Force Gurkha: 5 ಡೋರ್ ವರ್ಷನ್ ಗೂರ್ಖಾ ಎಸ್ ಯುವಿ ಬಿಡುಗಡೆ ಮಾಡಲಿದೆ ಫೋರ್ಸ್ ಮೋಟಾರ್ಸ್!
ಫೋರ್ಸ್ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್ ಯುವಿ ಆವೃತ್ತಿಯಾದ ಗೂರ್ಖಾದಲ್ಲಿ 5 ಡೋರ್ ವರ್ಷನ್ ಬಿಡುಗಡೆ ಸಿದ್ದವಾಗುತ್ತಿದ್ದು, ಹೊಸ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.
ಫೋರ್ಸ್ ಮೋಟಾರ್ಸ್(Force Motors) ಕಂಪನಿಯು ಗೂರ್ಖಾ(Gurkha) 5 ಡೋರ್ ವರ್ಷನ್ ಬಿಡುಗಡೆಗಾಗಿ ಕಳೆದ ಒಂದು ವರ್ಷದಿಂದ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಹೊಸ ಕಾರನ್ನು ಕಂಪನಿಯು 2023ರ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಿದ್ದತೆ ನಡೆಸಿದೆ. ಹೊಸ ಕಾರು 5 ಡೋರ್ ಸೌಲಭ್ಯದೊಂದಿಗೆ 7 ಸೀಟರ್ ಮತ್ತು 9 ಸೀಟರ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಹೊಸ ಕಾರು ಎಂಪಿವಿ ಕಾರು ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಗೂರ್ಖಾ ಆಫ್ ರೋಡ್ ಎಸ್ ಯುವಿಯಲ್ಲಿ ಫೋರ್ಸ್ ಮೋಟಾರ್ಸ್ ಕಂಪನಿಯು 3 ಡೋರ್ ವರ್ಷನ್ ಮಾತ್ರ ಮಾರಾಟಗೊಳಿಸುತ್ತಿದ್ದು, ಇದೀಗ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ 5 ಡೋರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. 5 ಡೋರ್ ಸೌಲಭ್ಯದೊಂದಿಗೆ ಉತ್ತಮ ಒಳಾಂಗಣ ಸೌಲಭ್ಯ ಪಡೆದುಕೊಳ್ಳಲಿರುವ ಹೊಸ ಕಾರು ವೈಯಕ್ತಿಕ ಬಳಕೆಗೆ ಮತ್ತು ಫ್ಲಿಟ್ ಬಳಕೆದಾದರಿಗೂ ಖರೀದಿಗೆ ಲಭ್ಯವಾಗಬಹುದಾಗಿದೆ.
ಇದನ್ನೂ ಓದಿ: ಪ್ರತಿ ಚಾರ್ಜಗೆ 500 ಕಿ.ಮೀ ಮೈಲೇಜ್ ನೀಡುವ ಇವಿ ಕಾರು ಬಿಡುಗಡೆ ಮಾಡಲಿದೆ ಓಲಾ ಎಲೆಕ್ಟ್ರಿಕ್
ಹೊಸ ಕಾರಿನಲ್ಲಿ ವಿಸ್ತರಿತ ವ್ಹೀಲ್ ಬೆಸ್ ಪರಿಣಾಮ ಮೂರನೇ ಸಾಲಿನ ಆಸನವು ಉತ್ತಮ ಸ್ಥಳಾವಕಾಶ ಪಡೆದುಕೊಂಡಿದ್ದು, 7 ಸೀಟರ್ ಮಾದರಿಯು 2+3+2 ಸೀಟ್ ಲೇಔಟ್ ಹೊಂದಿದ್ದರೆ 9 ಸೀಟರ್ ಮಾದರಿಯು 2+3+4 ಸೀಟರ್ ಲೇಔಟ್ ಹೊಂದಿರಲಿದೆ. 9 ಸೀಟರ್ ನಲ್ಲಿ ಕಂಪನಿಯು ಮೂರನೇ ಸಾಲಿನಲ್ಲಿ ಸ್ಟ್ಯಾಂಡರ್ಡ್ ಸೀಟ್ ಲೇಔಟ್ ನಲ್ಲಿ ಮುಖಾಮುಖಿಯಾಗುವ ಬೆಂಚ್ ಸೀಟ್ ನೀಡಲಾಗುತ್ತಿದೆ.
ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ತಲೆಮಾರಿನ ಗೂರ್ಖಾ ಎಸ್ ಯುವಿಯು ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿದ್ದು, 3 ಡೋರ್ ವಿನ್ಯಾಸದೊಂದಿಗೆ 4 ಆಸನಗಳ ಸೌಲಭ್ಯ ಹೊಂದಿದೆ. ಒಂದೇ ಒಂದು ವೆರಿಯೆಂಟ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಸ್ಟ್ಯಾಂಡರ್ಡ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.75 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಹೈಬ್ರಿಡ್ ಎಂಜಿನ್ ಪ್ರೇರಿತ ಟೊಯೊಟಾ ಇನೋವಾ ಹೈಕ್ರಾಸ್ ಟೀಸರ್ ಪ್ರಕಟ!
ಇದೀಗ ಬಿಡುಗಡೆಯಾಗಲಿರುವ 5 ಡೋರ್ ಮಾದರಿಯು 3 ಡೋರ್ ಮಾದರಿಯಲ್ಲಿನ ಕೆಲವು ಪ್ರೀಮಿಯಂ ಫೀಚರ್ಸ್ ಕಳೆದುಕೊಳ್ಳಲಿದ್ದು, ಇದು ವಿವಿಧ ವೆರಿಯೆಂಟ್ ಗಳೊಂದಿಗೆ ರೂ. 14 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ. ಹೊಸ ಕಾರಿನಲ್ಲಿ ಕಂಪನಿಯು 4×4 ಡ್ರೈವ್ ಸಿಸ್ಟಂ ಬದಲಾಗಿ 4×2 ಡ್ರೈವ್ ಸಿಸ್ಟಂ ನೀಡಬಹುದಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ 2.6 ಲೀಟರ್ ಡೀಸೆಲ್ ಎಂಜಿನ್ ಆಯ್ಕಯೇ ಹೊಸ ಮಾದರಿಯಲ್ಲಿ ಮುಂದುವರಿಸಬಹುದಾಗಿದೆ.
ಈ ಮೂಲಕ ಹೊಸ ಕಾರು ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಥಾರ್ 5 ಡೋರ್ ವರ್ಷನ್ ಮತ್ತು ಮಾರುತಿ ಸುಜುಕಿ ಜಿಮ್ನಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಬಹುದಾಗಿದ್ದು, ಎಂಪಿವಿ ಕಾರು ಖರೀದಿದಾರರಿಗೆ ಹೊಸ ಕಾರು ಪ್ರಮುಖ ಆಕರ್ಷಣೆಯಾಗಲಿದೆ.
Published On - 1:43 pm, Thu, 27 October 22