ಮಾರುತಿ ಸುಜುಕಿ ಆಲ್ಟೋ ಕೆ10, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಡ್ರೀಮ್ ಸೀರಿಸ್ ಬಿಡುಗಡೆ

|

Updated on: Jun 06, 2024 | 10:22 PM

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಆಲ್ಟೋ ಕೆ10, ಸೆಲೆರಿಯೊ, ಎಸ್-ಪ್ರೆಸ್ಸೊ ಕಾರುಗಳಲ್ಲಿ ಹೊಸದಾಗಿ ಡ್ರೀಮ್ ಸೀರಿಸ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿ ಆಲ್ಟೋ ಕೆ10, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಡ್ರೀಮ್ ಸೀರಿಸ್ ಬಿಡುಗಡೆ
ಮಾರುತಿ ಸುಜುಕಿ ಕಾರುಗಳು
Follow us on

ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಆಲ್ಟೋ ಕೆ10, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಕಾರುಗಳಲ್ಲಿ ಹೊಸದಾಗಿ ಡ್ರೀಮ್ ಸೀರಿಸ್ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಆವೃತ್ತಿಗಳು ಆಕರ್ಷಕ ಬೆಲೆಗೆ ಹೆಚ್ಚಿನ ಮಟ್ಟದ ಫೀಚರ್ಸ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಈ ತಿಂಗಳಾಂತ್ಯದ ತನಕ ಮಾತ್ರ ಲಭ್ಯವಿರಲಿವೆ.

ಹೊಸ ಡ್ರೀಮ್ ಆವೃತ್ತಿಗಳಲ್ಲಿ ಸಾಮಾನ್ಯ ಆವೃತ್ತಿಗಿಂತಲೂ ಕೆಲವು ಆಕರ್ಷಕ ಫೀಚರ್ಸ್ ನೀಡಲಾಗಿದ್ದು, ಬೆಲೆ ಕೂಡಾ ಆಕರ್ಷಕವಾಗಿವೆ. ಹೊಸ ಆವೃತ್ತಿಗಳನ್ನು ಮಾರುತಿ ಸುಜುಕಿ ಕಂಪನಿಯು ಎಕ್ಸ್ ಶೋರೂಂ ಪ್ರಕಾರ ರೂ. 4.99 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಫೀಚರ್ಸ್ ಜೊತೆಗೆ ಹೆಚ್ಟುವರಿಯಾಗಿ ರೀವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮ್ಯಾಟೆ ಬ್ಲ್ಯಾಕ್ ಕ್ಲಾಡಿಂಗ್, ಫ್ರಂಟ್ ಅಂಡ್ ರಿಯರ್ ಸ್ಕೀಡ್ ಪ್ಲೇಟ್, ಪನೊನಿಯರ್ ಮ್ಯೂಸಿಕ್ ಸಿಸ್ಟಂ ಸೌಲಭ್ಯಗಳಿರಲಿವೆ.

ಆಲ್ಟೋ ಕೆ10, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಡ್ರೀಮ್ ಸೀರಿಸ್ ಆವೃತ್ತಿಗಳನ್ನು ಸದ್ಯಕ್ಕೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದ್ದು, ಹೊಸ ಆವೃತ್ತಿಯ ಖರೀದಿಯೊಂದಿಗೆ ಗ್ರಾಹಕರು ಆಲ್ಟೋ ಕೆ10 ಕಾರಿನಲ್ಲಿ ರೂ. 49 ಸಾವಿರ, ಎಸ್-ಪ್ರೆಸ್ಸೊ ಕಾರು ಖರೀದಿಯ ಮೇಲೆ ರೂ. 63 ಸಾವಿರ ಮತ್ತು ಸೆಲೆರಿಯೊ ಕಾರು ಖರೀದಿಯಿಂದ ರೂ. 58 ಸಾವಿರ ಮೌಲ್ಯದ ಆಫರ್ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ಮಾರುತಿ ಸುಜುಕಿ ಕಂಪನಿಯು ಬಲೆನೊ, ಫ್ರಾಂಕ್ಸ್, ವ್ಯಾಗನ್ಆರ್, ಆಲ್ಟೋ ಕೆ10, ಬ್ರೆಝಾ, ಸಿಯಾಜ್ ಮತ್ತು ಎಕ್ಸ್ಎಲ್6 ಕಾರುಗಳ ಎಜಿಎಸ್(ಆಟೋ ಗೇರ್ ಶಿಫ್ಟ್) ಆವೃತ್ತಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಆಯ್ದ ಕಾರುಗಳ ಎಲ್ಲಾ ಆಟೋಮ್ಯಾಟಿಕ್ ಆವೃತ್ತಿಗಳಿಗೂ ಅನ್ವಯಿಸುವಂತೆ ರೂ. 5 ಸಾವಿರ ಬೆಲೆ ಇಳಿಕೆ ಮಾಡಿದ್ದು, ಇದು ಆಟೋಮ್ಯಾಟಿಕ್ ಆವೃತ್ತಿಗಳ ಮಾರಾಟ ಹೆಚ್ಚಿಸಲು ನೆರವಾಗಲಿದೆ ಎನ್ನಬಹುದು. ಜೊತೆಗೆ ಆಟೋಮ್ಯಾಟಿಕ್ ಆವೃತ್ತಿಗಳ ಮಾರಾಟ ಹೆಚ್ಚಿನ ಮತ್ತೊಂದು ಮಹತ್ವದ ಬದಲಾವಣೆ ಮಾಡಿರುವ ಮಾರುತಿ ಸುಜುಕಿ ಕಂಪನಿಯು ಮ್ಯಾನುವಲ್ ಮಾದರಿಗಳಿಂತಲೂ ಹೆಚ್ಚಿನ ಇಂಧನ ದಕ್ಷತೆಯನ್ನು ಎಎಂಟಿ ಮಾದರಿಗಳಲ್ಲಿ ನೀಡಲಾಗುತ್ತಿದೆ.