ತಿರುಪತಿ: ತಿರುಮಲ ಬೆಟ್ಟದ ಮೇಲೆ ಪರಿಸರದ ಸಂರಕ್ಷಣೆಗಾಗಿ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯು (ಟಿಟಿಡಿ) ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಒಂದೆಡೆ ತಿರುಮಲದಲ್ಲಿ ಸಂಚರಿಸುವ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸಲು ಟಿಟಿಡಿ ಯೋಜನೆ ಸಿದ್ಧಪಡಿಸಿದೆ. ಮತ್ತೊಂದೆಡೆ, ಮೇಘಾ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು (Megha Engineering) 10 ಎಲೆಕ್ಟ್ರಿಕ್ ಬಸ್‌ಗಳನ್ನು ಟಿಟಿಡಿಗೆ (Tirumala Tirupati Devasthanams -TTD) ಕೊಡುಗೆಯಾಗಿ ನೀಡಿದೆ.
ಶ್ರೀ ವೇಂಕಟೇಶ್ವರ ಸ್ವಾಮಿಗೆ 10 ಎಲೆಕ್ಟ್ರಿಕ್ ಬಸ್ ಗಳ ಕೊಡುಗೆ ನೀಡಿರುವುದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕ್ರಾಂತಿಕಾರಿ ಪ್ರಯೋಗವಾಗಿದೆ. ಗ್ರೂಪ್ ಅಧ್ಯಕ್ಷ ಮೇಘಾ ಕೃಷ್ಣಾರೆಡ್ಡಿ ಅವರು ಟಿಟಿಡಿಗೆ ದೇಣಿಗೆ ನೀಡಲು ಅವಕಾಶ ನೀಡಿದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಕಂಪನಿ (Olectra Green Teck company CMD) ಸಿಎಂಡಿ ಪ್ರದೀಪ್ ತಿಳಿಸಿದ್ದಾರೆ.
ತಿರುಮಲದಲ್ಲಿ ಪರಿಸರ ಸಂರಕ್ಷಣೆಗೆ ಟಿಟಿಡಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಒಂದೆಡೆ ತಿರುಮಲದಲ್ಲಿ ಸಂಚರಿಸುವ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸಲು ಟಿಟಿಡಿ ಯೋಜನೆ ಸಿದ್ಧಪಡಿಸಿದೆ. ಮತ್ತೊಂದೆಡೆ, ಮೇಘಾ ಇಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು (Megha Engineering & Infrastructures Limited -MEIL) 10 ಎಲೆಕ್ಟ್ರಿಕ್ ಬಸ್‌ಗಳನ್ನು ಟಿಟಿಡಿಗೆ ಕೊಡುಗೆಯಾಗಿ ನೀಡಿದೆ. ಭಕ್ತರ ಅನುಕೂಲಕ್ಕಾಗಿ ತಿರುಮಲದಲ್ಲಿ 12 ಉಚಿತ ಬಸ್‌ಗಳು ಓಡುತ್ತಿವೆ. ತಿರುಮಲದಲ್ಲಿ ಪರಿಸರ ಸಂರಕ್ಷಣೆಗಾಗಿ ಡೀಸೆಲ್ ಬಸ್ ಗಳ ಬದಲಿಗೆ ಎಲೆಕ್ಟ್ರಿಕ್ ಬಸ್ ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ ಎಲೆಕ್ಟ್ರಿಕ್ ಬಸ್ ಗಳನ್ನು ನೀಡುವಂತೆ ಈ ಹಿಂದೆ ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿಯ ಸಿಎಂಡಿ ಪ್ರದೀಪ್ ಅವರನ್ನು ಕೋರಿದ್ದೆ ಎಂದು ಹೇಳಿದರು. ಇದರೊಂದಿಗೆ ಭಕ್ತರಿಗಾಗಿ 10 ಬಸ್‌ಗಳನ್ನು ನೀಡಲು ಮೇಘಾ ಸಂಸ್ಥೆ ಮುಂದಾಗಿದೆ. ಮೇಘಾ ಸಂಸ್ಥೆಯು ಟಿಟಿಡಿಗೆ ರೂ.15 ಕೋಟಿ ಮೌಲ್ಯದ ಬಸ್ ಗಳನ್ನು ನೀಡುತ್ತಿದೆ ಎಂದರು. ಭಕ್ತರಿಗಾಗಿ ದೇಣಿಗೆ ನೀಡಿದ ಮೇಘಾ ಕೃಷ್ಣಾ ರೆಡ್ಡಿ ಅವರಿಗೆ ಸುಬ್ಬಾರೆಡ್ಡಿ ಧನ್ಯವಾದ ಅರ್ಪಿಸಿದರು. ಮೇಲಾಗಿ ಮೇಘಾ ಸಂಸ್ಥೆಯ ವ್ಯವಹಾರ ಮತ್ತಷ್ಟು ಬೆಳೆಯಲಿ ಎಂದು ತಿಮ್ಮಪ್ಪನನ್ನು ಪ್ರಾರ್ಥಿಸಿರುವುದಾಗಿ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಒಲೆಕ್ಟ್ರಾ ಸಿಎಂಡಿ ಪ್ರದೀಪ್ ಅವರು ಟಿಟಿಡಿಗೆ ದೇಣಿಗೆ ನೀಡಲು ಅವಕಾಶ ಮಾಡಿಕೊಟ್ಟ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಟಿಟಿಡಿ ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತಿಸಲು ಯೋಜಿಸಿದೆ
ಮತ್ತೊಂದೆಡೆ, ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಮಾತನಾಡಿ, ತಿರುಮಲದಲ್ಲಿ ಸಂಚರಿಸುವ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಟಿಟಿಡಿ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಬ್ಯಾಂಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಟ್ಯಾಕ್ಸಿ ಚಾಲಕರಿಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದರು. ತಿರುಮಲದಲ್ಲಿ ಟ್ಯಾಕ್ಸಿಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಒಂದು ಹೆಜ್ಜೆ ಮುಂದಿಡಲಾಗುತ್ತಿದೆ. ಆದರೆ ಟ್ಯಾಕ್ಸಿ ಚಾಲಕರು ದುಬಾರಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ, ಟಿಟಿಡಿ ಅವರಿಗೆ ಬೆಂಬಲವನ್ನು ನೀಡುತ್ತದೆ. ಟ್ಯಾಕ್ಸಿ ಚಾಲಕರಿಗೆ ಟಿಟಿಡಿ ಒಂದು ಬಾರಿ ಹೂಡಿಕೆ ಮೂಲಕ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು. 10ರಿಂದ 12 ಪ್ರಯಾಣಿಕರ ಸಾಮರ್ಥ್ಯದ ವಾಹನಗಳನ್ನು ತಯಾರಿಸುವ ಕಂಪನಿಗಳಿಂದ ಟೆಂಡರ್ ಆಹ್ವಾನಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದರು.
Published On - 11:36 am, Sat, 22 October 22