ವಿನೂತನ ಫೀಚರ್ಸ್ ಗಳೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಹೊಸದಾಗಿ ವೆಲೋಸಿಟಿ ಎಡಿಷನ್ ಬಿಡುಗಡೆ ಮಾಡಿದೆ.
ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಹೊಸದಾಗಿ ವೆಲೋಸಿಟಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 7.29 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಫ್ರಾಂಕ್ಸ್ ಹೊಸದಾಗಿ ವೆಲೋಸಿಟಿ ಎಡಿಷನ್ ಒಟ್ಟು 14 ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ರೆಡ್ ಹೈಲೆಟ್ಸ್ ನೊಂದಿಗೆ ಹೊಸ ಕಾರು ಮತ್ತಷ್ಟು ಸ್ಪೋರ್ಟಿಯಾಗಿ ಗಮನಸೆಳೆಯಲಿದೆ.
ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ನಲ್ಲಿ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಮಾದರಿಗಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುವುದಕ್ಕಾಗಿ ಫ್ರಂಟ್ ಬಂಪರ್, ಗ್ರೀಲ್, ಹೆಡ್ ಲೈಟ್ಸ್, ರಿಯಲ್ ವ್ಯೂ ಮಿರರ್, ರಿಯರ್ ಸ್ಪಾಯ್ಲರ್ ಮತ್ತು ವೀಲ್ಹ್ ಗಳಲ್ಲಿ ರೆಡ್ ಹೈಲೆಟ್ಸ್ ನೀಡಿದ್ದು, ಒಳಭಾಗದಲ್ಲಿ ಇಲ್ಯೂಮಿನೆಟೆಡ್ ಡೋರ್ ಸೀಲ್ ಮತ್ತು ರೆಡ್ ಡ್ಯಾಶ್ ಮ್ಯಾಟ್ ಹೊಂದಿರಲಿದೆ.
ಇನ್ನುಳಿದಂತೆ ಹೊಸ ಫ್ರಾಂಕ್ಸ್ ವೆಲೋಸಿಟಿ ಎಡಿಷನ್ ನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಲಾಗಿದ್ದು, ಇತ್ತೀಚೆಗೆ ಇದು ಭಾರೀ ಬೇಡಿಕೆಯೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಬಜೆಟ್ ಬೆಲೆಯ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಫ್ರಾಂಕ್ಸ್ ಕಾರು ಬಿಡುಗಡೆಯಾದ ಕೇವಲ 14 ತಿಂಗಳ ಅವಧಿಯಲ್ಲಿ 1.50 ಲಕ್ಷ ಯುನಿಟ್ ಗಳು ಮಾರಾಟಗೊಂಡಿದೆ. ಹೊಸ ಫ್ರಾಂಕ್ಸ್ ಕಾರು ಮಾರುತಿ ಸುಜುಕಿಯ ಬಲೆನೊ ಮತ್ತು ಎಸ್ ಕ್ರಾಸ್ ಕಾರುಗಳ ವಿನ್ಯಾಸ ಮಿಶ್ರಣ ಹೊಂದಿದ್ದು, ಇದು ಸಣ್ಣ ಗಾತ್ರ ಎಸ್ ಯುವಿ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕ್ರಾಸ್ ಓವರ್ ಎಸ್ ಯುವಿ ಮಾದರಿಯಾಗಿ ಗುರುತಿಸಿಕೊಂಡಿರುವ ಫ್ರಾಂಕ್ಸ್ ಕಾರು ವಿವಿಧ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿದೆ. ಇದರಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ ಗರಿಷ್ಠ 22.89 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಹಾಗೆಯೇ ಹೊಸ ಕಾರಿನ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ ಗರಿಷ್ಠ 21.79 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದರಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 20.01 ಕಿ.ಮೀ ನಿಂದ 21.05 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದರೊಂದಿಗೆ ಹೊಸ ಕಾರು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, ಇದರಲ್ಲಿ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 88.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮಾದರಿಯು 98.06 ಹಾರ್ಸ್ ಪವರ್ ಮತ್ತು 147.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.