆ ಕಾರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಾರುಗಳ ಸುರಕ್ಷತೆಯನ್ನು ಸುಧಾರಿಸುವುದಕ್ಕಾಗಿ #SaferCarsForIndia ಅಭಿಯಾನದಡಿ ಕ್ರ್ಯಾಶ್ ಟೆಸ್ಟಿಂಗ್ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತಿದ್ದು, ಇದು ಗ್ರಾಹಕರಿಗೆ ಸುರಕ್ಷಿತ ಕಾರುಗಳನ್ನು ಖರೀದಿಸಲು ಸಹಕಾರಿಯಾಗಲಿದೆ.

ಎಸ್ ಯುವಿ ಪ್ರಿಯರ ಸ್ಕಾರ್ಪಿಯೋ ಎನ್

ಮಹೀಂದ್ರಾ ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯು ವಿಶೇಷ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್ಎಲ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಅಪಘಾತಗಳನ್ನು ತಪ್ಪಿಸಲು ನೆರವಾಗುವ ಎಡಿಎಎಸ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತಾ?

ಸ್ಕಾರ್ಪಿಯೋ-ಎನ್ ಮಾದರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ 2.2 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಖರೀದಿಗೆ ಲಭ್ಯವಿವೆ. ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

Published On - 6:39 pm, Mon, 12 December 22