Maruti Suzuki: ಮಾರುತಿ ಸುಜುಕಿಯ ಈ ಕಾರಿನ ಮೇಲೆ ರೂ. 1 ಲಕ್ಷ ಆಫರ್ ಘೋಷಣೆ

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ದಸರಾ ಮತ್ತು ದೀಪಾವಳಿಗಾಗಿ ಭರ್ಜರಿ ಆಫರ್ ನೀಡುತ್ತಿದ್ದು, ಆಯ್ದ ಕಾರುಗಳ ಮೇಲೆ ಹೆಚ್ಚಿನ ಆಫರ್ ಘೋಷಣೆ ಮಾಡಿದೆ.

Maruti Suzuki: ಮಾರುತಿ ಸುಜುಕಿಯ ಈ ಕಾರಿನ ಮೇಲೆ ರೂ. 1 ಲಕ್ಷ ಆಫರ್ ಘೋಷಣೆ
ಮಾರುತಿ ಸುಜುಕಿ ಜಿಮ್ನಿ
Follow us
|

Updated on:Oct 24, 2023 | 8:55 PM

ದೇಶದ ಅಗ್ರ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ನೆಕ್ಸಾ (NEXA) ಕಾರುಗಳ ಖರೀದಿ ಮೇಲೆ ದಸರಾ ಮತ್ತು ದೀಪಾವಳಿ ಕೊಡುಗೆಗಳನ್ನು ಘೋಷಿಸಿದ್ದು, ಜಿಮ್ನಿ (Jimny) ಆಫ್ ರೋಡ್ ಎಸ್ ಯುವಿ ಖರೀದಿಯ ಮೇಲೂ ಭರ್ಜರಿ ಆಫರ್ ನೀಡುತ್ತಿದೆ. ಹೊಸ ಆಫರ್ ನಲ್ಲಿ ಜಿಮ್ನಿ ಕಾರು ಖರೀದಿಸುವ ಗ್ರಾಹಕರಿಗೆ ರೂ. 50 ಸಾವಿರ ಕ್ಯಾಶ್ ಬ್ಯಾಕ್ ಆಫರ್ ನೊಂದಿಗೆ ರೂ. 50 ಸಾವಿರದಷ್ಟು ಎಕ್ಸ್ ಚೆಂಜ್ ಮತ್ತು ಲೊಯಾಲಿಟಿ ಆಫರ್ ಸಿಗಲಿದೆ.

ಜಿಮ್ನಿ ಕಾರಿನ ಜೆಟಾ ವೆರಿಯೆಂಟ್ ಖರೀದಿಸುವ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಆಫರ್ ಲಭ್ಯವಿದ್ದು, ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಎರಡೂ ಆವೃತ್ತಿಗಳ ಮೇಲೂ ಆಫರ್ ಪಡೆದುಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಜಿಮ್ನಿ ಕಾರು ಮಾದರಿಯು ಜೆಟಾ ಮತ್ತು ಅಲ್ಫಾ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಜೆಟಾ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 12.74 ಲಕ್ಷದಿಂದ ರೂ. 13.94 ಲಕ್ಷ ಬೆಲೆ ಹೊಂದಿದೆ.

Maruti Suzuki Jimny (2)

ಇನ್ನು ಹೊಸ ಜಿಮ್ನಿ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಕಡಿಮೆ ಬೆಲೆ ಜೊತೆಗೆ ವಿನೂತನ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ವಿಶೇಷವಾಗಿ ಆಫ್ ರೋಡ್ ಪ್ರಿಯರಿಗಾಗಿ ನಿರ್ಮಾಣಗೊಂಡಿರುವ ಹೊಸ ಕಾರು ಯುವಕರ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದೆ. ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ದಾಖಲಿಸಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 3 ಸಾವಿರ ಯುನಿಟ್ ವಿತರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್..

ಹೊಸ ಜಿಮ್ನಿ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿ ಫೋರ್ ಸಿಲಿಂಡರ್ ಕೆ15ಬಿ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿವೆ. ಇವು ಗರಿಷ್ಠ 103.4 ಹಾರ್ಸ್ ಪವರ್ ಮತ್ತು 134.2 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇವು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 16.94 ಕಿ.ಮೀ ಮೈಲೇಜ್ ನೀಡುತ್ತವೆ.

Maruti Suzuki Jimny (2)

ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಜಿಮ್ನಿ ಕಾರು ಒಟ್ಟು 3,985 ಎಂಎಂ ಉದ್ದಳತೆಯೊಂದಿಗೆ 1,645 ಎಂಎಂ ಅಗಲ, 1,720 ಎಂಎಂ ಎತ್ತರ, 2,590 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಪಡೆದುಕೊಂಡಿದ್ದು, ಸಿಗ್ನೆಚರ್ ಜಿಮ್ನಿ ಗ್ರಿಲ್, ಫ್ಲಾಟ್ ಆಗಿರುವ ಕ್ಲಾಮ್‌ಶೆಲ್ ಬಾನೆಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಜೊತೆಗೆ ವಾಷರ್, 15 ಇಂಚಿನ ಅಲಾಯ್ ವ್ಹೀಲ್ ಜೊತೆ 195/80 ಅಳತೆಯ ಆಫ್ ರೋಡ್ ಟೈಯರ್ ಜೋಡಣೆ ಹೊಂದಿದೆ.

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಹಾಗೆಯೇ ಹೊಸ ಕಾರಿನ ಒಳಭಾಗದ ವಿನ್ಯಾಸ ಕೂಡಾ ಗ್ರಾಹಕರನ್ನು ಸೆಳೆಯಲಿದ್ದು, ಆಫ್ ರೋಡ್ ಪ್ರಯಾಣಕ್ಕೆ ಪೂರಕವಾದ ಆಸನ ಸೌಲಭ್ಯದೊಂದಿಗೆ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಮತ್ತು ಪ್ರೀಮಿಯಂ ಸೌಂಡ್ ಸಿಸ್ಟಂ ಜೋಡಣೆ ಹೊಂದಿದೆ. ಇದರೊಂದಿಗೆ ಜಿಮ್ನಿ ಕಾರಿನಲ್ಲಿ ಹಲವಾರು ಸುರಕ್ಷಾ ಫೀಚರ್ಸ್ ಜೋಡಣೆ ಮಾಡಿದ್ದು, ಹೊಸ ಕಾರಿನಲ್ಲಿ ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೊಗ್ರಾಂ, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫ್ರೆಷನ್ಷಲ್, ಹಿಲ್ ಹೋಲ್ಡ್ ಕಂಟ್ರೊಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯಲ್ ವ್ಯೂ ಕ್ಯಾಮೆರಾ ಸೌಲಭ್ಯಗಳಿವೆ.

Published On - 5:33 pm, Tue, 24 October 23