Flex Fuel: ಕಡಿಮೆ ನಿರ್ವಹಣಾ ವೆಚ್ಚದ ಮಾರುತಿ ಸುಜುಕಿ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯಲ್ ಆವೃತ್ತಿ ಅನಾವರಣ

|

Updated on: Feb 05, 2024 | 9:22 PM

ದೇಶದ ಅಗ್ರಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಭವಿಷ್ಯದ ಕಾರು ಮಾದರಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಸಾಂಪ್ರದಾಯಿಕ ಇಂಧನ ಚಾಲಿತ ಕಾರುಗಳಿಗೆ ಪೈಪೋಟಿಯಾಗಿ ಫ್ಲೆಕ್ಸ್ ಫ್ಯೂಯಲ್ ಚಾಲಿತ ಕಾರು ಮಾದರಿಯನ್ನು ಅನಾವರಣಗೊಳಿಸಿದೆ.

Flex Fuel: ಕಡಿಮೆ ನಿರ್ವಹಣಾ ವೆಚ್ಚದ ಮಾರುತಿ ಸುಜುಕಿ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯಲ್ ಆವೃತ್ತಿ ಅನಾವರಣ
ಫ್ಲೆಕ್ಸ್ ಫ್ಯೂಯಲ್ ವ್ಯಾಗನ್ಆರ್ ಅನಾವರಣ
Follow us on

ಸಾಂಪ್ರದಾಯಿಕ ಇಂಧನಗಳ ಮೇಲೆ ಅವಲಂಬನೆ ತಗ್ಗಿಸಲು ಪರ್ಯಾಯ ಇಂಧನ ಚಾಲಿತ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದ್ದು, ಎಲೆಕ್ಟ್ರಿಕ್, ಸಿಎನ್ ಜಿ ಜೊತೆಗೆ ಇದೀಗ ಫ್ಲೆಕ್ಸ್ ಫ್ಯೂಯಲ್ (Flex Fuel) ಚಾಲಿತ ಕಾರುಗಳ ಬಿಡುಗಡೆ ಪ್ರಮುಖ ಕಾರು ಕಂಪನಿಗಳು ಸಿದ್ದವಾಗುತ್ತಿವೆ. ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿಯು ಸಹ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯಲ್ ಆವೃತ್ತಿಯನ್ನು ಭಾರತ್ ಮೊಬಿಲಿಟಿ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ.

ಭವಿಷ್ಯದ ಕಾರು ಮಾದರಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಸಾಂಪ್ರಾದಾಯಿಕ ಇಂಧನ ಮಾದರಿಗಳ ಕಾರುಗಳ ಜೊತೆಗೆ ಪರ್ಯಾಯ ಇಂಧನ ಕಾರುಗಳನ್ನು ಹೆಚ್ಚಿಸುವ ಗುರಿಹೊಂದಿದ್ದು, ಫ್ಲೆಕ್ಸ್ ಫ್ಯೂಯಲ್ ಕಾರುಗಳು ಅತಿಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಪರಿಸರ ಸ್ನೇಹಿಯಾಗಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಕೇಂದ್ರದಿಂದ ಮಹತ್ವದ ಯೋಜನೆ

ಫ್ಲೆಕ್ಸ್ ಫ್ಯೂಯಲ್ ಆಧರಿತ ವಾಹನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಂಬನೆ ತಗ್ಗುವುದರ ಜೊತೆಗೆ ಎಥೆನಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಹುದಾಗಿದೆ. ಫ್ಲೆಕ್ಸ್ ಫ್ಯೂಯಲ್ ಕಾರುಗಳು ಪೆಟ್ರೋಲ್ ಜೊತೆಗೆ ಎಥನಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಹೊಂದಿರಲಿದ್ದು, ಇದು ಪೆಟ್ರೋಲ್ ಬೆಲೆಯನ್ನು ಸಹ ಪರಿಣಾಮಕಾರಿ ತಗ್ಗಿಸಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಜೊತೆಗೆ ಶೇ. 10 ರಷ್ಟು ಎಥೆನಾಲ್ ಸಮ್ಮಿಶ್ರಣ ಮಾಡಲಾಗುತ್ತಿದ್ದು, ಇದು 2025ರ ವೇಳೆಗೆ ಶೇ. 20 ಕ್ಕೆ ಹೆಚ್ಚಿಸುವ ಗುರಿಹೊಂದಲಾಗಿದೆ. ಇದರೊಂದಿಗೆ ಫ್ಲೆಕ್ಸ್ ಫ್ಯೂಯಲ್ ವಾಹನಗಳು ಶೇ.50ರಷ್ಟು ಪೆಟ್ರೋಲ್ ಜೊತೆ ಶೇ. 50 ರಷ್ಟು ಎಥೆನಾಲ್ ಸಮ್ಮಿಶ್ರಣದೊಂದಿಗೆ ಚಾಲನೆಗೊಳ್ಳಲಿದ್ದು, ಎಥೆನಾಲ್ ಬಳಕೆ ಹೆಚ್ಚಾದರೆ ಅದು ನೇರವಾಗಿ ರೈತರಿಗೂ ಲಾಭವಾಗಲಿದೆ.

ಎಥೆನಾಲ್ ಆಲ್ಕೋಹಾಲ್ ಆಧಾರಿತ ಜೈವಿಕ ಇಂಧನವಾಗಿದ್ದು, ಎಥೆನಾಲ್ ಅನ್ನು ಕಬ್ಬು, ಮೆಕ್ಕೆಜೋಳ, ಗೋಧಿ ಸೇರಿದಂತೆ ವಿವಿಧ ಬೆಳೆಗಳಿಂದ ಹೇರಳವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಎಥೆನಾಲ್ ಬಳಕೆ ಹೆಚ್ಚಾದರೆ ರೈತರ ಆದಾಯ ಕೂಡಾ ಹೆಚ್ಚಳವಾಗುವ ನೀರಿಕ್ಷೆಗಳಿದ್ದು, ಕಚ್ಚಾ ತೈಲ ಆಮದು ತಗ್ಗಿದರೆ ದೇಶದ ಅಭಿವೃದ್ದಿಗೂ ಸಹಕಾರಿಯಾಗಲಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಕಡ್ಡಾಯವಾಗಿರುವ ಫಾಸ್ಟ್‌ಟ್ಯಾಗ್ ಕೆವೈಸಿ ಮಾಡುವುದು ಹೇಗೆ?

ಆದರೆ ಫ್ಲೆಕ್ಸ್ ಫ್ಯೂಯಲ್ ಆಧರಿತ ಕಾರುಗಳ ಬಳಕೆಯಲ್ಲೂ ಕೆಲವು ನ್ಯೂನತೆಗಳಿವೆ. ಇವು ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಂತಲೂ ಕಡಿಮೆ ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆ ಹೊಂದಿದೆ. ಫ್ಲೆಕ್ಸ್ ಫ್ಯೂಯಲ್ ವಾಹನಗಳ ಮೈಲೇಜ್ ಪ್ರಮಾಣವು ಸಾಮಾನ್ಯ ವಾಹನಗಳಿಂತ ಶೇ. 6 ರಿಂದ ಶೇ. 10 ರ ತನಕ ಕಡಿಮೆಯಾಗುವ ಸಾಧ್ಯತೆಗಳಿದ್ದರೂ ಅಗ್ಗದ ಬೆಲೆಗೆ ಇಂಧನ ಖರೀದಿಸಬಹುದಾಗಿದೆ.

Published On - 9:21 pm, Mon, 5 February 24