Maruti Suzuki Brezza CNG: ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಮಾರುತಿ ಬ್ರೆಝಾ ಸಿಎನ್‌ಜಿ!

|

Updated on: Oct 27, 2022 | 12:10 PM

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್ ಯುವಿ ಬ್ರೆಝಾದಲ್ಲಿ ಹೊಸದಾಗಿ ಸಿಎನ್ ಜಿ ಆವೃತ್ತಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.

Maruti Suzuki Brezza CNG: ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಮಾರುತಿ ಬ್ರೆಝಾ ಸಿಎನ್‌ಜಿ!
Maruti Suzuki Brezza CNG
Follow us on

ಸಿಎನ್ ಜಿ(CNG) ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಸಿಎನ್ ಜಿ ವೆರಿಯೆಂಟ್ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಹೊಸದಾಗಿ 2022ರ ಬ್ರೆಝಾ ಮಾದರಿಯಲ್ಲಿ ಸಿಎನ್ ಜಿ ವೆರಿಯೆಂಟ್ ಪರಿಚಯಿಸುವ ಸಿದ್ದತೆ ನಡೆಸಿದೆ. ಹೊಸ ಕಾರು ಬಿಡುಗಡೆಗಾಗಿ ಕಂಪನಿಯು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

ಡೀಸೆಲ್ ಕಾರುಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಹೊಸ ವಾಹನಗಳ ಖರೀದಿದಾರರು ಹೆಚ್ಚು ಇಂಧನ ಕಾರ್ಯಕ್ಷಮತೆ ಹೊಂದಿರುವ ಸಿಎನ್ ಜಿ ವೆರಿಯೆಂಟ್ ಗಳನ್ನು ಆಯ್ಕೆ ಮಾಡುತ್ತಿದ್ದು, ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಬ್ರೆಝಾ ಕಾರಿನಲ್ಲೂ ಸಿಎನ್ ಜಿ ಮಾದರಿಯ ಬಿಡುಗಡೆಗೆ ಮುಂದಾಗಿದೆ.

Maruti Suzuki Brezza CNG

ಸಿಎನ್‌ ಜಿ ಕಾರಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಸಿಎನ್‌ಜಿ ಕಾರುಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಇತರೆ ಕಾರು ಉತ್ಪಾದನಾ ಕಂಪನಿಗಳು ಸಹ ತಮ್ಮ ಕಾರು ಮಾದರಿಗಳನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತಿವೆ. ಸಿಎನ್‌ಜಿ ಕಾರುಗಳು ಪೆಟ್ರೋಲ್ ಕಾರುಗಳೊಂದಿಗೆ ಸಂಯೋಜನೆ ಹೊಂದಿದ್ದು, ಇವು ಡೀಸೆಲ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಜೊತೆಗೆ ಪರಿಸರ ಸ್ನೇಹಿ ಮಾದರಿಗಳಾಗಿವೆ.

ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?

ಪರ್ಯಾಯ ಇಂಧನ ವ್ಯವಸ್ಥೆಯಾಗಿ ಸಂಕುಚಿತ ನೈಸರ್ಗಿಕ ಅನಿಲವನ್ನು (ಸಿಎನ್‌ಜಿ) ಬಳಕೆ ಮಾಡಲಾಗುತ್ತಿದ್ದು, ಇದು ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಸಹ ಸಾಕಷ್ಟು ಕಡಿಮೆಯಾಗಿರುವುದಲ್ಲದೆ ಮಿತವ್ಯಯವೆನಿಸಿಕೊಂಡಿದೆ. ಆದರೆ ಸಿಎನ್ ಜಿ ಕಾರುಗಳು ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಎಂಜಿನ್ ಕಾರ್ಯಕ್ಷಮತೆ ಸ್ವಲ್ಪ ಕಡಿಮೆಯಾಗಿರಲಿದ್ದರೂ ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

2022ರ ಬ್ರೆಝಾ ಕಾರು ಸದ್ಯ ಮಾರುಕಟ್ಟೆಯಲ್ಲಿ ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆಂಟ್‌ಗಳನ್ನು ಹೊಂದಿದ್ದು, ಇದರಲ್ಲಿ ವಿಎಕ್ಸ್ಐ ಇಲ್ಲವೆ ಜೆಡ್ಎಕ್ಸ್ಐ ವೆರಿಯೆಂಟ್ ಗಳಲ್ಲಿ ಸಿಎನ್ ಜಿ ಆಯ್ಕೆ ಹೊಂದಿರಬಹುದಾಗಿದೆ. 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಅಳವಡಿಸಲಿದ್ದು, ಸಿಎನ್ ಜಿ ಕಿಟ್ ಪರಿಣಾಮ ಕಾರಿನ ಬೂಟ್ ಸ್ಪೆಸ್ ಸ್ಥಳಾವಕಾಶವನ್ನು ಕಡಿತಗೊಳಿಸಲಾಗುತ್ತದೆ.

ಬ್ರೆಝಾ ಕಾರು ಪೆಟ್ರೋಲ್ ಮಾದರಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 7.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.96 ಲಕ್ಷ ಬೆಲೆ ಪಡೆದುಕೊಂಡಿದ್ದು, ಸಿಎನ್ ಜಿ ಮಾದರಿಯು ಸಾಮಾನ್ಯ ಕಾರಿಗಿಂತ ರೂ. 80 ಸಾವಿರದಿಂದ ರೂ. 1.20 ಲಕ್ಷದಷ್ಟು ದುಬಾರಿಯಾಗಿರಲಿದೆ. ಸಾಮಾನ್ಯ ಮಾದರಿಯಲ್ಲಿ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಈ ಮೂಲಕ ಕಾರಿನ ಎಂಜಿನ್ 104.6 ಬಿಎಚ್‌ಪಿ ಮತ್ತು 137 ಎನ್ಎಂ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಇದನ್ನೂ ಓದಿ: ಪ್ರತಿ ಚಾರ್ಜಗೆ 500 ಕಿ.ಮೀ ಮೈಲೇಜ್ ನೀಡುವ ಇವಿ ಕಾರು ಬಿಡುಗಡೆ ಮಾಡಲಿದೆ ಓಲಾ ಎಲೆಕ್ಟ್ರಿಕ್

ಆದರೆ ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ತುಸು ಕಡಿಮೆ ಪರ್ಫಾಮೆನ್ಸ್ ಹೊಂದಿರಲಿದ್ದು, ಹೆಚ್ಚಿನ ಮೈಲೇಜ್ ಖಾತ್ರಿಪಡಿಸುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ. ಸಾಮಾನ್ಯ ಪೆಟ್ರೋಲ್ ಮಾದರಿಯ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 19.80 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 20.15 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸಿಎನ್ ಜಿ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25ರಿಂದ 28 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಹೊಂದಿದೆ.

Published On - 8:29 pm, Wed, 26 October 22