FASTag KYC: ಹೆದ್ದಾರಿಯಲ್ಲಿ ಕಡ್ಡಾಯವಾಗಿರುವ ಫಾಸ್ಟ್‌ಟ್ಯಾಗ್ ಕೆವೈಸಿ ಮಾಡುವುದು ಹೇಗೆ?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಸರಳವಾಗಿಸಲು ಒಂದು ವಾಹನ, ಒಂದು ಫಾಸ್ಟ್ ಟ್ಯಾಗ್ ಜಾರಿಗೆ ಮುಂದಾಗಿದ್ದು, ಇದಕ್ಕಾಗಿ ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್ (FASTag) ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನಗಳ ಮಾಲೀಕರಿಗೆ ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುತ್ತಿದ್ದು, ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕೊನೆಯ ದಿನಾಂಕ ಇದೀಗ ಮತ್ತೆ ವಿಸ್ತರಿಸಿದೆ. ಈ ಹಿಂದಿನ ಪ್ರಕಟಣೆಯಲ್ಲಿ ಜನವರಿ 31ರಂದು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗಡುವು ನೀಡಿದ್ದ ಹೆದ್ದಾರಿ ಪ್ರಾಧಿಕಾರವು ಇದೀಗ ಫೆಬ್ರವರಿ 29ಕ್ಕೆ ಕೊನೆಯ ಗಡುವು ವಿಸ್ತರಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಘೋಷಣೆ ಮಾಡಿರುವ ಗಡುವು ಪೂರ್ಣಗೊಂಡ ನಂತರ ಕೆವೈಸಿ ಪೂರ್ಣಗೊಳಿಸದ ಫಾಸ್ಟ್‌ಟ್ಯಾಗ್ ಖಾತೆಗಳು ನಿಷ್ಕ್ರಿಯವಾಗಲಿದ್ದು, ಕೆವೈಸಿ ಇಲ್ಲದ ಫಾಸ್ಟ್‌ಟ್ಯಾಗ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.
ಇನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣಾ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಾಲನೆಯನ್ನು ಒದಗಿಸಲು ಈ ಉಪಕ್ರಮವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್‌ಟ್ಯಾಗ್ ಬಳಕೆಯನ್ನು ತಗ್ಗಿಸುವುದು ಮತ್ತು ಫಾಸ್ಟ್‌ಟ್ಯಾಗ್‌ಗಳ ದುರುಪಯೋಗವನ್ನು ತಡೆಯಲು ಇದು ಸಹಕಾರಿಯಾಗಲಿದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ
ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ KYC ಅಪ್‌ಡೇಟ್ ಗೆ ಅಗತ್ಯವಿರುವ ದಾಖಲೆಗಳ ಪಟ್ಟಿ
ಚಾಲನಾ ಪರವಾನಿಗೆ, ವಾಹನದ ನೋಂದಣಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ ಗಾತ್ರದ ಎರಡು ಛಾಯಾಚಿತ್ರಗಳು
ಇದನ್ನೂ ಓದಿ: ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನ ಹೆಚ್ಚಳಕ್ಕಾಗಿ ಕೇಂದ್ರದಿಂದ ಮಹತ್ವದ ಯೋಜನೆ
ಫಾಸ್ಟ್‌ಟ್ಯಾಗ್ KYC ಅನ್ನು ಆನ್‌ಲೈನ್‌ನಲ್ಲಿ ನವೀಕರಿಸುವುದು ಹೇಗೆ? ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.
* ಫಾಸ್ಟ್‌ಟ್ಯಾಗ್ ವಿತರಕರ ಅಧಿಕೃತ ವೆಬ್‌ಸೈಟ್ ಅಥವಾ ನೀವು ಫಾಸ್ಟ್‌ಟ್ಯಾಗ್ ಅನ್ನು ಖರೀದಿಸಿದ ಬ್ಯಾಂಕ್‌ಗೆ ಭೇಟಿ ನೀಡಿ. * ವೆಬ್‌ಸೈಟ್‌ನಲ್ಲಿ “KYC” ಅಥವಾ “ಗ್ರಾಹಕ ಲಾಗಿನ್” ವಿಭಾಗವನ್ನು ಕ್ಲಿಕ್ಕಿಸಿ. * ನಿಮ್ಮ ಪಾರ್ಸ್ ವರ್ಡ್ ಬಳಸಿಕೊಂಡು ಲಾಗ್ ಇನ್ ಮಾಡಿ (ಸಾಮಾನ್ಯವಾಗಿ ನಿಮ್ಮ ಫಾಸ್ಟ್ಯಾಗ್ ವ್ಯಾಲೆಟ್ ಐಡಿ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ ಒಳಗೊಂಡಿರುತ್ತದೆ). * ಈಗ KYC ವಿಭಾಗಕ್ಕೆ ಹೋಗಿ ಮತ್ತು ನಿಮ್ಮ ಹೆಸರು, ವಿಳಾಸ ಮತ್ತು ವಾಹನದ ಅಗತ್ಯ ವಿವರಗಳನ್ನು ಒದಗಿಸಿ. * ನಿಮ್ಮ ID ಪುರಾವೆಗಳು, ವಿಳಾಸ ಪುರಾವೆ ಮತ್ತು ವಾಹನ ನೋಂದಣಿ ದಾಖಲೆಗಳನ್ನು ಒಳಗೊಂಡಿರುವ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಅಥವಾ ಸ್ಪಷ್ಟ ಚಿತ್ರಗಳನ್ನು ಅಪ್‌ಲೋಡ್ ಮಾಡಿ. * ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನಮೂದಿಸಿದ ಮಾಹಿತಿಯನ್ನು ಮತ್ತು ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ. * ಇದೀಗ ನಿಮ್ಮ KYC ಮಾಹಿತಿಯನ್ನು ವಿತರಕರು ಪರಿಶೀಲಿಸಿ ಅನುಮೋದಿಸಿದರೆ ನಿಮ್ಮ KYC ಪ್ರಕ್ರಿಯೆ ಪೂರ್ಣವಾಗುತ್ತದೆ. * ಮತ್ತೊಂದು ಮುಖ್ಯ ವಿಚಾರವೆಂದರೆ ಫಾಸ್ಟ್ ಟ್ಯಾಗ್ ಅನ್ನು ಒದಗಿಸುವ ವಿತರಕರು ಅಥವಾ ಬ್ಯಾಂಕ್ ಗಳನ್ನು ಅನ್ನು ಅವಲಂಬಿಸಿ ಕೆವೈಸಿ ಪ್ರಕ್ರಿಯೆಯಲ್ಲಿನ ಕೆಲವು ನಿರ್ದಿಷ್ಟ ಹಂತಗಳು ಬದಲಾಗಬಹುದಾಗಿದೆ.