ಹೊಸ ವಾಹನಗಳ ಖರೀದಿಸುವಾಗ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಮಾಲೀಕತ್ವ ಪಡೆದುಕೊಳ್ಳುವುದು ಇದೀಗ ದೊಡ್ಡ ವಿಚಾರವಲ್ಲ. ಆದರೆ ಅದೇ ವಾಹನ ಖರೀದಿಗಾಗಿ ವರ್ಷಗಳ ಕಾಲ ಸಣ್ಣಪುಟ್ಟ ಉಳಿತಾಯ ಮಾಡಿ ಯಾವುದೇ ಸಾಲದ ಹೊರೆಯಿಲ್ಲದೇ ವಾಹನ ಖರೀದಿಸುವುವಾಗ ಆಗುವ ಸಂತಸ ಅಷ್ಟಿಷ್ಟಲ್ಲ. ಹೌದು, ಇಲ್ಲೊಬ್ಬ ಸಣ್ಣ ವ್ಯಾಪಾರಿ ಕೆಲವು ವರ್ಷಗಳಿಂದ ತನ್ನ ವ್ಯಾಪಾರದಲ್ಲಿ ಉಳಿತಾಯವಾಗುತ್ತಿದ್ದ ನಾಣ್ಯಗಳನ್ನು ಕೂಡಿಟ್ಟು ತನ್ನ ಕನಸಿನ ಬೈಕ್ ಖರೀದಿಸಿದ್ದು, ವ್ಯಾಪಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ವ್ಯಕ್ತವಾಗಿದೆ.
ಅಸ್ಸಾಂ ರಾಜ್ಯದ ಕರೀಮ್‌ಗಂಜ್ ಜಿಲ್ಲೆಯ ರಾಮಕೃಷ್ಣ ನಗರ ಪ್ರದೇಶದ ನಿವಾಸಿಯಾಗಿರುವ ಸುರಂಜನ್ ರಾಯ್ ವೃತ್ತಿಯಲ್ಲಿ ಸಣ್ಣ ಮಟ್ಟದ ವ್ಯಾಪಾರಿಯಾಗಿದ್ದು, ತನ್ನ ಕನಸಿನ ಬೈಕ್ ಖರೀದಿಗಾಗಿ ಕಳೆದೆರಡು ವರ್ಷಗಳಿಂದ ವ್ಯಾಪಾರದಿಂದ ಬರುತ್ತಿದ್ದ ಉಳಿತಾಯವನ್ನು ಮಾಡುತ್ತಿದ್ದ. ಸಣ್ಣ ವ್ಯಾಪಾರಿಯಾಗಿರುವುದರಿಂದ ಚಿಲ್ಲರೆ ಹಣ ಹೆಚ್ಚಾಗಿ ಬರುತ್ತಿದ್ದ ಕಾರಣಕ್ಕೆ ಚಿಲ್ಲರೆಯನ್ನೇ ಸಂಗ್ರಹ ಆರಂಭಿಸಿದ್ದ ಸುರಂಜನ್ ರಾಯ್ ಇದೀಗ ರೂ. 50 ಸಾವಿರ ಮುಂಗಡ ಪಾವತಿಸಿ ಹೊಸ ಬೈಕ್ ಖರೀದಿಸಿದ್ದಾರೆ.
ಇದನ್ನೂ ಓದಿ: ಸ್ಮಾರ್ಟ್ಎಕ್ಸ್ ಕನೆಕ್ಟ್ ಟೆಕ್ ಹೊಂದಿರುವ ಟಿವಿಎಸ್ ರೈಡರ್ 125 ಬಿಡುಗಡೆ
ಕರೀಮ್‌ಗಂಜ್ ನಲ್ಲಿರುವ ಟಿವಿಎಸ್ ಮೋಟಾರ್ ಶೋರೂಂನಲ್ಲಿ ಸುರಂಜನ್ ರಾಯ್ ತಮ್ಮ ಹೊಸ ಅಪಾಚೆ 160 4ವಿ ಬೈಕ್ ಖರೀದಿಸಿದ್ದು, ಆರಂಭದಲ್ಲಿ ಬೈಕ್ ಖರೀದಿಗಾಗಿ ನಾಣ್ಯಗಳನ್ನು ನೀಡಲು ಮುಂದಾದಾಗ ಶೋರೂಂ ಸಿಬ್ಬಂದಿಯು ಆರಂಭದಲ್ಲಿ ಏಣಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುವ ಕಾರಣಕ್ಕೆ ನಿರಾಕರಿಸಿದ್ದರು. ತದನಂತರ ಬೈಕ್ ಖರೀದಿಗಾಗಿ ವ್ಯಾಪಾರಿಯ ಸಂಕಲ್ಪವನ್ನು ಅರಿತ ಶೋರೂಂ ಮಾಲೀಕರು ನಾಣ್ಯಗಳ ಮೂಟೆಗಳನ್ನು ಸ್ವಿಕರಿಸಿ ವ್ಯಾಪಾರಿಯ ಇಷ್ಟದ ಬೈಕ್ ವಿತರಣೆ ಮಾಡಿದ್ದಾರೆ.
ಅಪಾಚೆ 160 4ವಿ ಬೈಕ್ ವಿಶೇಷತೆ
ಹೊಸ ಟಿವಿಎಸ್ ಅಪಾಚೆ 160 4ವಿ ಬೈಕ್ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರಂ ಪ್ರಕಾರ ರೂ. 1.12 ಲಕ್ಷದಿಂದ ರೂ. 1.30 ಲಕ್ಷ ಬೆಲೆ ಹೊಂದಿದ್ದು, ಮಧ್ಯಮ ಗಾತ್ರದ ಬೈಕ್ ಮಾದರಿಗಳಲ್ಲಿ ಇದು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಬೈಕ್ ಮಾದರಿಯು 159.7 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 17.3 ಬಿಎಚ್ ಪಿ ಮತ್ತು 14.73 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದನ್ನೂ ಓದಿ: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!
ಆರಾಯದಾಯಕ ರೈಡಿಂಗ್ ವೈಶಿಷ್ಟ್ಯತೆ ಹೊಂದಿರುವ ಹೊಸ ಅಪಾಚೆ 160 4ವಿ ಬೈಕ್ ಮಾದರಿಯು ಸ್ಪೋರ್ಟಿ ಲುಕ್ ಹೊಂದಿದ್ದು, 144 ಕೆ.ಜಿ ತೂಕದೊಂದಿಗೆ 12 ಲೀಟರ್ ಫ್ಯೂಲ್ ಟ್ಯಾಂಕ್, ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಉತ್ತಮವಾದ ರೈಡಿಂಗ್ ಅನುಭವ ಒದಗಿಸುತ್ತದೆ. ಇತ್ತೀಚೆಗೆ ಈ ಬೈಕ್ ಹಲವಾರು ಅಪ್ಡೇಟ್ ಪಡೆದುಕೊಂಡಿದ್ದು, ಅಪಾಚೆ ಸರಣಿಗಾಗಿ ಟಿವಿಎಸ್ ಕಂಪನಿಯು ಸುಧಾರಿತ ಹೆಡ್ ಲ್ಯಾಂಪ್ ಜೊತೆಗೆ ಸಿಗ್ನೆಚೆರ್ ಡೇ ಟೈಮ್ ರನ್ನಿಂಗ್ ಲೈಟ್, ಸ್ಪೆಷಲ್ ಎಡಿಷನ್ ಗಳಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಬ್ಲೂಟೂಥ್ ಫೀಚರ್ಸ್ ನೀಡಲಾಗಿದ್ದು, ಮ್ಯಾಟೆ ಬ್ಲ್ಯಾಕ್ ಬಣ್ಣದೊಂದಿಗೆ ರೆಡ್ ಅಲಾಯ್ ವ್ಹೀಲ್ ಸಾಕಷ್ಟು ಆಕರ್ಷಕವಾಗಿದೆ.
Published On - 12:48 pm, Mon, 31 October 22